ಕಸ್ತೂರಿ_ರಂಗನ್_ವರದಿ
ಕೇರಳ_ಮಾದರಿ_ಏನಾಗಿದೆ ...
ಕೇಂದ್ರ_ಪರಿಸರ_ಸಚಿವಾಲಯ_ಒಪ್ಪಿಲ್ಲ.
ಕಸ್ತೂರಿ ರಂಗನ್ ವರದಿ ವಿರೋದಿಸುವ ಭರದಲ್ಲಿ ಎಲ್ಲರೂ ಕೇರಳ ರಾಜ್ಯವನ್ನ ಹೊಗಳಿದ್ದಾರೆ, ಕೇರಳ ಮಾದರಿ ಅನುಕರಣನೀಯ ಎಂದಿದ್ದಾರೆ ಆದರೆ ವಾಸ್ತವದಲ್ಲಿ ಕೇರಳ ರಾಜ್ಯ ಸರ್ಕಾರದ ಗ್ರಾಮ ಮಟ್ಟದ ಪರಿಶೀಲನೆ ಮಾಡಿ 13108 ಚದರ ಕಿಲೋ ಮೀಟರ್ ಪ್ರದೇಶವನ್ನ 9993 ಚದರ ಕಿಲೋ ಮೀಟರ್ ವ್ಯಾಪ್ತಿಗೆ ಇಳಿಸಿದ್ದನ್ನು ಕೇಂದ್ರ ಪರಿಸರ ಸಚಿವಾಲಯ ಅಂತಿಮ ಮುದ್ರೆ ಒತ್ತಲಿಲ್ಲ.
7 ನೇ ಕರಡು ಅಧಿಸೂಚನೆಯಲ್ಲಿ ಯಥಾವತ್ತಾಗಿ 13108 ಚದರ ಕಿಲೋ ಮೀಟರ್ ವ್ಯಾಪ್ತಿಯನ್ನ ಉಳಿಸಿಕೊಂಡಿದೆ ಇದರಿಂದ ಕೇರಳ ರಾಜ್ಯ ಕೂಡ ಕಸ್ತೂರಿ ರಂಗನ್ ವರದಿಯ 7 ನೇ ಕರಡು ಅಧಿಸೂಚನೆ ಕನಾಟಕ ರಾಜ್ಯದಂತೆಯೇ ತಿರಸ್ಕರಿಸಿದೆ.
ಮೂಲ ಕಸ್ತೂರಿ ರಂಗನ್ ವರದಿಯಲ್ಲಿ ಕೇರಳದ 13,108 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ESA) ಎಂದು ಗುರುತಿಸಲಾಗಿತ್ತು.
ಕೇರಳ ಸರ್ಕಾರವು ಗ್ರಾಮ ಮಟ್ಟದಲ್ಲಿ ಭೌತಿಕ ಪರಿಶೀಲನೆ (Ground Verification) ನಡೆಸಿ ಸುಮಾರು 9,993 ಚದರ ಕಿ.ಮೀ.ಪ್ರದೇಶವನ್ನು ಮಾತ್ರ ಪರಿಸರ ಸೂಕ್ಷ್ಮ ವಲಯ (ESA) ಎಂದು ಗುರುತಿಸಿ ಕೇಂದ್ರಕ್ಕೆ ಕಳುಹಿಸಿತ್ತು.
ಆದರೆ ಕೇಂದ್ರ ಪರಿಸರ ಸಚಿವಾಲಯವು ಹೊರಡಿಸಿದ 7ನೇ ಕರಡು ಅಧಿಸೂಚನೆಯಲ್ಲಿ ಹಳೆಯ ಉಪಗ್ರಹ ಡೇಟಾವನ್ನೇ ಹೆಚ್ಚಾಗಿ ಆಧರಿಸಿ ಸುಮಾರು 13,108 ಚದರ ಕಿ.ಮೀ. ಗೂ ಹೆಚ್ಚಿನ ವಿಸ್ತೀರ್ಣವನ್ನು ESA ವ್ಯಾಪ್ತಿಯಲ್ಲೇ ಉಳಿಸಿಕೊಂಡಿತು.
ಕೇರಳ ರಾಜ್ಯ ನಡೆಸಿದ ಸಮೀಕ್ಷೆಗೆ ಸಂಪೂರ್ಣವಾಗಿ ಇನ್ನೂ ಕಾನೂನಾತ್ಮಕ ಅಂತಿಮ ಮುದ್ರೆ (Final Notification) ಸಿಕ್ಕಿಲ್ಲ.
