Skip to main content

Posts

Showing posts with the label Corana lockdown Dairy 2020.Letter number 37.

Blog number 1541. ಕೊರಾನಾ ಲಾಕ್ ಡೌನ್ ಡೈರಿ -2020.ಲೆಟರ್ ನಂಬರ್ 37. (19=ಮೇ=2020)

ಕೊರಾನಾ ಲಾಕ್ ಡೌನ್ ಡೈರಿ -2020               ಲೆಟರ್ ನಂಬರ್- 37            ದಿನಾ೦ಕ: 19 -ಮೇ -2020 #ಲಾಕ್_ಡೌನ್_4_ಕೊರಾನ_ಹರಡಲು_ಫ್ರೀಪಾಸ್.        * ಇಷ್ಟು ದಿನದ ನಿಯOತ್ರಣ ಮುಂಜಾಗೃತೆಯನ್ನ ಅಪಹಾಸ್ಯ ಮಾಡಿದಂತೆ ಲಾಕ್ ಡೌನ್ -4 ರ ವಿನಾಯತಿಗಳು.    ಈ ಕಾಯಿಲೆಗೆ ಔಷದಿ ಕಂಡು ಹಿಡಿದಿಲ್ಲ ಅಲ್ಲಿ ತನಕ ನಮ್ಮದು ತಂತಿ ಮೇಲಿನ ನಡುಗೆ, ಇಲ್ಲಿವರೆಗೆ ನಮ್ಮ ನಮ್ಮ ಮಿತಿಯ ನಿಯ೦ತ್ರಣ ಇನ್ನೂ ಮುಂದೂ ನೀರಿಕ್ಷಿಸಲು ಸಾಧ್ಯವಿಲ್ಲ.   ಯಾಕೆಂದರೆ ಅನೇಕ ರಾಜ್ಯಗಳು ಕೇಂದ್ರ ಸಕಾ೯ರ ವಿನಾಯಿತಿ ನೀಡಿದರೂ ಪರಿಸ್ಥಿತಿಯ ಗಂಬೀರತೆ ನೋಡಿ ಮೇ ತಿಂಗಳ 31 ರವರೆಗೆ ಲಾಕ್ ಡೌನ್ ಮುಂದುವರಿಸಿದೆ.    ಆದರೆ ಕನಾ೯ಟಕ ರಾಜ್ಯದಲ್ಲಿ ಮಾತ್ರ ಎಲ್ಲಾ ರೀತಿಯ ವಿನಾಯಿತಿ ನೀಡಿರುವುದು ಮಾತ್ರ ಅಪಾಯಕಾರಿ ನಡೆ ಆಗಿದೆ.    ಇದು ಮುಂದಿನ ದಿನದಲ್ಲಿ ರಾಜ್ಯದ ಮುಖ್ಯಮ೦ತ್ರಿ ಯಡೂರಪ್ಪರವರು ಪರಿಸ್ಥಿತಿ ನಿಯ೦ತ್ರಣ ಕೈ ತಪ್ಪಿದರೆ ಹೊಣೆಗಾರರಾಗ ಬೇಕಾದರು ಆಶ್ಚಯ೯ವಿಲ್ಲ.   ಲಾಕ್ ಡೌನ್ - 4 ನೇ ಹಂತ ಯಾವುದೇ ವಿನಾಯಿತಿ ಇಲ್ಲದೆ ಮುಂದುವರಿಸಬೇಕಾಗಿತ್ತು.   ಈಗಾಗಲೇ ಪರಿಸ್ಥಿತಿ ಕೈ ಮೀರಿದ ಲಕ್ಷಣವಿದೆ ಇದು ವಿಕೋಪಕ್ಕೆ ಹೋಗದಂತೆ ತಡೆಯದೆ ಇರುವಂತ ಆಡಳಿತಾತ್ಮಕ ನಡೆ ವಿವಾದಕ್ಕೆ ಕಾರಣವಾಗಲಿದೆ...