4101.ಕನ್ವರ್_ಯಾತ್ರೆ_Kanwar_Yatra. ಇದು ಶಿವನಿಗಾಗಿ ಆಚರಿಸುವ ವಿಶೇಷ ಯಾತ್ರೆ ದಕ್ಷಿಣ ಭಾರತಿಯರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
ಕನ್ವರ್_ಯಾತ್ರೆ_Kanwar_Yatra.
ಇದು ಶಿವನಿಗಾಗಿ ಆಚರಿಸುವ ವಿಶೇಷ ಯಾತ್ರೆ ದಕ್ಷಿಣ ಭಾರತಿಯರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
ಯಾವುದೇ ಮಧ್ಯವರ್ತಿಗಳಿಲ್ಲದೆ ಭಕ್ತ ಮತ್ತು ದೇವರ ನಡುವೆ ನೇರ ಸಂಪರ್ಕ ಕಲ್ಪಿಸುವ ವಿಶಿಷ್ಟ ಸಂಪ್ರದಾಯ ಕನ್ವರ್ ಯಾತ್ರೆಯಲ್ಲಿದೆ.
ಗಂಗಾ ನದಿಯಿಂದ ಗಂಗಾ ಜಲ ಸಂಗ್ರಹಿಸಿ ಕಾವಡಿಯಲ್ಲಿಟ್ಟು ಎಲ್ಲೂ ನೆಲಕ್ಕೆ ಸ್ಪರ್ಷಿಸದೆ ಶ್ರಾವಣ ಮಾಸದಲ್ಲಿ ಶಿವಮಂದಿರಕ್ಕೆ ತಲುಪಿ ಶಿವನಿಗೆ ಅಭಿಷೇಕ ಮಾಡುವ ಈ ಯಾತ್ರೆ ಉತ್ತರ ಭಾರತದಲ್ಲಿ ಪ್ರಸಿದ್ಧಿ ಪಡೆದಿದೆ ಪ್ರತಿ ವರ್ಷ 4 ರಿಂದ 5 ಕೋಟಿ ಜನ ಭಾಗವಹಿಸುತ್ತಾರೆ.
ಹೆಚ್ಚಿನ ಕನ್ವರಿಯರು ತಮ್ಮ ತಮ್ಮ ಊರುಗಳಿಗೆ (ಉತ್ತರ ಪ್ರದೇಶ, ದೆಹಲಿ, ಹರಿಯಾಣ, ರಾಜಸ್ಥಾನ ಇತ್ಯಾದಿ) ಹರಿದ್ವಾರ ಅಥವಾ ಗಂಗೋತ್ರಿಯಿಂದ ಗಂಗಾಜಲವನ್ನು ಕಾಲ್ನಡಿಗೆಯಲ್ಲಿ ಕೊಂಡೊಯ್ಯುತ್ತಾರೆ.
ಸಾಮಾನ್ಯವಾಗಿ ನಡೆದು ಕ್ರಮಿಸುವ ದೂರ: 100 ಕಿ.ಮೀ ನಿಂದ 300 ಕಿ.ಮೀ, ಕನ್ವರ್ ಯಾತ್ರೆಯಲ್ಲಿ ಭಕ್ತರ ನಂಬಿಕೆ ಮತ್ತು ಸಂಕಲ್ಪಕ್ಕೆ ಅನುಗುಣವಾಗಿ ಕೆಲವರು 'ಡಾಕ್ ಕನ್ವರ್' (ನಿಲ್ಲದೆ ಓಡುವುದು/ನಡೆಯುವುದು) ಅಥವಾ 'ಖಡಿ ಕನ್ವರ್' (ಕನ್ವರ್ ಅನ್ನು ನೆಲದ ಮೇಲೆ ಇಡದೆ ಕಷ್ಟಕರ ರೀತಿಯಲ್ಲಿ ಸಾಗುವುದು) ಮೂಲಕವೂ ನೂರಾರು ಕಿಲೋಮೀಟರ್ ದೂರ ಕ್ರಮಿಸುತ್ತಾರೆ.
