Skip to main content

Posts

Showing posts with the label History of Anandapuram part 9

Blog number 1495. ಆನಂದಪುರಂ ಇತಿಹಾಸ ಭಾಗ-9

ಆನಂದಪುರಂ ಇತಿಹಾಸ ಬಾಗ_9. #ಆನಂದಪುರದ_ರಂಗನಾಥ_ಸ್ವಾಮಿ_ಮೂಲ_ಭಕ್ತರು #ನಿರಂತರ_ಅರವತ್ತು_ವರ್ಷದಿಂದ_ರಂಗನಾಥ_ದೇವರಿಗೆ_ನಿರಂತರ_ನಿತ್ಯಪೂಜೆಗೆ #ಹೂವಿನ_ಸೇವೆ_ನೀಡುತ್ತಿರುವ_ಪ್ರತಾಪ್_ಸಿಂಗ್_ಕುಟುಂಬ.    ಅಯ್ಯಂಗಾರರು ಆನಂದಪುರಂಗೆ ಬಂದು ಯಶಸ್ವಿ ಜಮೀನ್ದಾರರಾದ ನಂತರ ರಂಗನಾಥ ದೇವರ ಪೂಜೆ, ಉತ್ಸವಗಳಿಗೆ ತಮ್ಮ ಸ್ವಜಾತಿ ಅಯ್ಯ೦ಗಾರ್ ಅರ್ಚಕರುಗಳನ್ನು ನೇಮಿಸುತ್ತಾರೆ ಅದಕ್ಕೂ ಮೊದಲು ಆನಂದಪುರಂನ ಅಗ್ರಹಾರದ ಬ್ರಾಹ್ಮಣರಾದ ಜೋಯ್ಸ್ ರು ಗಳು ಅರ್ಚಕರಾಗಿರಬೇಕು ಯಾಕೆಂದರೆ ರಾಮಕೃಷ್ಣ ಅಯ್ಯಂಗಾರ್‌ ಕಾಲದಲ್ಲಿ ನೀಲ ಕಂಠ ಜೋಯ್ಸರ ಕುಟುಂಬವೇ ಆನಂದಪುರಂನ ಪುರೋಹಿತರಾಗಿದ್ದರು ಅವರ ಹಿಂದಿನ ತಲೆಮಾರು ರಂಗನಾಥ ದೇವಾಲಯದ ಪುರೋಹಿತರಾಗಿರುವ ಸಾಧ್ಯತೆ ತಳ್ಳಿಹಾಕಲಾಗುವುದಿಲ್ಲ, ನೀಲಕಂಠ ಜೋಯ್ಸರ ಸಹೋದರರೆ ಪತ್ರಕರ್ತರು ಸಾಹಿತಿಗಳು ಆಗಿರುವ ಅರಸಾಳಿನ ರಂಗನಾಥ ಜೋಯಿಸರು ಹೀಗೆ ಈ ಕುಟುಂಬದ ಕವಲುಗಳು ದೂರ ದೂರ ಹರಿದು ಹಂಚಿ ಹೋಗಿದ್ದಾರೆ.   ರಂಗನಾಥ ದೇವರಿಗೆ ಆನಂದಪುರಂ ಮಲಂದೂರಿನ ಕೃಷ್ಣ ಗೊಲ್ಲ ಸಮುದಾಯದವರು, ಆನಂದಪುರದ ಗಂಗಾಮತಸ್ಥರು ಮತ್ತು ಆಚಾಪುರ ಖ್ಯೆರಾ ಗ್ರಾಮಗಳ ಚೆಲುವಾದಿ ಸಮುದಾಯದವರು ಶತಮಾನಗಳಿಂದ ಮೂಲ ಭಕ್ತರು. ಈಗಲೂ ದೂರದ ಊರಲ್ಲಿ ನೆಲೆಸಿದ್ದರೂ ಪ್ರತಿ ವರ್ಷದ ರಥ ಸಪ್ತಮಿಯ ರಥೋತ್ಸವದಲ್ಲಿ ತಪ್ಪದೇ ಭಾಗವಹಿಸುತ್ತಾರೆ.   ಆನಂದಪುರದ ಊರ ಪುರೋಹಿತರಾದ ನೀಲಕಂಠ ಜೋಯಿಸರಿಗೆ ಕೃಷ್ಣಸ್ವಾಮಿ ...