ಬ್ರಾಹ್ಮೀ_ಮುಹೂರ್ತ_ಎಂದರೇನು?...
"Early to bed and early to rise, makes a man healthy, wealthy, and wise."
ನೀವು ಈ ನುಡಿ ಮುತ್ತು ಕೇಳಿರುತ್ತೀರಿ ಈ ರೀತಿ ನಿಮ್ಮ ಜೀವನ ಶೈಲಿ ಇದ್ದರೆ ನಿಮ್ಮ ಅನುಭವ ಶೇರ್ ಮಾಡಲು ವಿನಂತಿ.
ಬ್ರಾಹ್ಮೀ ಮುಹೂರ್ತ ಎಂದರೆ ಸೂರ್ಯೋದಯಕ್ಕಿಂತ ಮುಂಚಿನ ಅತ್ಯಂತ ಪವಿತ್ರ ಮತ್ತು ಪ್ರಶಾಂತವಾದ ಸಮಯ.
ಪ್ರಾಚೀನ ವೈದಿಕ ಹಾಗೂ ಆಯುರ್ವೇದ ಪರಂಪರೆಯಲ್ಲಿ ಈ ಸಮಯಕ್ಕೆ ವಿಶೇಷ ಮಹತ್ವವಿದೆ.
ಸೂರ್ಯೋದಯಕ್ಕೆ 1 ಗಂಟೆ 36 ನಿಮಿಷಗಳ ಮೊದಲು ಈ ಮುಹೂರ್ತ ಆರಂಭವಾಗಿ, ಸೂರ್ಯೋದಯಕ್ಕೆ 48 ನಿಮಿಷಗಳ ಮುಂಚೆ ಕೊನೆಗೊಳ್ಳುತ್ತದೆ.
ಅಂದರೆ ಇದರ ಒಟ್ಟು ಅವಧಿ 48 ನಿಮಿಷಗಳು / 2 ಘಳಿಗೆಗಳು. ಸಾಮಾನ್ಯವಾಗಿ ಇದು ಮುಂಜಾನೆ 4:00 ರಿಂದ 5:30 ರ ನಡುವೆ ಬರುತ್ತದೆ.
ಬ್ರಹ್ಮಜ್ಞಾನದ ಸಮಯ: 'ಬ್ರಹ್ಮ' ಎಂದರೆ ಪರಮ ಸತ್ಯ ಅಥವಾ ಜ್ಞಾನ. 'ಬ್ರಾಹ್ಮೀ' ಎಂದರೆ ಬ್ರಹ್ಮನಿಗೆ ಅಥವಾ ಜ್ಞಾನಾರ್ಜನೆಗೆ ಸಂಬಂಧಿಸಿದ್ದು. ಈ ಸಮಯದಲ್ಲಿ ಪ್ರಕೃತಿಯು ಅತ್ಯಂತ ಪ್ರಶಾಂತವಾಗಿದ್ದು, ಪರಮಾತ್ಮನ ಚಿಂತನೆ, ಆತ್ಮಜ್ಞಾನ (ಬ್ರಹ್ಮಜ್ಞಾನ) ಮತ್ತು ವೇದಾಧ್ಯಯನಕ್ಕೆ ಅತ್ಯಂತ ಪ್ರಶಸ್ತವಾದ ಕಾಲವಾದ್ದರಿಂದ ಇದಕ್ಕೆ 'ಬ್ರಾಹ್ಮೀ ಮುಹೂರ್ತ' ಎಂಬ ಹೆಸರು ಬಂತು.
ರಾತ್ರಿಯ ಕೊನೆಯ ಮುಹೂರ್ತವಾದ 14ನೇ ಮುಹೂರ್ತಕ್ಕೆ ಸೃಷ್ಟಿಕರ್ತನಾದ ಬ್ರಹ್ಮದೇವನೇ ಅಧಿಪತಿ. ಆದ್ದರಿಂದ ಆ ಕಾಲಾವಧಿಗೆ 'ಬ್ರಾಹ್ಮೀ ಮುಹೂರ್ತ' ಎಂದು ಹೆಸರಿಸಲಾಯಿತು.
