Blog number 934. ಕರ್ನಾಟಕ ರಾಜ್ಯ ಅಯ್ಯಪ್ಪ ಸ್ವಾಮಿ ಗುರುಸ್ವಾಮಿಗಳ ಸಂಘದ ಸ್ಥಾಪಕ ಅಧ್ಯಕ್ಷ ಶಿವಮೊಗ್ಗ ರೋಜಾ ಷಣ್ಮುಗಂ ಅವರಿಗೆ ಶ್ರದ್ಧಾಂಜಲಿಗಳು
#ಶಿವಮೊಗ್ಗದ_ರೋಜಾಷಣ್ಮುಗಂ_ಇನ್ನು_ನೆನಪು_ಮಾತ್ರ. #ಅಯ್ಯಪ್ಪಸ್ವಾಮಿಯ_ಪರಮಭಕ್ತ #ರಾಜ್ಯ_ಅಯ್ಯಪ್ಪಸ್ವಾಮಿ_ಗುರುಸ್ವಾಮಿಗಳ_ಸಂಘಟನೆ_ಮಾಡಿದ್ದಾರೆ. #ಇವತ್ತು_ಶಿವಮೊಗ್ಗನಂದನ್_ಹಾಕಿದ_ಪೋಸ್ಟನಿಂದ_ಗೊತ್ತಾಯಿತು #ಎರೆಡು_ವರ್ಷದ_ಹಿಂದೆ_ನನ್ನ_ಕಛೇರಿಗೆ_ಬಂದು_ಆಶ್ರೀವಾದ_ಮಾಡಿದ್ದರು. #ಶ್ರದ್ದಾಂಜಲಿಯೊಂದಿಗೆ_ಅವತ್ತಿನ_ನನ್ನ_ಲೇಖನ_ಇನ್ನೊಮ್ಮೆ https://arunprasadhombuja.blogspot.com/search?q=%E0%B2%B0%E0%B3%8B%E0%B2%9C%E0%B2%BE ರೋಜಾ ಷಣ್ಮುಗಂರ ನೆನಪಿನಲ್ಲಿ. #ಗುಲಾಬಿಹೂವಿನಂತಹ_ಮನಸ್ಸಿನ_ರೋಜಾಷಣ್ಮುಗಂ ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಶಿವಮೊಗ್ಗ ಭದ್ರಾವತಿ ಮಹಾನಗರ ಪಾಲಿಕೆ ಹೊಸದಾಗಿ ರಚಿಸಿದಾಗ ಅವರ ನೀಲಿಗಣ್ಣಿನ ಹುಡುಗನOತಿದ್ದ ಮಲ್ಲಿಕಾಜು೯ನ ರಾವ್ ಮೇಯರ್ ಆಗಿ ನಾಮ ನಿದೆ೯ಶನ ಮಾಡಿದ್ದು ಇತಿಹಾಸ ಆಗ ಕಾಪೊ೯ರೇಟರ್ ಆಗಿ ರೋಜ ಷಣ್ಮುಗಂ ಕೂಡ ಆಯ್ಕೆ ಮಾಡಿದ್ದರು. ರೋಜಾ ಸ್ವಾಮಿಯವರು punctual ಮತ್ತು ಶಿಸ್ತಿನ ವ್ಯಕ್ತಿತ್ವದವರು ಹಾಗಾಗಿ ಬಂಗಾರಪ್ಪರಿಗೆ ಇವರು ಅಚ್ಚುಮೆಚ್ಚು. ನಂತರ ಆದ್ಯಾತ್ಮದ ಬಗ್ಗೆ ಹೆಚ್ಚು ಒಲವು ಕಾಲ ಮೀಸಲಿಟ್ಟರು ಈಗ ವಿಶ್ವಮಟ್ಟದಲ್ಲಿ ಪ್ರಖ್ಯಾತರಾಗಿರುವ #ರವಿಶಂಕರ್_ಗುರೂಜಿ ಆಗ ಶಿವಮೊಗ್ಗದಲ್ಲಿ ಇವರ ವೆಸ್ಪಾ ಸ್ಕೂಟರ್ ನಲ್ಲಿ ಇವರ ಹಿಂದಿನ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ಬೆಜ್ಜವಳ್ಳಿ ಅಯ್ಯಪ್ಪ ...