#ಜನ ಇವರನ್ನ ಮೂಲೆ ಗದ್ದೆ ಸ್ವಾಮಿಗಳು ಅಂತ ಕರೀತಾರೆ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಎಣ್ಣಿ ಹೊಳೆ ಮತ್ತು ಶರಾವತಿ ನದಿ ಸಂಗಮದಲ್ಲಿ ಇವರ ಆಶ್ರಮವಿದೆ.#
ವಿಶೇಷ ಎಂದರೆ ಇವರು ಪ್ರಚಾರದಿಂದ ದೂರ, ಆಧ್ಯಾತ್ಮದ ಜೊತೆ ಕೃಷಿಗೆ ಪ್ರದಾನ್ಯ ನೀಡಿದ ಸ್ವಾಮಿಗಳು . ಇವರಲ್ಲಿ ಒಂದು ತಪಶಕ್ತಿ ಇದೆ ಅಂತ ಅನೇಕರು ನಂಬುತ್ತಾರೆ, ತಮ್ಮ ಕಷ್ಟಕ್ಕೆ ಇವರಲ್ಲಿ ಹೋದರೆ ಪರಿಹಾರ ದೊರಕುತ್ತೆ ಅನ್ನುತ್ತಾರೆ.
ಈ ಭಾಗದಲ್ಲಿ ಅನೇಕ ವಷ೯ದಿಂದ ಸ್ವತಃ ಜೀಪು ಚಾಲನೆ ಮಾಡಿಕೊಂಡು ಭಕ್ತರ ಮನೆಗೆ ಪೂಜೆಗೆ ಹೋಗುತ್ತಿದ್ದರು, ಇತ್ತೀಚಿಗೆ ಭಕ್ತರು ಸದರಿ ಜೀಪ್ ಚಾಲನಯೋಗ್ಯವಲ್ಲವೆಂದು ಕಾರು ಕೊಡಿಸಿದ್ದಾರೆ.
ಇವರ ಮಠಕ್ಕೆ ಈಗ ಉತ್ತರಾಧಿಕಾರಿ ನೇಮಕ, ಲಿಂಗೈಕ್ಯ ಹಿಂದಿನ ಸ್ವಾಮಿಗಳ ಶಿಲಾ ಮಂಟಪ ಲೋಕಾಪ೯ಣೆಯನ್ನ ಹೊಸನಗರ ತಾಲ್ಲೂಕಿನ ಭಕ್ತರು ಅಧ್ದೂರಿಯಾಗಿ ಇದೇ ತಿಂಗಳು 28ರಂದು ಹಮ್ಮಿಕೊಂಡಿದ್ದಾರೆ.
Comments
Post a Comment