ವಿದ್ಯೆಯ ಅಧಿದೇವತೆಯಾದ ಸರಸ್ವತಿಗೆ 'ಬ್ರಾಹ್ಮೀ' ಎಂಬ ಹೆಸರೂ ಇದೆ,ಮುಂಜಾನೆಯ ಈ ಪವಿತ್ರ ವೇಳೆಯಲ್ಲಿ ಮನಸ್ಸಿನ ಏಕಾಗ್ರತೆ ಹಾಗೂ ಗ್ರಹಣ ಶಕ್ತಿ ಗರಿಷ್ಠ ಮಟ್ಟದಲ್ಲಿರುವುದರಿಂದ, ವಿದ್ಯಾಭ್ಯಾಸ ಮತ್ತು ಸಾಧನೆಗೆ ಇದು ದೇವಿಯ ಆಶೀರ್ವಾದದ ಸಮಯವೆಂದು ಕರೆಯಲಾಗುತ್ತದೆ.
ಉದಾಹರಣೆ ನಿನ್ನೆ ಆಗಸ್ಟ್ 25 ರಂದು ಸೂರ್ಯೋದಯ ಸಮಯ 06:15 AM ಅವತ್ತು ಬ್ರಾಹ್ಮೀ ಮುಹೂರ್ತ ಮುಂಜಾನೆ 04:39 ರಿಂದ 05:27 ರವರೆಗೆ
ಸುಮಾರು 48 ನಿಮಿಷಗಳು.
ಅವತ್ತು ಮುಸ್ಲಿಂ ಧರ್ಮದ ಪ್ರಾರ್ಥನೆ ಸಮಯ ಬೆಳಿಗ್ಗೆ 5 ರಿಂದ ಫಜ್ರ್ ಮಾಡುತ್ತಾರೆ.
'ಬ್ರಾಹ್ಮೀ' ಎಂದರೆ ಬ್ರಹ್ಮನಿಗೆ ಅಥವಾ ಶುದ್ಧ ಜ್ಞಾನಕ್ಕೆ ಸಂಬಂಧಿಸಿದ್ದು 'ಮುಹೂರ್ತ' ಎಂದರೆ ಶುಭ ಕಾಲ ಇದು ಜ್ಞಾನ, ಧ್ಯಾನ ಮತ್ತು ಸೃಜನಶೀಲತೆಯ ಸಮಯ.
ರಾತ್ರಿಯ ನಂತರ ವಾತಾವರಣವು ಸಂಪೂರ್ಣ ಪ್ರಶಾಂತವಾಗಿರುತ್ತದೆ. ಯಾವುದೇ ಶಬ್ದ ಮಾಲಿನ್ಯ ಅಥವಾ ಗೊಂದಲಗಳಿಲ್ಲದ ಕಾರಣ ಧ್ಯಾನ, ಪ್ರಾರ್ಥನೆ ಮತ್ತು ಅಧ್ಯಯನಕ್ಕೆ ಅತ್ಯಂತ ಸೂಕ್ತ.
ಈ ಸಮಯದಲ್ಲಿ ವಾತಾವರಣದಲ್ಲಿ ಶುದ್ಧ ಆಮ್ಲಜನಕ ಮತ್ತು ನೈಸರ್ಗಿಕ ಶಕ್ತಿ ಹೆಚ್ಚಾಗಿರುತ್ತದೆ.
ಮುಂಜಾನೆ ಬೇಗ ಏಳುವುದರಿಂದ ದೇಹದ ರೋಗನಿರೋಧಕ ಶಕ್ತಿ ಮತ್ತು ಚೈತನ್ಯ ಹೆಚ್ಚುತ್ತದೆ.
ವಿದ್ಯಾರ್ಥಿಗಳು ಈ ಸಮಯದಲ್ಲಿ ಓದಿದರೆ ವಿಷಯಗಳು ಸುಲಭವಾಗಿ ಮತ್ತು ದೀರ್ಘಕಾಲದವರೆಗೆ ನೆನಪಿನಲ್ಲಿ ಉಳಿಯುತ್ತವೆ.
ಈ ಸಮಯದಲ್ಲಿ
ಧ್ಯಾನ ಮತ್ತು ಯೋಗಾಸನ
ದೇವರ ಪೂಜೆ, ಜಪ ಅಥವಾ ಪ್ರಾರ್ಥನೆ
ಓದು ಮತ್ತು ಜ್ಞಾನಾರ್ಜನೆ
ದಿನದ ಯೋಜನೆಗಳನ್ನು ರೂಪಿಸುವುದು ಸೂಕ್ತ.