ಕನ್ವರ್ ಯಾತ್ರೆ ಎಂಬುದು ಉತ್ತರ ಭಾರತದಲ್ಲಿ ಶ್ರಾವಣ ಮಾಸದಲ್ಲಿ (ಆಷಾಢ-ಶ್ರಾವಣ / ಜುಲೈ-ಆಗಸ್ಟ್) ನಡೆಯುವ ಅತ್ಯಂತ ಪ್ರಸಿದ್ಧ ಮತ್ತು ಪವಿತ್ರವಾದ ಶಿವಭಕ್ತರ (ಕಾನ್ವರಿಯಾರ) ವಾರ್ಷಿಕ ಪಾದಯಾತ್ರೆ.
ಉತ್ತರ ಭಾರತದಲ್ಲಿ (ಪೂರ್ಣಿಮಾಂತ ಪಂಚಾಂಗದ ಪ್ರಕಾರ) 2026 ರ ಶ್ರಾವಣ ಮಾಸವು (ಸಾವನ್) ಜುಲೈ 30- 2026 ರಿಂದ ಆಗಸ್ಟ್ 20- 2026 ರವರೆಗೆ ನಡೆಯುತ್ತದೆ,
ದಕ್ಷಿಣ ಭಾರತದಲ್ಲಿ (ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಇತ್ಯಾದಿ) ಅಮಾವಾಸ್ಯಾಂತ ಪಂಚಾಂಗವನ್ನು ಅನುಸರಿಸುವುದರಿಂದ 2026ರ ಶ್ರಾವಣ ಮಾಸವು ಆಗಸ್ಟ್ 13- 2026 ರಿಂದ ಸೆಪ್ಟೆಂಬರ್ 11- 2026 ರವರೆಗೆ ಇರುತ್ತದೆ.
ಭಕ್ತರು ಉತ್ತರಾಖಂಡದ ಹರಿದ್ವಾರ, ಗಂಗೋತ್ರಿ, ಋಷಿಕೇಶ ಅಥವಾ ಬಿಹಾರದ ಸುಲ್ತಾನ್‌ಗಂಜ್‌ನಂತಹ ಪವಿತ್ರ ಗಂಗಾ ನದಿಯ ದಂಡೆಗೆ ತೆರಳಿ ಪವಿತ್ರ ಗಂಗಾಜಲವನ್ನು ಸಂಗ್ರಹಿಸುತ್ತಾರೆ.
ಭಕ್ತರು ಗಂಗಾಜಲದ ಪಾತ್ರೆಗಳನ್ನು 'ಕನ್ವರ್' ಎಂಬ #ಬಿದಿರಿನ_ಕಾವಡಿಯ ಎರಡೂ ಬದಿಗಳಲ್ಲಿ ತೂಗಿಹಾಕಿ ಹೆಗಲ ಮೇಲೆ ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಸಾಗುತ್ತಾರೆ.
ಪಾದಯಾತ್ರೆಯ ಸಮಯದಲ್ಲಿ ಕನ್ವರ್ ಅನ್ನು ನೆಲಕ್ಕೆ ಮುಟ್ಟಿಸುವಂತಿಲ್ಲ, ಭಕ್ತರು ಸಂಪೂರ್ಣ ಸಾತ್ವಿಕ ಆಹಾರ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಾರೆ.
ಸಂಗ್ರಹಿಸಿದ ಗಂಗಾಜಲವನ್ನು ತಮ್ಮ ಸ್ಥಳೀಯ ಅಥವಾ ಪ್ರಸಿದ್ಧ ಶಿವ ದೇವಾಲಯಗಳಿಗೆ (ಉದಾಹರಣೆಗೆ: ವೈದ್ಯನಾಥ ಧಾಮ, ಕಾಶಿ ವಿಶ್ವನಾಥ, ನೀಲಕಂಠ ಮಹಾದೇವ) ತಲುಪಿಸಿ, ಶ್ರಾವಣ ಮಾಸದ ಶಿವರಾತ್ರಿಯಂದು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾರೆ.
