Skip to main content

Posts

Showing posts with the label Remarkable Yadurappa leader ship

Blog number 1173. ಯಡೂರಪ್ಪರಂತಹ ನಾಯಕತ್ವ ಭಾರತೀಯ ಜನತಾ ಪಕ್ಷದಲ್ಲಿ ಇನ್ನೊಬ್ಬರು ಸಾದ್ಯವಾ?

#ಯಡಿಯೂರಪ್ಪ ತರದವರು ಬಿಜೆಪಿಯಲ್ಲಿ ಮು೦ದಿನ ದಿನದಲ್ಲಿ ಇರಲು ಸಾಧ್ಯವಿಲ್ಲ#    ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ ಸಮಾವೇಶ ಶೃ೦ಗೇರಿಯಲ್ಲಿ ಜಿಲ್ಲಾ ಮಂತ್ರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ಸಿ.ಟಿ.ರವಿಯವರ ಎಲ್ಲಾ ರೀತಿಯ ಬೆದರಿಕೆ ಒತ್ತಡಗಳನ್ನ ಎದುರಿಸಿಯೂ ಪ್ರಾರಂಭ ಆಗಿದೆ.     ಸಕಾ೯ರದ ಹಸ್ತಕ್ಷೇಪ ಇಲ್ಲದೆ ನಾಡು ನುಡಿಯ ಅಕ್ಷರ ಜಾತ್ರೆಯನ್ನ ಸಾಹಿತ್ಯ ಪರಿಷತ್ ನಡೆಸಿಕೊಂಡ ಇತಿಹಾಸವನ್ನ ಬಿಜೆಪಿ ಮಂತ್ರಿ ಮುರಿದಿದ್ದಾರೆ ಕಲ್ಕುಳಿ ವಿಠಲ ಹೆಗ್ಡೆಯನ್ನ ವೈಯಕ್ತಿಕವಾಗಿ ವಿರೋದಿಸಲು ಹೋಗಿ ಬಿಜೆಪಿ ಪಕ್ಷಕ್ಕೆ ಕೆಟ್ಟ ಇಮೇಜ್ ತಂದಿದ್ದಾರೆ ಮತ್ತು ಬಿಜೆಪಿ ವಿರೋದಿ ಶಕ್ತಿಗಳಿಗೆ ಹೆಚ್ಚಿನ ಆತ್ಮವಿಶ್ವಾಸಕ್ಕೆ ಕಾರಣರಾಗಿದ್ದಾರೆ.   ಇವತ್ತು ನಮ್ಮ ಜಿಲ್ಲೆಯ ಯಡೂರಪ್ಪನವರು ಮುಖ್ಯಮಂತ್ರಿ, ಅವರ ಇವತ್ತಿನ ತನಕದ ರಾಜಕಾರಣದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇಂತಹ ಯಾವುದೇ ಕಪ್ಪು ಚುಕ್ಕೆ ಉoಟು ಮಾಡುವ ಘಟನೆಗೆ ಆಸ್ಪದ ನೀಡಲಿಲ್ಲ, ಕಳೆದ ಅವದಿಯಲ್ಲಿ ಇವರು ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಯ ವರೇ ಆದ ಸಾಹಿತಿ ನಾ.ಡಿಸೋಜ ಇವರನ್ನ ಎಲ್ಲಾ ರೀತಿಯಿಂದಲೂ ವಿರೋದಿಸುತ್ತಿದ್ದರು ಆದರೆ ಒಮ್ಮೆಯೂ ಯಡೂರಪ್ಪ ತಮ್ಮ ಅಧಿಕಾರ ದುಬ೯ಳಕೆ ಮಾಡಲಿಲ್ಲ ಅವರ ಕಾಯ೯ಕ್ರಮ ತಡೆಯಲಿಲ್ಲ.   1980 ರಲ್ಲಿ ಆನಂದಪುರಕ್ಕೆ ಆಗಾಗ್ಗೆ ಕುಮಧ್ವತಿ ಬಸ್ ನಲ್ಲಿ ಬಂದು ಅವತ್ತಿನ ದಿನದಲ್ಲಿ ಆನಂದಪುರದ ಬಿಜೆಪಿ ತ್...