Skip to main content

Posts

Showing posts with the label Sridhar Hulthikoppa president Shimoga district Ediga sanga

Blog number 1339.ಶ್ರೀಧರ ಹುಲ್ತಿಕೊಪ್ಪ ಮುಖ್ಯಮಂತ್ರಿ ಬಂಗಾರಪ್ಪರ ಕಾಲದಲ್ಲಿ ಕಂಪ್ಯೂಟರ್ ನಂತಹ ನೆನಪಿನ ಶಕ್ತಿಯ ಅತ್ಯಂತ ಬುದ್ದಿವಂತ ಪಿ.ಎ. ಆಗಿದ್ದವರು.

#ಶ್ರೀಧರ್_ಹುಲ್ತಿಕೊಪ್ಪ #ಅಧ್ಯಕ್ಷರು #ಶಿವಮೊಗ_ಜಿಲ್ಲಾ_ಆರ್ಯ_ಈಡಿಗರ_ಸಂಘ #ಬ೦ಗಾರಪ್ಪನವರು_ಮುಖ್ಯಮಂತ್ರಿ_ಆಗಿದ್ದಾಗ_ಅವರ_PA_ಆಗಿದ್ದವರು. #ಅಪಾರ_ನೆನಪಿನ_ಶಕ್ತಿಯ_ನಡೆದಾಡುವ_ಕಂಪ್ಯೂಟರ್ #ಪುತ್ರಿಯ_ವಿವಾಹ_ಆಮಂತ್ರಣ_ನೀಡಲು_ಇವತ್ತು_ಬಂದಿದ್ದರು.    ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಅವರ ಆಪ್ತ ಬಳಗದಲ್ಲಿ ಶ್ರೀಧರ್ ಅತ್ಯಂತ ಕಿರಿಯ ವಯಸ್ಸಿನ ಯುವಕ ಆದರೆ ಮುಖ್ಯಮಂತ್ರಿ ಬಂಗಾರಪ್ಪನವರು ತಮ್ಮ ಆಡಳಿತದಲ್ಲಿ, ರಾಜ್ಯದಾದ್ಯಂತ ಪಕ್ಷ ಸಂಘಟನೆಯಲ್ಲಿ, ಕ್ಯಾಬಿನೆಟ್ ಮಂತ್ರಿಗಳ ಕೋಆರ್ಡಿನೇಟ್ ಮಾಡುವಲ್ಲಿ, ತಮ್ಮ ಸ್ವಕ್ಷೇತ್ರ ಸೊರಬದ ನಿತ್ಯ ಆಗು ಹೋಗುಗಳಲ್ಲಿ ಮತ್ತು ಅವರ ದೈನಂದಿನ ಪ್ರವಾಸ - ಸಭೆ - ಸಮಾರಂಭಗಳಿಗೆ ಯುವಕ ಶ್ರೀಧರ್ ಗೆ ಹೆಚ್ಚು ಅವಲಂಬಿಸಿದ್ದರು.   ಈಗೆಲ್ಲಾ ಕಂಪ್ಯೂಟರ್ ಗಳಿದೆ, ಮೊಬೈಲ್ ಪೋನ್ ಗಳು ಬಂದಿದೆ ಆದರೆ 1990 ರ ದಶಕದಲ್ಲಿ ಅಧ್ಯಾವುದು ಇಲ್ಲದ ಕಾಲ ಅದರಲ್ಲೂ ಬಂಗಾರಪ್ಪನವರದ್ದು ಆಡಳಿತ- ರಾಜಕಾರಣಗಳಲ್ಲಿ ವಿಪರೀತ ವೇಗದ ಮಲ್ಟಿಟಾಸ್ಕ್ ಇರುವಂತ ಮುಖ್ಯಮಂತ್ರಿ ಆದ್ದರಿಂದ ಅವರ ವೇಗಕ್ಕೆ ಹೊಂದುವ ಸಾಮರ್ಥ್ಯ ಇರುವಂತವರು ವಿರಳಾತಿವಿರಳ ಅದರಲ್ಲಿ ಶ್ರೀಧರ್ ಹುಲ್ತಿಕೊಪ್ಪ ಅವರಲ್ಲಿ ಅಂತಹ ಸಾಮರ್ಥ್ಯ ಇತ್ತು.     ದೊಡ್ಡ ದೊಡ್ಡ ಹಿರಿಯ ಐಎಸ್ - ಐಪಿಸ್ ಅಧಿಕಾರಿಗಳ, ಮಂತ್ರಿ ಮಹೋದಯರುಗಳ, ವಿರೋದ ಪಕ್ಷದ ಮುಖಂಡರುಗಳ, ಕಾಂಗ್ರೇಸ್ ಪಕ್ಷದ ದುರೀಣರುಗಳ ಪೋನ್ ನ...