ಕನ್ವರ್ ಯಾತ್ರೆಗೆ ಮೂಲ, ದೇವತೆಗಳು ಮತ್ತು ಅಸುರರು ಮುದ್ರ ಮಂಥನ ಮಾಡುವಾಗ 'ಹಾಲಾಹಲ' (ವಿಷ) ಹೊರಬಂದಾಗ, ಬ್ರಹ್ಮಾಂಡವನ್ನು ರಕ್ಷಿಸಲು ಶಿವನು ಅದನ್ನು ಕುಡಿದನು, ವಿಷದ ಶಾಖದಿಂದ ಶಿವನ ದೇಹವು ಕಾಯತೊಡಗಿದಾಗ ದೇವತೆಗಳು ಆತನಿಗೆ ತಂಪಾಗಿಸಲು ಪವಿತ್ರ ನದಿಗಳ ನೀರನ್ನು ಅರ್ಪಿಸಿದರು ಎಂಬುದು ಪೌರಾಣಿಕ ನಂಬಿಕೆ.
ರಾವಣನು ಶಿವನ ಪರಮ ಭಕ್ತನಾಗಿ ಹರಿದ್ವಾರದಿಂದ ಗಂಗಾಜಲವನ್ನು ತಂದು ಪುರಾತನ 'ಪುರ ಮಹಾದೇವ' ದೇವಾಲಯದ ಶಿವಲಿಂಗಕ್ಕೆ ಅಭಿಷೇಕ ಮಾಡಿ ಶಿವನ ತಾಪವನ್ನು ಶಮನಗೊಳಿಸಿದನು.
ಇನ್ನು ಕೆಲವರ ಪ್ರಕಾರ ಶ್ರವಣಕುಮಾರನು ತನ್ನ ಅಂಧ ಪೋಷಕರನ್ನು ಕಾವಡಿಯಲ್ಲಿ ಕುಳ್ಳಿರಿಸಿ ಗಂಗಾಜಲ ತಂದಿದ್ದು ಇದರ ಮೂಲ ಎನ್ನಲಾಗುತ್ತದೆ.
ಹರಿದ್ವಾರದಿಂದ ಗಂಗಾಜಲವನ್ನು ತೆಗೆದುಕೊಂಡು ಉತ್ತರಾಖಂಡ, ಉತ್ತರ ಪ್ರದೇಶ, ದೆಹಲಿ, ಹರಿಯಾಣ ಮತ್ತು ರಾಜಸ್ಥಾನದ ಕನ್ಟರ್ ಭಕ್ತರು ಈ ಮಾರ್ಗದಲ್ಲಿ ಸಾಗುತ್ತಾರೆ (ಉದಾ: ನೀಲಕಂಠ ಮಹಾದೇವ, ಪುರ ಮಹಾದೇವ ದೇವಾಲಯಗಳು).
ಸುಲ್ತಾನ್‌ಗಂಜ್ - ದೇವಘರ್ (ಬಿಹಾರ/ಜಾರ್ಖಂಡ್) ಮಾರ್ಗ ಸುಲ್ತಾನ್‌ಗಂಜ್‌ನ ಗಂಗಾ ನದಿಯಿಂದ ಜಲ ಸಂಗ್ರಹಿಸಿ ಸುಮಾರು 105 ಕಿ.ಮೀ. ಬರಿಗಾಲಿನಲ್ಲಿ ನಡೆದು ಜಾರ್ಖಂಡ್‌ನ ಪ್ರಸಿದ್ಧ ವೈದ್ಯನಾಥ ಧಾಮ (ಜ್ಯೋತಿರ್ಲಿಂಗ) ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾರೆ.