ಕೇರಳದ ತಳಮಟ್ಟದ ಭೌತಿಕ ಸಮೀಕ್ಷೆಯ ಆಧಾರದ ಮೇಲೆ ಕೇಂದ್ರ ಸರ್ಕಾರವು ಇದನ್ನು ಪರಿಶೀಲಿಸಿ, ತನ್ನ ಕರಡುಗಳಲ್ಲಿ ಸುಮಾರು 9,993 ಚದರ ಕಿಲೋಮೀಟರ್‌ಗೆ ಇಳಿಸಲು ತಾತ್ವಿಕವಾಗಿ ಸಮ್ಮತಿಸಿತು.
ಅಂದರೆ ಸುಮಾರು 3,100 ಚದರ ಕಿ.ಮೀ.ಗೂ ಹೆಚ್ಚು ಜನವಸತಿ ಮತ್ತು ಕೃಷಿ ಪ್ರದೇಶಗಳನ್ನು ಕೈಬಿಡಲು ಕೇಂದ್ರದ ಮೇಲೆ ಒತ್ತಡ ಹೇರುವಲ್ಲಿ ಸಮೀಕ್ಷೆ ಯಶಸ್ವಿಯಾಯಿತು.
ಯಾವುದೇ ಸಮೀಕ್ಷೆ ಇಲ್ಲದೆ ಕೇವಲ ರಾಜಕೀಯವಾಗಿ ವಿರೋಧಿಸುತ್ತಿರುವ ಬೇರೆ ರಾಜ್ಯಗಳಿಗಿಂತ ಭಿನ್ನವಾಗಿ, ಕೇರಳದ ಬಳಿ 'ಇದು ಅರಣ್ಯ, ಇದು ರಬ್ಬರ್ ತೋಟ, ಇದು ಮನೆ' ಎಂದು ಸಾಬೀತುಪಡಿಸಲು ಜಿಪಿಎಸ್ (GPS) ಆಧಾರಿತ ಕಂದಾಯ ದಾಖಲೆಗಳಿವೆ.
ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಮತ್ತು ಹಸಿರು ನ್ಯಾಯಾಧಿಕರಣದಲ್ಲಿ (NGT) ವಾದ ಮಂಡಿಸಲು ಇದು ಕೇರಳ ರಾಜ್ಯಕ್ಕೆ ಪ್ರಬಲ ಅಸ್ತ್ರವಾಗಿದೆ.
#ಈಗಿನ_ಸಮಸ್ಯೆಯೇನು?..
ಕೇರಳ ಸರ್ಕಾರ ಮತ್ತು ಅಲ್ಲಿನ ರೈತರ ಬೇಡಿಕೆ ಏನೆಂದರೆ"ನಾವು ಗುರುತಿಸಿದ 9,993 ಚ.ಕಿ.ಮೀ. ಹೊರತುಪಡಿಸಿ, ಉಳಿದಿರುವ 123 ಗ್ರಾಮಗಳ ಜನವಸತಿ ಪ್ರದೇಶಗಳನ್ನು ಶೇಕಡಾ 100ರಷ್ಟು ಪೂರ್ಣವಾಗಿ ಅಂತಿಮ ಗೆಜೆಟ್‌ನಿಂದಲೇ ಕೈಬಿಡಬೇಕು" ಎಂಬುದು ಆದರೆ ಕೇಂದ್ರ ಪರಿಸರ ಸಚಿವಾಲಯವು ಪ್ರಕ್ರಿಯೆಯ ನಿಯಮಾವಳಿಗಳ ಕಾರಣದಿಂದ ಪ್ರತಿ ಬಾರಿಯೂ ಹಳೆಯ ಕರಡು ಅಧಿಸೂಚನೆಯನ್ನೇ ನವೀಕರಿಸಿ (Re-issue) ಕಳುಹಿಸುತ್ತಿದೆ.
ಅಂತಿಮ ಅಧಿಸೂಚನೆ (Final Notification) ಹೊರಬೀಳುವವರೆಗೂ ಈ 3,100 ಚ.ಕಿ.ಮೀ. ಪ್ರದೇಶವು ಕಾನೂನಿನ ಪ್ರಕಾರ ಪೂರ್ಣ ಸುರಕ್ಷಿತವಲ್ಲ ಎಂಬ ಆತಂಕ ಕೇರಳ ರಾಜ್ಯಿಕ್ಕಿದೆ.
ಕೇರಳ ರಾಜ್ಯದ ಈ ಸಮೀಕ್ಷೆ ಕೆಲಸಕ್ಕೆ ಬಂದಿದೆ ಅದರ ಬಲದಿಂದಲೇ ಕೇರಳವು ಸಾವಿರಾರು ಚದರ ಕಿಲೋಮೀಟರ್ ಕೃಷಿಭೂಮಿಯನ್ನು ರಕ್ಷಿಸಿಕೊಂಡಿದೆ ಆದರೆ ಆ ವರದಿಯನ್ನು ಕೇಂದ್ರ ಸರ್ಕಾರವು ಶೇಕಡಾ ನೂರರಷ್ಟು ಒಪ್ಪಿ ಅಧಿಕೃತ ಗೆಜೆಟ್ ಹೊರಡಿಸದಿರುವುದೇ ಇಂದಿನ ತಿರಸ್ಕಾರಕ್ಕೆ ಕಾರಣ.
