21 ಜನವರಿ 2004 ರಿಂದ 31 ಜನವರಿ 2004 ಹನ್ನೊಂದು ದಿನಗಳ ಕಾಲ ಸಾಗರ ತಾಲ್ಲೂಕಿನಾದ್ಯಂತ ನಾನು ನಡೆಸಿದ ಸಾಗರ ತಾಲ್ಲೂಕ್ ಅಭಿವೃದ್ದಿಗಾಗಿ 360 ಕಿ ಮಿ ಜನ ಜಾಗೃತಿ ಪಾದಯಾತ್ರೆಯ 18 ನೇ ವರ್ಷದ ನೆನಪುಗಳು
#ತುಮರಿ ಸೇತುವೆ ನಿರ್ಮಾಣಕ್ಕಾಗಿ #ಶಿವಮೊಗ್ಗ ತಾಳಗುಪ್ಪ ರೈಲು ಮಾಗ೯ ಬ್ರಾಡ್ಗೇಜಿಗಾಗಿ ಹಣ ಬಿಡುಗಡೆ #ಹಂದಿಗೋಡು ಕಾಯಿಲೆ ಪೀಡಿತರಿಗೆ ಪುನರ್ವಸತಿ. #ಜೋಗ ಜಲಪಾತ ಪ್ರವಾಸಿ ತಾಣದ ಅಭಿವೃದ್ದಿಗಾಗಿ #ಸಾಗರ ರೈಲು ನಿಲ್ದಾಣಕ್ಕೆ ಡಾ.ರಾಮಮನೋಹರ ರೈಲು ನಿಲ್ದಾಣ ಎಂದು ಪುನರ್ ನಾಮಕರಣಕ್ಕಾಗಿ ಒತ್ತಾಯಿಸಿ 2004ರಲ್ಲಿ ನಾನು ನಡೆಸಿದ ಜನ ಜಾಗೃತಿಗಾಗಿ ಪಾದಯಾತ್ರೆ. 21- ಜನವರಿ -2004ರಿಂದ 31- ಜನವರಿ -2004 ರ ವರೆಗೆ 11 ದಿನಗಳ ಕಾಲ ಸಾಗರ ತಾಲ್ಲೂಕಿನಾದ್ಯ೦ತ ಮೇಲಿನ ಬೇಡಿಕೆಗಳ ಇಟ್ಟುಕೊಂಡು ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸಿದ್ದು ಇವರೆಗೆ ಯಾರು ಮುರಿಯದ ದಾಖಲೆ ಆಗಿ ಉಳಿದಿದೆ. ಸುಮಾರು 360 ಕಿ.ಮಿ. ಆನಂದಪುರಂನ ಮುರುಘಾ ಮಠದಿOದ (ಆಚಾಪುರ ಗ್ರಾಮ ಪಂಚಾಯತನಿಂದ)ಪ್ರಾರ೦ಬಿಸಿ ಯಡೇಹಳ್ಳಿ, ಆನಂದಪುರಂ, ಹೊಸೂರು ಗ್ರಾಮ ಪಂಚಾಯತ ನಿಂದ ಗೌತಮಪುರ ಗ್ರಾಮ ಪಂಚಾಯತ, ಅಲ್ಲಿ೦ದ ಹಿರೇಬಿಲ ಗುಂಜಿ, ತ್ಯಾಗತಿ೯, ಪಡಗೋಡು, ಕೆಳದಿ, ಮಾಸೂರು, ಹಿರೇ ನೆಲ್ಲೂರು, ಕಾಗೋಡು, ಸೈದೂರು,ಕಾನ್ಲೆ, ಶಿರವಂತೆ, ಯಡ ಜಿಗಳೆಮನೆ, ಖಂಡಿಕ, ತಾಳಗುಪ್ಪ, ತಲವಾಟ, ಕಾಗ೯ಲ್, ಜೋಗ, ಅರಲ ಗೋಡು, ಕೋಗಾರ್, ಸಂಕಣ್ಣ ಶಾನು ಬೋಗ, ಹೊಸ ಕೊಪ್ಪ, ತುಮರಿ, ಹುಲಿ ದೇವರ ಬನ, ಬೇಸೂರು, ಆವಿನಳ್ಳಿ, ಹಳೆ ಇಕ್ಕೆರಿ, ಬೀಮನ ಕೋಣೆ, ಹೆಗ್ಗೋಡು, ಉಳ್ಳುರು ಮಾಗ೯ವಾಗಿ ಸಾಗರ ತಹಸಿಲ್ದಾರ್ ಕಚೇರಿ ತಲುಪಿ ಮನವಿ ನೀಡಿದ ಕಾಯ೯ಕ್ರಮ ಇದಾಗಿತ್ತು. ...