ಪ್ರಯಾಣದುದ್ದಕ್ಕೂ ಕನ್ವರ್ (ಕಾವಡಿ) ಅನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡುವಂತಿಲ್ಲ.
ವಿಶ್ರಾಂತಿ ಪಡೆಯುವಾಗ ಅದನ್ನು ವಿಶೇಷವಾಗಿ ನಿರ್ಮಿಸಿದ ಅಂಕಣಗಳಲ್ಲಿ ತೂಗಿಹಾಕಬೇಕು.
ಸಂಪೂರ್ಣ ಯಾತ್ರೆಯ ಸಮಯದಲ್ಲಿ ಮದ್ಯ, ಮಾಂಸ, ಈರುಳ್ಳಿ, ಬೆಳ್ಳುಳ್ಳಿ ಸಂಪೂರ್ಣ ವರ್ಜ್ಯ,ಸ್ನಾನ ಮಾಡದೆ ಕನ್ವರ್ ಸ್ಪರ್ಶಿಸುವಂತಿಲ್ಲ.
ಭಕ್ತರು ನಡೆಯುವಾಗ "ಬೋಲ್ ಬಮ್, ಹರ್ ಹರ್ ಬಮ್" ಅಥವಾ "ಜೈ ಶಿವ ಶಂಭೋ" ಎಂದು ಪಠಿಸುತ್ತಾ ಸಾಗುತ್ತಾರೆ.
ಮಾರ್ಗದುದ್ದಕ್ಕೂ ಸರ್ಕಾರ ಮತ್ತು ವಿವಿಧ ಸೇವಾ ಸಮಿತಿಗಳಿಂದ ಉಚಿತ ಆಹಾರ (ಭಂಡಾರ), ವಿಶ್ರಾಂತಿ ಗೃಹಗಳು, ವೈದ್ಯಕೀಯ ಶಿಬಿರಗಳು ಹಾಗೂ ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗಿರುತ್ತದೆ.
ಕಾನ್ವರಿಯಾರ ಸುರಕ್ಷತೆಗಾಗಿ ಸರ್ಕಾರವು ಪ್ರತ್ಯೇಕ 'ಕನ್ವರ್ ಮಾರ್ಗ' (Kanwar Track) ನಿಗದಿಪಡಿಸಿ, ವಾಹನ ಸಂಚಾರವನ್ನು ಬೇರೆಡೆಗೆ ಬದಲಾಯಿಸುತ್ತದೆ.
ಕನ್ವರ್ ಯಾತ್ರೆಯ ಪ್ರಯಾಣದಲ್ಲಿ ಹಗುರವಾದ ಮತ್ತು ಬೇಗನೆ ಒಣಗುವ 2 ಅಥವ 3 ಜೊತೆ ಕೇಸರಿ/ಕಿತ್ತಳೆ ಬಣ್ಣದ ಹತ್ತಿ ಉಡುಪುಗಳು,
ಮೆತ್ತಗಿನ ಮತ್ತು ಉತ್ತಮ ಹಿಡಿತವಿರುವ ಸ್ಪೋರ್ಟ್ಸ್ ಶೂಗಳು ಅಥವಾ ರಬ್ಬರ್ ಚಪ್ಪಲಿಗಳು (ಬರಿಗಾಲಿನಲ್ಲಿ ನಡೆಯದಿದ್ದರೆ), ಸಣ್ಣ ಛತ್ರಿ ಅಥವಾ ಹೊಂದುವ ರೇನ್‌ಕೋಟ್ (ಶ್ರಾವಣ ಮಾಸದಲ್ಲಿ ಮಳೆ ಹೆಚ್ಚು),
ಪ್ರಥಮ ಚಿಕಿತ್ಸೆ ಮತ್ತು ಔಷಧಿಗಳು,ಬ್ಯಾಂಡ್-ಏಡ್, ಪೇನ್ ರಿಲೀಫ್ ಸ್ಪ್ರೇ, ಗ್ಲೂಕೋಸ್ ಮತ್ತು ನಿಯಮಿತವಾಗಿ ಬಳಸುವ ಔಷಧಿಗಳು ಒಯ್ಯುತ್ತಾರೆ.
