Blog number 865. ವಿಜ್ಞಾನಿಗಳಲ್ಲಿ ಮತ್ತು ಸಂಶೋದಕರಲ್ಲಿರುವ ಮಾನವೀಯತೆ ಕಳಕಳಿಯ ವೈದ್ಯ ಸಹೋದರರಾದ ಡಾಕ್ಟರ್ ಪ್ರೀತಂ ಮತ್ತು ಡಾಕ್ಟರ್ ಚೇತನ್ ರಿಗೆ ಇವರ ತಂದೆ ಜನಪ್ರಿಯ ಸರ್ಕಾರಿ ಆಸ್ಪತ್ರೆ ವೈದ್ಯರಾಗಿದ್ದ ಡಾಕ್ಟರ್ ಈಶ್ವರಪ್ಪರ ಪ್ರಭಾವ ಕಾರಣ ಆದ್ದರಿಂದ ಈಗಿನ ಪೈಪೋಟಿ ವೈದ್ಯಕೀಯ ಉದ್ಯೋಗದ ವ್ಯಾಪಾರಿ ಮನೋಭಾವಕ್ಕೆ ಹೊರತಾಗಿದ್ದಾರೆ.
#ಶಿವಮೊಗ್ಗ_ಜಿಲ್ಲೆಯ_ಡಯಾಬಿಟೀಸ್_ನವರಿಗೆ_ಶುಭಸುದ್ದಿ. #ಶಿವಮೊಗ್ಗದಲ್ಲಿ_ಡಯಾಬಿಟೀಸ್_ರಿವಸ೯ಲ್_ಅಭಿಯಾನ #ಶಿವಮೊಗ್ಗದ_ಐಲೆಟ್ಸ್_ಹಾಸ್ಪಿಟಲ್_ಡಾಕ್ಟರ್_ಪ್ರೀತಂರಿಂದ #ಸಂಪೂರ್ಣ_ಡಯಾಬಿಟೀಸ್_ನಿಂದ_ಮುಕ್ತರಾಗುವ_ಅವಕಾಶ. ನನಗೆ 2009ರಲ್ಲಿ ಡಯಾಬಿಟೀಸ್ ನನ್ನ 44 ನೇ ವರ್ಷದಲ್ಲಿ ಪ್ರಾರಂಭ ಆಗಿತ್ತು ಆಗ ಡಾ.ನಾಗೇಂದ್ರ (ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಮಾಲಿಕರು) ಮಾಗ೯ದರ್ಶನದಲ್ಲಿ ಡಾ.ಪ್ರೀತಂ ನನಗೆ ಡಯಾಬಿಟಿಕ್ ಚಿಕಿತ್ಸೆ ಪ್ರಾರಂಬಿಸಿದರು ಅವತ್ತಿನಿಂದಲೇ ಡಾ. ಪ್ರೀತಂ ಪರಿಚಿತರು. ಇವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಮೂಲದವರು ಇವರ ತಂದೆ ಡಾ.ಬಿ.ಈಶ್ವರಪ್ಪನವರು ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ ಊರಲ್ಲೆಲ್ಲಾ ಜನಪ್ರಿಯ ಡಾಕ್ಟರ್ ಆದವರು, ಇವರು ಮನಸ್ಸು ಮಾಡಿದ್ದರೆ ರಾಮಕೃಷ್ಣ ಹೆಗ್ಗಡೆ ಸರ್ಕಾರದಲ್ಲಿ ಮಂತ್ರಿ ಆಗಿರುತ್ತಿದ್ದರು. ಬಳ್ಳಾರಿ ಜಿಲ್ಲೆಯ ವಿದಾನ ಸಭಾ ಕ್ಷೇತ್ರದಿಂದ ಜನತಾ ಪಕ್ಷದಿಂದ ಸ್ವರ್ದಿಸುವ ಅವಕಾಶ ಡಾ. ಈಶ್ವರಪ್ಪರು ತಿರಸ್ಕರಿಸಿದ್ದು ಇತಿಹಾಸ.ಇವರು ನಿವೃತ್ತರಾದ ಮೇಲೂ ಶಿವಮೊಗ್ಗದ ಜೈಲ್ ರಸ್ತೆಯಲ್ಲಿನ ಇವರ ಕ್ಲೀನಿಕ್ ಬಡವರಿಗೆ ಜನಸಾಮಾನ್ಯರಿಗೆ ಅತ್ಯಾಪ್ತ ಚಿಕಿತ್ಸಾಲಯ ಆಗಿತ್ತು, ಕಳೆದ ವರ್ಷ (21-5-2021) ಇಹಲೋಕ ತ್ಯಜಿಸಿದ್ದಾರೆ. ಇವರ ಮೊದಲ ಪುತ್ರ #ಡಾ_ಚೇತನ್_ಬಿ. ಶಿವಮೊಗ್ಗದ ತಿಲಕ್‌ನಗರದ ದರ್ಗಾ ಕಾಂಪ್ಲೆಕ್ಸ್ ನ...