Skip to main content

Posts

Showing posts with the label 2011 My seven days Bullock cart rally for public awareness of Right to Information and Lokayukta in Sagar and Hosanagar taluk

2011 ರ ನನ್ನ ಎತ್ತಿನಗಾಡಿ ಯಾತ್ರೆ, ಸಾಗರ ಮತ್ತು ಹೊಸನಗರ ತಾಲ್ಲೂಕಿನಾದ್ಯಂತ ಏಳು ದಿನಗಳ ಕಾಲ ಸುಮಾರು 360 ಕಿ.ಮಿ ಜನ ಜಾಗೃತಿಗಾಗಿ ನಡೆಯಿತು

#ಹತ್ತು_ವರ್ಷ_ಹಿಂದಿನ_ನೆನಪು #2011ರ_ನನ್ನ_ಎತ್ತಿನ_ಗಾಡಿ_ಯಾತ್ರೆಯಲ್ಲಿ_ಶರಾವತಿ_ನದಿ_ದಾಟಿಸುವ_ತುಮರಿಯ_ಲಾಂಚ್_ನವರು #ಎತ್ತಿನ_ಗಾಡಿ_ಸಾಗಿಸಲು_ನಿರಾಕರಿಸಿದ್ದರು!?     2011ರಲ್ಲಿ ನಾನು ಮತ್ತು ನನ್ನ ಗೆಳೆಯರು ಸೇರಿ ಮಾಹಿತಿ ಹಕ್ಕು ಮತ್ತು ಲೋಕಾಯುಕ್ತದ ಜನ ಜಾಗೃತಿಗಾಗಿ ಸಾಗರ ಮತ್ತು ಹೊಸನಗರ ತಾಲ್ಲೂಕಿನಾದ್ಯ೦ತ ಸುಮಾರು ಏಳು ದಿನ ಎತ್ತಿನ ಗಾಡಿಯಲ್ಲಿ ಜಾತ ನಡೆಸಿದ್ದೆವು.          ಬೆಳೆಗ್ಗೆಯಿಂದ ರಾತ್ರಿ ತನಕ ಅನೇಕ ಸಭೆಗಳು ನಡೆಸಿದೆವು.    ಸ್ಥಳಿಯ ಪ್ರಗತಿ ಪರ ಚಿಂತನೆಯವರು, ಸಂಘಟನೆಗಳು ನಮಗೆ ಬೆಂಬಲಿಸಿ ಸಹಕರಿಸಿದರು, ಮಾಹಿತಿ ಹಕ್ಕಿನಲ್ಲಿ ಅಜಿ೯ಸಲ್ಲಿಸಿ ಮಾಹಿತಿ ಪಡೆಯುವುದು, ದಾಖಲೆ ಸಮೇತ ಅವ್ಯವಹಾರಗಳನ್ನ ಲೋಕಾಯುಕ್ತಕ್ಕೆ ಹೇಗೆ ದೂರು ನೀಡುವುದು ಇತ್ಯಾದಿ ಮಾಹಿತಿ ನೀಡುತ್ತಾ ಹೋಗಿದ್ದು ಒಂದು ವಿಶಿಷ್ಟ ಅನುಭವ.     ರಾಜಕೀಯ ಗುರುಗಳಾದ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪನವರು ಎತ್ತಿನ ಗಾಡಿಯಲ್ಲಿ ಗಾದಿ ಹಾಸಿ ಕುಳಿತುಕೊಳ್ಳಬಾರದು ಕೇವಲ ಕಂಬಳಿ ಹಾಸಿ ಕುಳಿತು ಈ ಯಾತ್ರೆ ಮುಗಿಸಲು ತಾಕೀತು ಮಾಡಿದ್ದರು ಅದರಂತೆ ಮಾಡಿದೆ, ಹೊಸನಗರದಲ್ಲಿ ನನ್ನ ಗಾಡಿ ಏರಿದ ಮಾಜಿ ಜಿ.ಪಂ.ಸದಸ್ಯ ಗೆಳೆಯ ಬಿ.ಪಿ. ರಾಮಚಂದ್ರ ಕುಳಿತು ಕೊಳ್ಳಲಾಗದೆ ಇಳಿದರು, ನೀವು ಹ್ಯಾಗೆ 8 ದಿನದಿಂದ ಗಾಡಿಲಿ ಕುಳಿತೇ ಇದ್ದಿರಾ ಅಂತ ಆಶ್ಚಯ೯ ಪಟ್...