ಅನೇಕ ಸಾಧಕರು ಯಾವುದೇ ಬಾಹ್ಯ ಗೊಂದಲಗಳು, ಪ್ರಾಪಂಚಿಕ ಗದ್ದಲಗಳಿಲ್ಲದ ಮುಂಜಾನೆಯ ಪ್ರಶಾಂತ ಸಮಯವನ್ನು ತಮ್ಮ ಅತ್ಯಂತ ಮಹತ್ವದ ಚಿಂತನೆ, ಆತ್ಮಾವಲೋಕನ ಮತ್ತು ಯೋಜನೆಗಳಿಗೆ ಬಳಸಿಕೊಂಡಿದ್ದೇ ಅವರ ಯಶಸ್ಸಿನ ಮೂಲ ರಹಸ್ಯ.
ವಿಶ್ವದ ಯಶಸ್ವಿ ಸಾದಕರಾದ
ಟಿಮ್ ಕುಕ್ ಆಪಲ್ ಸಂಸ್ಥೆ ಸಿಇಓ ಮುಂಜಾನೆ 3.45– 4 ಇಮೇಲ್‌ಗಳ ಪರಿಶೀಲನೆ, ಜಿಮ್/ವ್ಯಾಯಾಮ, ದಿನದ ಮಹತ್ವದ ನಿರ್ಧಾರಗಳು ತೆಗೆದುಕೊಳ್ಳುವ ಸಮಯ ಆಗಿದೆ.
ಇಂದ್ರ ನೂಯಿ ಪೆಪ್ಪಿ ಮಾಜಿ ಸಿ ಇ ಓ ಮುಂಜಾನೆ 4ಕ್ಕೆ ದಿನದ ಯೋಜನೆ, ಓದುವುದು ಮತ್ತು ಜಾಗತಿಕ ಮಾರುಕಟ್ಟೆ ವರದಿಗಳ ವೀಕ್ಷಣೆ ಮಾಡುತ್ತಾರೆ.
ರಿಚರ್ಡ್ ಬ್ರಾನ್ಸನ್ ವರ್ಜಿನ್ ಗ್ರೂಪ್ ಸಂಸ್ಥಾಪಕಮುಂಜಾನೆ 5ಕ್ಕೆ ಟೆನ್ನಿಸ್, ಈಜು ಮತ್ತು ಕುಟುಂಬದೊಂದಿಗೆ ಪ್ರಶಾಂತ ಸಮಯ ಕಳೆಯುತ್ತಾರೆ.
ಜ್ಯಾಕ್ ಡಾರ್ಸಿ Twitter/Block ಸಹ-ಸಂಸ್ಥಾಪಕ ಮುಂಜಾನೆ 4.30ಕ್ಕೆ ಧ್ಯಾನ, ನಡಿಗೆ ಮತ್ತು ಐಸ್ ಬಾತ್ ಮಾಡುತ್ತಾರೆ.
ಇತಿಹಾಸ, ರಾಜಕೀಯ, ಸಾಹಿತ್ಯ, ವಿಜ್ಞಾನ ಮತ್ತು ಆಧುನಿಕ ಉದ್ಯಮ ರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಅನೇಕ ಪ್ರಸಿದ್ಧ ವ್ಯಕ್ತಿಗಳು ತಮ್ಮ ದಿನವನ್ನು ಬ್ರಾಹ್ಮೀ ಮುಹೂರ್ತದಲ್ಲಿ ಮುಂಜಾನೆ 4 ರಿಂದ 5 ರ ನಡುವೆ ಪ್ರಾರಂಭಿಸುವ ಕಟ್ಟುನಿಟ್ಟಾದ ಶಿಸ್ತನ್ನು ಹೊಂದಿದ್ದರು.
ಅವರಲ್ಲಿ ಪ್ರಮುಖರಾದ ಕೆಲವರ ವಿವರ ಇಲ್ಲಿದೆ...
