ಘಟ್ಟಕ್ಕೆ_ಕರಾವಳಿ_ಭಾಗದ_ಜನರ_ವಲಸೆ_ಭಾಗ_5. ಈ ಸರಣಿ ಲೇಖನ ಮಾಲೆಗೆ ಅಭೂತಪೂವ೯ ವೀಕ್ಷಣೆ - ಪ್ರತಿಕ್ರಿಯೆಗಳು ಬರುತ್ತಿರುವುದು ನನಗೆ ಮತ್ತೆ ಮತ್ತೆ ಬರೆಯಲು ಹುಮ್ಮಸ್ಸು ತರುತ್ತಿದೆ. ವಲಸೆ ಎಂಬುದು ನಿರಂತರ ಮತ್ತು ಸರ್ವಕಾಲಿಕ ಸತ್ಯ, ಜಗತ್ತು ಇರುವವರೆಗೂ ವಲಸೆ ನಿಲ್ಲಲು ಸಾಧ್ಯವೇ ಇಲ್ಲ ಏಕೆಂದರೆ ಪ್ರಕೃತಿ ನಿಯಮ ಮತ್ತು ಮಾನವನ ಆಸೆಗಳು ನಿರಂತರವಾಗಿ ಬದಲಾಗುತ್ತಿರುತ್ತದೆ. ಕರಾವಳಿ ಭಾಗದ ಜನರು ವಿಶೇಷವಾಗಿ ದಕ್ಷಿಣ ಕನ್ನಡ - ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಎಲ್ಲಾ ಜಾತಿ ಧರ್ಮದ ಜನರು ಮಲೆನಾಡು ಮತ್ತು ಘಟ್ಟದ ಮೇಲಿನ ಶಿವಮೊಗ್ಗ - ಚಿಕ್ಕಮಗಳೂರು - ಕೊಡಗು ಮತ್ತು ಹಾಸನ ಜಿಲ್ಲೆಗಳಿಗೆ ನಡೆಸಿದ ವಲಸೆ ಇತಿಹಾಸದಲ್ಲಿ ಅತ್ಯಂತ ವಿಶಿಷ್ಟವಾದದ್ದು ಎಂದು ಪರಿಗಣಿಸ ಬಹುದು. #ಕರಾವಳಿಗರ ಘಟ್ಟದ ವಲಸೆಯನ್ನು ವಿಶ್ವದ ಮೂರು ಪ್ರಮುಖ ವಲಸೆಗಳಾದ #ಅಮೇರಿಕಾ_ಪಶ್ಚಿಮ ವಲಸೆ, #ಯುರೋಪಿನ_ಹ್ಯೂಗೆ_ನಾಟ್ಸ್ ವಲಸೆ ಮತ್ತು 1840 ರ ದಶಕದ ಕ್ಯಾಲಿಫೋರ್ನಿಯಾದ #ಚಿನ್ನದ_ಗಣಿ_ವಲಸೆ ಜೊತೆ ಸಮೀಕರಿಸಬಹುದೆಂದು #ಅಮೇರಿಕನ್_ಹಿಸ್ಟಾರಿಕಲ್_ಅಸೋಸಿಯೇಷನ್ ಲೇಖನದಲ್ಲಿ ಉಲ್ಲೇಖಿಸಿದೆಯಂತೆ ಆದ್ದರಿಂದ ನಮ್ಮ ಕರ್ನಾಟಕದ ಕರಾವಳಿಯ ಜನರ ಘಟ್ಟದ ವಲಸೆ ಮಹತ್ವದ ವಲಸೆ ವಿಚಾರವಾಗಿದೆ. ನಾನು ಕೂಡ ಈ ರೀತಿಯೇ ಕರಾವಳಿಯಿಂದ ಘಟ್ಟಕ್ಕೆ ವಲಸೇ ಬಂದ ಕುಟುಂಬಕ್ಕೆ ಸೇರಿದವನು ಆದ್...