ಜೊತೆಗೆ ಟಾರ್ಚ್‌ಲೈಟ್, ಪವರ್ ಬ್ಯಾಂಕ್, ಮರುಬಳಕೆ ಮಾಡಬಹುದಾದ ನೀರಿನ ಬಾಟಲಿ, ಸಣ್ಣ ಟವಲ್ ಹಾಗೂ ಕನಿಷ್ಠ ತೂಕದ ಬೆನ್ನು ಚೀಲ (Backpack).
ಸರ್ಕಾರ ಮತ್ತು ಸ್ಥಳೀಯ ಸೇವಾ ಸಮಿತಿಗಳು ಉಚಿತವಾಗಿ ತಂಗಲು ದೊಡ್ಡ ಪೆಂಡಾಲ್‌ಗಳು, ಹಾಸಿಗೆಗಳು ಹಾಗೂ ಶೌಚಾಲಯದ ವ್ಯವಸ್ಥೆ ಮಾಡಿರುತ್ತವೆ.
ಮಾರ್ಗದುದ್ದಕ್ಕೂ ಪ್ರತಿ 1-2 ಕಿ.ಮೀ ಗೆ ಭಂಡಾರಗಳಿದ್ದು, ಬಿಸಿಬಿಸಿ ಸಾತ್ವಿಕ ಆಹಾರ, ಟೀ, ಹಾಲು, ಗ್ಲೂಕೋಸ್ ನೀರು ಹಾಗೂ ಹಣ್ಣುಗಳನ್ನು ಉಚಿತವಾಗಿ ನೀಡಲಾಗುತ್ತದೆ.
ವಿಶ್ರಾಂತಿ ಪಡೆಯುವ ಸ್ಥಳಗಳಲ್ಲಿ ಕನ್ವರ್‌ಗಳನ್ನು ತೂಗಿಹಾಕಲು ಎತ್ತರದ ಬಿದಿರಿನ ಚೌಕಟ್ಟುಗಳನ್ನು (Stands) ನಿರ್ಮಿಸಿರುತ್ತಾರೆ.
ಕನ್ವರ್ ಯಾತ್ರೆ ಎನ್ನುವುದು ಹಿಂದೂಗಳ ಪವಿತ್ರ ಶ್ರಾವಣ ಮಾಸದಲ್ಲಿ ಶಿವಭಕ್ತರು ಕೈಗೊಳ್ಳುವ ವಾರ್ಷಿಕ ತೀರ್ಥಯಾತ್ರೆಯಾಗಿದೆ.
ಭಕ್ತರನ್ನು 'ಕನ್ವಾರಿಯಾ' ಎಂದು ಕರೆಯಲಾಗುತ್ತದೆ ಇದು ಹಿಂದೂ ಕ್ಯಾಲೆಂಡರ್‌ನ ಶ್ರಾವಣ (ಜೂನ್-ಆಗಸ್ಟ್) ತಿಂಗಳಲ್ಲಿ ನಡೆಯುತ್ತದೆ.
ಉತ್ತರಾಖಂಡ, ಉತ್ತರ ಪ್ರದೇಶ, ದೆಹಲಿ ಹಾಗೂ ಹರಿಯಾಣ ಭಾಗಗಳಲ್ಲಿ ಇದು ಅತ್ಯಂತ ದೊಡ್ಡ ಧಾರ್ಮಿಕ ಸಭೆಯಾಗಿ ಜರುಗುತ್ತದೆ.