ಶ್ರೀ ಆದಿ ಶಂಕರಾಚಾರ್ಯರು ಮತ್ತು ಪ್ರಾಚೀನ ಋಷಿ-ಮುನಿಗಳು:
ತಮ್ಮ ಸಂಪೂರ್ಣ ದಿನಚರಿಯನ್ನು ಬ್ರಾಹ್ಮೀ ಮುಹೂರ್ತದ ಜಪ-ತಪ, ಯೋಗ ಮತ್ತು ವೇದಾಧ್ಯಯನದ ಮೂಲಕವೇ ಆರಂಭಿಸುತ್ತಿದ್ದರು.
ಮಹಾತ್ಮಗಾಂಧೀಜಿಯವರು ಪ್ರತಿದಿನ ಮುಂಜಾನೆ 4 ಗಂಟೆಗೆ ಏಳುತ್ತಿದ್ದರು, ಆಶ್ರಮದ ಪ್ರಾರ್ಥನೆ, ಭಗವದ್ಗೀತಾ ಪಠಣ, ದಿನಚರಿ ಬರೆಯುವುದು ಮತ್ತು ಪತ್ರಗಳಿಗೆ ಉತ್ತರಿಸುವ ಕೆಲಸಗಳನ್ನು ಸೂರ್ಯೋದಯಕ್ಕೆ ಮುನ್ನವೇ ಮುಗಿಸುತ್ತಿದ್ದರು.
ಸ್ವಾಮಿ ವಿವೇಕಾನಂದರು
ಮುಂಜಾನೆ 4ಗಂಟೆಯ ಧ್ಯಾನ ಅವರ ದಿನಚರಿಯ ಅವಿಭಾಜ್ಯ ಅಂಗವಾಗಿತ್ತು,"ಬೆಳಗಿನ ಮುಂಜಾವಿನ ಶಾಂತತೆಯಲ್ಲಿ ಮಾಡುವ ಧ್ಯಾನವು ಮೆದುಳಿಗೆ ಅಪಾರ ಶಕ್ತಿ ನೀಡುತ್ತದೆ" ಎಂದು ಅವರು ಪ್ರತಿಪಾದಿಸುತ್ತಿದ್ದರು.
ಛತ್ರಪತಿ ಶಿವಾಜಿ ಮಹಾರಾಜ್:
ಮುಂಜಾನೆಯ ನಸುಕಿನಲ್ಲೇ ಎದ್ದು ಭವಾನಿ ದೇವಿಯ ಪೂಜೆ, ಯೋಗಾಭ್ಯಾಸ ಮತ್ತು ಯುದ್ಧತಂತ್ರಗಳ ಯೋಜನೆಯನ್ನು ರೂಪಿಸುತ್ತಿದ್ದರು.
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ:
ಭಾರತದ ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿ ಕಲಾಂ ಅವರು ಮುಂಜಾನೆ 4 ಅಥವಾ 4.30ಕ್ಕೆ ಎದ್ದು ಸ್ನಾನ ಮುಗಿಸಿ, ಗಣಿತ ಅಭ್ಯಾಸ ಮತ್ತು ದಿನದ ಸಂಶೋಧನಾ ಯೋಜನೆಗಳನ್ನು ಆರಂಭಿಸುತ್ತಿದ್ದರು.
ಅಮೆರಿಕದ ಪ್ರಸಿದ್ಧ ವಿಜ್ಞಾನಿ ಮತ್ತು ತತ್ವಜ್ಞಾನಿ ಫ್ರಾಂಕ್ಲಿನ್ ಮುಂಜಾನೆ 4.30 ರಿಂದ 5 ರೊಳಗೆ ಎದ್ದು "ಇಂದು ನಾನು ಜಗತ್ತಿಗೆ ಯಾವ ಒಳ್ಳೆಯದನ್ನು ಮಾಡಬಹುದು?" ಎಂದು ಯೋಚಿಸಿ ದಿನ ಆರಂಭಿಸುತ್ತಿದ್ದರು,ಅವರ ಪ್ರಸಿದ್ಧ ನಾಣ್ನುಡಿ "Early to bed and early to rise, makes a man healthy, wealthy, and wise."
ಸರ್ ಎಂ. ವಿಶ್ವೇಶ್ವರಯ್ಯ:
ತಮ್ಮ ಕಟ್ಟುನಿಟ್ಟಾದ ಸಮಯಪಾಲನೆಗೆ ಹೆಸರಾಗಿದ್ದ ಇವರು ಮುಂಜಾನೆ ಬೇಗ ಎದ್ದು ಅಧ್ಯಯನ, ವಾಕಿಂಗ್ ಮತ್ತು ಎಂಜಿನಿಯರಿಂಗ್ ವಿನ್ಯಾಸಗಳ ಪರಿಶೀಲನೆ ನಡೆಸುತ್ತಿದ್ದರು.
