Skip to main content

Posts

Showing posts with the label Lilliput

BN 3424.Lilliput story

#ಲಿಲ್ಲಿಪುಟ್_ಪಠ್ಯ_ಪುಸ್ತಕದಲ್ಲಿ_ಓದಿದ_ನೆನಪಿರಬಹುದು #ಗಲಿವರ್ಸ್_ಟ್ರಾವೆಲ್ಸನಲ್ಲಿ_ಬರುವ_ದ್ವೀಪ #ಅಲ್ಲಿನ_ನಿವಾಸಿಗಳು_ಕೇವಲ_ಆರು_ಇಂಚು_ಎತ್ತರ. #LILLIPUT #jonathanswift #gulliverstravels  #kannadatext #irish    70ರ ದಶಕದಲ್ಲಿ ಪ್ರೌಡಶಾಲೆಗಳ ಕನ್ನಡ ಭಾಷೆಯ ಪಠ್ಯ ಪುಸ್ತಕದಲ್ಲಿ ಇದು ಪಠ್ಯವಾಗಿತ್ತು ಇದನ್ನು ಕೇಳಿದವರಿಗೆ ಓದಿದವರಿಗೆ ಅಷ್ಟೇ ಅಲ್ಲ ಪಾಠ ಮಾಡುವ ಶಿಕ್ಷಕರಿಗೂ ಇದು ಕಾಲ್ಪನಿಕ ಅಂತ ಅನ್ನಿಸುತ್ತಿರಲಿಲ್ಲ.   ನನ್ನ ಅಣ್ಣ ಅಕ್ಕಂದಿರ ಪಠ್ಯಪುಸ್ತಕದ ಈ ಪಾಠ ಅವರು ಓದುವಾಗ ನನಗೆ ಪದೇ ಪದೇ ಕೇಳುವ ಮನಸ್ಸಾಗುತ್ತಿತ್ತು ಕೇಳಿದ ನಂತರ ಅದು ಪದೇ ಪದೇ ನೆನಪಾಗಿ ಕನಸಿನಲ್ಲೂ ಬರುತ್ತಿತ್ತು.    ಈ ಕಾಲ್ಪನಿಕ ಕಥೆಯ ಲೇಖಕ ಜೊನಾಥನ್ ಸ್ವಿಫ್ಟ್ (ಜನನ 30 ನವೆಂಬರ್ 1667 - ಮರಣ19 ಅಕ್ಟೋಬರ್ 1745) ಒಬ್ಬ ಆಂಗ್ಲೋ-ಐರಿಶ್ ಬರಹಗಾರ, ಪ್ರಬಂಧಕಾರ, ವಿಡಂಬನಕಾರ ಮತ್ತು ಆಂಗ್ಲಿಕನ್ ಪಾದ್ರಿಯಾಗಿದ್ದರು. ಗಲಿವರ್ಸ್ ಟ್ರಾವೆಲ್ಸ್‌ನಲ್ಲಿ  ಲಿಲ್ಲಿಪುಟ್ ಒಂದು ಭೂಮಿಯಾಗಿದ್ದು ಅಲ್ಲಿ ನಿವಾಸಿಗಳು ಕೇವಲ ಆರು ಇಂಚು ಎತ್ತರವಿರುತ್ತಾರೆ.  ಅವರು ಗಲಿವರ್ಸ್ ಟ್ರಾವೆಲ್ಸ್ (1726) ಎಂಬ ವಿಡಂಬನಾತ್ಮಕ ಪುಸ್ತಕವನ್ನು ಬರೆದರು , ಅದು ಅವರ ಅತ್ಯಂತ ಪ್ರಸಿದ್ಧ ಪ್ರಕಟಣೆಯಾಯಿತು ಮತ್ತು ಕಾಲ್ಪನಿಕ ದ್ವೀಪವಾದ ಲಿಲ್ಲಿಪುಟ್ ಅನ್ನು ಜನಪ್ರಿಯಗೊಳಿಸಿತು.  ಲಿಲಿಪಟ್"ಜೊನಾಥ...