ಭಕ್ತರು ಪಾದಯಾತ್ರೆಯ ಮೂಲಕವೇ ಸಾಗಿ ಬಂದು ಭಗವಾನ್ ಶಿವನಿಗೆ ಜಲಾಭಿಷೇಕ ನೆರವೇರಿಸುವ ಈ ಕನ್ವರ್ ಯಾತ್ರೆಯಲ್ಲಿ ಪ್ರತಿ ವರ್ಷ ಸುಮಾರು 4 ರಿಂದ 4.5 ಕೋಟಿ (40 to 45 million) ಭಕ್ತರು ಭಾಗವಹಿಸುತ್ತಾರೆ.
ಪ್ರಸ್ತುತ ಇದು ಭಾರತದ ಅತಿ ದೊಡ್ಡ ವಾರ್ಷಿಕ ಧಾರ್ಮಿಕ ಯಾತ್ರೆಗಳಲ್ಲಿ ಒಂದಾಗಿದೆ.
ಕನ್ವರ್ ಯಾತ್ರೆಯಲ್ಲಿ ಜಾತಿ, ವರ್ಗ ಅಥವಾ ಸಾಮಾಜಿಕ ಮೇಲು-ಕೀಳಿನ ತಾರತಮ್ಯಕ್ಕೆ ಅವಕಾಶವಿರುವುದಿಲ್ಲ.
ಈ ಯಾತ್ರೆಯ ಪ್ರಮುಖ ತತ್ವವೇ ಸಮಾನತೆ ಮತ್ತು ಶಿವಭಕ್ತಿ.
ಯಾತ್ರೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಭಕ್ತನನ್ನೂ ಅವರ ನಿಜವಾದ ಹೆಸರು, ಜಾತಿ ಅಥವಾ ಹುದ್ದೆಯಿಂದ ಕರೆಯದೆ, "ಬಮ್" ಅಥವಾ "ಬೋಲೆ" ಎಂದೇ ಸಂಬೋಧಿಸಲಾಗುತ್ತದೆ.
ಶ್ರೀಮಂತರಿರಲಿ ಅಥವಾ ಬಡವರಿರಲಿ ಎಲ್ಲರೂ ಒಂದೇ ರೀತಿಯ ಸರಳವಾದ ಕೇಸರಿ (ಕಾಷಾಯ) ವಸ್ತ್ರಗಳನ್ನು ಧರಿಸುತ್ತಾರೆ ಮತ್ತು ಬರಿಗಾಲಿನಲ್ಲಿ ನಡೆಯುತ್ತಾರೆ.
ಮಾರ್ಗ ಮಧ್ಯದಲ್ಲಿ ತೆರೆಯಲಾಗುವ 'ಶಿವಾನಂದ್' ಅಥವಾ ಉಚಿತ ಸೇವಾ ಮುಖಾಂತರ ನೀಡಲಾಗುವ ಆಹಾರ, ನೀರು ಮತ್ತು ವಸತಿ ವ್ಯವಸ್ಥೆಯನ್ನು ಪ್ರತಿಯೊಬ್ಬರೂ ಒಂದೇ ಸಾಲಿನಲ್ಲಿ ಕುಳಿತು ಸ್ವೀಕರಿಸುತ್ತಾರೆ.
ಗಂಗಾಜಲವನ್ನು ತಂದು ಶಿವಲಿಂಗಕ್ಕೆ ಅಭಿಷೇಕ ಮಾಡುವ ಈ ವ್ರತದಲ್ಲಿ ಎಲ್ಲರಿಗೂ ಒಂದೇ ರೀತಿಯ ನಿಯಮಗಳು ಮತ್ತು ಕಟ್ಟುಪಾಡುಗಳು ಅನ್ವಯಿಸುತ್ತವೆ.