ಆಧುನಿಕ ಜಾಗತಿಕ ಉದ್ಯಮಿಗಳು (CEOs)
ಆಧುನಿಕ ಜಗತ್ತಿನಲ್ಲಿ ಇದನ್ನು "5 AM Club" ಅಥವಾ "Morning Routine" ಎಂದು ಕರೆಯಲಾಗುತ್ತದೆ.
ಪ್ರಾಚೀನ ಕಾಲದಲ್ಲಿ ಆಧ್ಯಾತ್ಮಿಕ ಹಾಗೂ ಸಾಂಪ್ರದಾಯಿಕ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿದ್ದ ಬ್ರಾಹ್ಮೀ ಮುಹೂರ್ತವನ್ನು ಆಧುನಿಕ ವಿಜ್ಞಾನ, ವೈದ್ಯಕೀಯ ಶಾಸ್ತ್ರ ಮತ್ತು ಮನಶ್ಶಾಸ್ತ್ರಗಳು ಸಂಪೂರ್ಣವಾಗಿ ಸಮರ್ಥಿಸುತ್ತವೆ.
ಆಧುನಿಕ ವಿಜ್ಞಾನದ ದೃಷ್ಟಿಕೋನದಲ್ಲಿ ಈ ಸಮಯದಲ್ಲಿ ಸಿರ್ಕಾಡಿಯನ್ ರಿದಮ್ ಮತ್ತು ಹಾರ್ಮೋನ್‌ಗಳ ಸಮತೋಲನ ಮಾನವನ ದೇಹದಲ್ಲಿ ನೈಸರ್ಗಿಕ ಜೈವಿಕ ಗಡಿಯಾರವಿದೆ ಸೂರ್ಯೋದಯಕ್ಕೆ ಮುಂಚಿನ ಸಮಯದಲ್ಲಿ ದೇಹದ ಹಾರ್ಮೋನ್‌ಗಳಲ್ಲಿ ಪ್ರಮುಖ ಬದಲಾವಣೆಗಳಾಗುತ್ತವೆ.
ಮುಂಜಾನೆ ಅವಧಿಯಲ್ಲಿ ಮೆದುಳು ಕಾರ್ಟಿಸೋಲ್ ಹಾರ್ಮೋನ್ ಅನ್ನು ನೈಸರ್ಗಿಕವಾಗಿ ಬಿಡುಗಡೆ ಮಾಡುತ್ತದೆ ಇದು ದೇಹಕ್ಕೆ ನೈಸರ್ಗಿಕ ಶಕ್ತಿ, ಚುರುಕುತನ ಮತ್ತು ದಿನವನ್ನು ಎದುರಿಸುವ ಉತ್ಸಾಹವನ್ನು ನೀಡುತ್ತದೆ.
ಬೆಳಕು ಹರಿಯುವ ಮುನ್ನ ನಿದ್ರೆಯ ಹಾರ್ಮೋನ್ ಆದ ಮೆಲಟೋನಿನ್ ಮಟ್ಟ ಕಡಿಮೆಯಾಗಿ, ಜಾಗೃತಾವಸ್ಥೆಯ ಹಾರ್ಮೋನ್‌ಗಳು ಸಕ್ರಿಯಗೊಳ್ಳುತ್ತವೆ.
ನಿದ್ರೆಯಿಂದ ಎದ್ದ ತಕ್ಷಣದ ಮುಂಜಾನೆಯ ಶಾಂತತೆಯಲ್ಲಿ ಮಾನವನ ಮೆದುಳು Alpha (೮–೧೨ Hz) ಸ್ಥಿತಿಯಲ್ಲಿರುತ್ತದೆ,ಈ ಸ್ಥಿತಿಯು ಆಳವಾದ ಏಕಾಗ್ರತೆ, ಹೊಸ ವಿಷಯಗಳನ್ನು ಕಲಿಯುವ ಗ್ರಹಣ ಶಕ್ತಿ ಕಲ್ಪನಾಶಕ್ತಿ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ಗರಿಷ್ಠ ಮಟ್ಟದಲ್ಲಿಡುತ್ತದೆ.
ಸೂರ್ಯೋದಯಕ್ಕಿಂತ ಮುಂಚಿನ ತಂಪಾದ ವಾತಾವರಣದಲ್ಲಿ ಭೂಮಿಯ ಮೇಲ್ಮೈ ಸಮೀಪ ನ್ಯಾಸೆಂಟ್ ಆಕ್ಸಿಜನ್ ಹಾಗೂ ಸೂಕ್ಷ್ಮ ಪ್ರಮಾಣದ ಓಝೋನ್ ಅಂಶವಿರುತ್ತದೆ,ಇದು ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸಲು, ರಕ್ತ ಶುದ್ಧೀಕರಣಕ್ಕೆ ಮತ್ತು ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಕಾರಿ.
ಶಬ್ದ ಮಾಲಿನ್ಯ ರಹಿತ ಪರಿಸರದಲ್ಲಿ ಮಾನವ ಚಟುವಟಿಕೆಗಳ ಶಬ್ದವಿಲ್ಲದಿರುವುದರಿಂದ ಮೆದುಳಿಗೆ ಕನಿಷ್ಠ 'ಕಾರ್ಯಭಾರ' Sensory Overload ಇಲ್ಲದಿರುವುದು ಇರುತ್ತದೆ.
ಮನಶ್ಶಾಸ್ತ್ರದ ಪ್ರಕಾರ ಮಾನವನ 'ಇಚ್ಛಾಶಕ್ತಿ' (Willpower / Decision Making capacity) ಮುಂಜಾನೆ ಗರಿಷ್ಠವಾಗಿರುತ್ತದೆ.
ನಿಯಮಿತವಾಗಿ ಬೇಗ ಎದ್ದು ಬೆಳಕಿಗೆ ಮುಖಮಾಡುವವರಲ್ಲಿ ಸಿರೊಟೋನಿನ್ ಸಂತೋಷದ ಹಾರ್ಮೋನ್ ಸಮತೋಲನದಲ್ಲಿರುತ್ತದೆ ಇದು ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ.
ಪ್ರಾಚೀನರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಭಾಷೆಯಲ್ಲಿ ಹೇಳಿದ್ದನ್ನು ಆಧುನಿಕ ವಿಜ್ಞಾನವು "ಪೀಕ್ ಹಾರ್ಮೋನ್ ಸಮತೋಲನ ಮತ್ತು ಗರಿಷ್ಠ ಮೆದುಳಿನ ಕಾರ್ಯಕ್ಷಮತೆಯ ಸಮಯ" ಎಂದು ಜೈವಿಕ ನಿಯಮಗಳ ಮೂಲಕ ದೃಢಪಡಿಸಿದೆ.
ಹಿಂದೂ - ಜೈನ - ಬೌದ್ಧ- ಇಸ್ಲಾಂ ಮತ್ತು ಕ್ರಿಸ್ತದಮದಲ್ಲಿ ಬ್ರಾಹ್ಮಿ ಮಹೂರ್ತ ಬಳಕೆಯಲಿದೆ,
ಹೆಸರು ಮತ್ತು ವಿಧಿವಿಧಾನಗಳು ಬೇರೆಯಾಗಿದ್ದರೂ ಸೂರ್ಯೋದಯಕ್ಕೆ ಮುನ್ನ ವಾತಾವರಣದಲ್ಲಿರುವ ಪ್ರಶಾಂತತೆ, ಪರಿಶುದ್ಧತೆ ಮತ್ತು ಸಾತ್ವಿಕ ಶಕ್ತಿಯನ್ನು ಆಧ್ಯಾತ್ಮಿಕ ಉನ್ನತಿಗಾಗಿ ಬಳಸಿಕೊಳ್ಳಬೇಕೆಂಬುದು ವಿಶ್ವದ ಬಹುತೇಕ ಎಲ್ಲಾ ಧರ್ಮಗಳ ಸಮಾನ ಸಿದ್ಧಾಂತವಾಗಿದೆ.
#brahmimuhurtha #earlymorningblessing #willpower #mahatmagandhi #vivekananda
#abdulkalam
Comments
Post a Comment