ಆದ್ದರಿಂದ ಸಾಮಾಜಿಕ ಮೇಲು-ಕೀಳುಗಳನ್ನು ಬದಿಗಿಟ್ಟು ಪ್ರತಿಯೊಬ್ಬರೂ ಭಕ್ತಿಯಿಂದ ಮಾತ್ರ ಒಂದಾಗುವ ವಿಶಿಷ್ಟ ಪರಂಪರೆ ಕನ್ವರ್ ಯಾತ್ರೆಯಲ್ಲಿದೆ.
ಕನ್ವರಿಯಾಗಳು (ಬೋಲೆ ಬಮ್) ತಾವೇ ನೇರವಾಗಿ ಶಿವಲಿಂಗಕ್ಕೆ ಗಂಗಾ ಜಲದಿಂದ ಅಭಿಷೇಕ ಮಾಡುತ್ತಾರೆ.
ದೇವಸ್ಥಾನಗಳಲ್ಲಿ ಅರ್ಚಕರು ಅಥವಾ ಪೂಜಾರಿಗಳ ಮೂಲಕ ಗಂಗಾ ಜಲ ಅರ್ಪಿಸುವ ಅಗತ್ಯವಿರುವುದಿಲ್ಲ.
ಯಾತ್ರಿಕರು ತಾವೇ ಸ್ವತಃ ಗರ್ಭಗುಡಿಗೆ ತೆರಳಿ ಶಿವಲಿಂಗಕ್ಕೆ ಗಂಗಾ ಜಲವನ್ನು ಸುರಿಯುತ್ತಾರೆ.
ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯ ದಿನ (ಶ್ರಾವಣ ಶಿವರಾತ್ರಿ) ಭಕ್ತರು ತಾವು ಪಾದಯಾತ್ರೆ ಮೂಲಕ ತಂದ ಗಂಗಾ ಜಲವನ್ನು ತಮಗಿಷ್ಟವಾದ ಶಿವ ದೇವಾಲಯಗಳಲ್ಲಿ (ಉದಾಹರಣೆಗೆ ಹರಿದ್ವಾರದಿಂದ ತಂದ ನೀರನ್ನು ನೀಲಕಂಠ ಮಹಾದೇವ, ಪುರಾ ಮಹಾದೇವ, ಅಥವಾ ಸ್ಥಳೀಯ ಶಿವ ದೇವಾಲಯಗಳಲ್ಲಿ) ಅರ್ಪಿಸುತ್ತಾರೆ.
ಗಂಗೋತ್ರಿ ಅಥವಾ ಹರಿದ್ವಾರದಿಂದ ಜಲ ಸಂಗ್ರಹಿಸಿದ ನಂತರ ಆ ಕಾವಡಿಯನ್ನು (ಕನ್ವರ್) ಎಲ್ಲೂ ನೆಲದ ಮೇಲಿಡಬಾರದು,ನೆಲಕ್ಕೆ ತಗಲಿದರೆ ಅದು ಅಪವಿತ್ರವಾಗುತ್ತದೆ ಎಂಬ ನಂಬಿಕೆ ಇದೆ.
ಅಷ್ಟು ನಿಷ್ಠೆಯಿಂದ ತಂದ ನೀರನ್ನು ನೇರವಾಗಿ ಶಿವನಿಗೆ ಅರ್ಪಿಸುವುದು ಈ ಯಾತ್ರೆಯ ಮುಖ್ಯ ಉದ್ದೇಶ.
ಯಾವುದೇ ಮಧ್ಯವರ್ತಿಗಳಿಲ್ಲದೆ ಭಕ್ತ ಮತ್ತು ದೇವರ ನಡುವೆ ನೇರ ಸಂಪರ್ಕ ಕಲ್ಪಿಸುವ ವಿಶಿಷ್ಟ ಸಂಪ್ರದಾಯ ಕನ್ವರ್ ಯಾತ್ರೆಯಲ್ಲಿದೆ.
#gangajal #gangariver #kanwaryatra #shiva #mahadeva #northindia #shravan
Comments
Post a Comment