ರಾಜ್ಯ ಸಲ್ಲಿಸಿದ ಕಡಿತಗೊಳಿಸಿದ ನಕ್ಷೆಯನ್ನು ಕೇಂದ್ರ ಪೂರ್ಣವಾಗಿ ಒಪ್ಪಲಿಲ್ಲ ಇನ್ನೂ ಹಲವು ಜನವಸತಿ ಹಾಗೂ ಕೃಷಿ ಪ್ರದೇಶಗಳು ESA ವ್ಯಾಪ್ತಿಯಲ್ಲೇ ಇದೆ.
ಕರಡು ಅಧಿಸೂಚನೆಯ ಪ್ರಕಾರ ಕೇರಳದ ಇಡುಕ್ಕಿ, ವಯನಾಡು ಸೇರಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿಯ ಸುಮಾರು 123ಕ್ಕೂ ಹೆಚ್ಚು ಗ್ರಾಮಗಳು ಇನ್ನೂ ಈ ವಲಯದಲ್ಲಿವೆ.
ಈ ಗ್ರಾಮಗಳಲ್ಲಿ ಲಕ್ಷಾಂತರ ಸಣ್ಣ ರೈತರ ಏಲಕ್ಕಿ, ರಬ್ಬರ್, ಕಾಫಿ, ಚಹಾ ತೋಟಗಳು ಮತ್ತು ಮನೆಗಳಿವೆ.
ಈ ಪ್ರದೇಶಗಳು ESA ಅಡಿಗೆ ಬಂದರೆ ನಿರ್ಮಾಣ ಕಾರ್ಯಗಳು, ಕೃಷಿ ವಿಸ್ತರಣೆ ಮತ್ತು ಸಾಲ ಪಡೆಯುವುದಕ್ಕೆ ತೊಡಕಾಗುತ್ತದೆ ಎಂಬುದು ಸ್ಥಳೀಯರ ಆತಂಕ.
ಇಡುಕ್ಕಿ ಮತ್ತು ವಯನಾಡು ಭಾಗಗಳಲ್ಲಿ ಪ್ರಬಲವಾಗಿರುವ ಕ್ರಿಶ್ಚಿಯನ್ ಚರ್ಚ್‌ಗಳು ಹಾಗೂ ರೈತ ಸಂಘಟನೆಗಳು ಕಸ್ತೂರಿ ರಂಗನ್ ವರದಿಯ ವಿರುದ್ಧ ಸತತ ಹೋರಾಟ ನಡೆಸುತ್ತಿವೆ.
ಜನವಸತಿ ಇರುವ ಒಂದೇ ಒಂದು ಸೆಂಟ್ ಭೂಮಿಯೂ ESA ವ್ಯಾಪ್ತಿಗೆ ಬರಬಾರದು ಎಂಬುದು ಅವರ ಕಟ್ಟುನಿಟ್ಟಿನ ಬೇಡಿಕೆ.
ಈ ರಾಜಕೀಯ ಮತ್ತು ಸಾಮಾಜಿಕ ಒತ್ತಡದಿಂದಾಗಿ ಯಾವುದೇ ಸರ್ಕಾರವೂ ಕೇಂದ್ರದ ಪ್ರಸ್ತುತ ಕರಡನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿಯಿದೆ.
ಕರಡು ಅಧಿಸೂಚನೆಯಲ್ಲಿ ಕಲ್ಲು ಗಣಿಗಾರಿಕೆ, ಕೆಂಪು ವರ್ಗದ ಕೈಗಾರಿಕೆಗಳು ಮತ್ತು ಬೃಹತ್ ನಿರ್ಮಾಣಗಳಿಗೆ ನಿಷೇಧ ಹೇರಲಾಗಿದೆ.
ಕೇರಳದಂತಹ ಭೌಗೋಳಿಕವಾಗಿ ಚಿಕ್ಕದಾದ ಮತ್ತು ಜನಸಾಂದ್ರತೆ ಹೆಚ್ಚಿರುವ ರಾಜ್ಯದಲ್ಲಿ, ಈ ನಿರ್ಬಂಧಗಳಿಂದಾಗಿ ರಸ್ತೆ, ಸೇತುವೆ, ಪ್ರವಾಸೋದ್ಯಮ ಮತ್ತು ಆಸ್ಪತ್ರೆಗಳಂತಹ ಮೂಲಸೌಕರ್ಯ ಅಭಿವೃದ್ಧಿಗೆ ತೀವ್ರ ಅಡ್ಡಿಯಾಗುತ್ತದೆ ಎಂಬುದು ರಾಜ್ಯದ ವಾದ.
"ಕೇರಳ ಸರ್ಕಾರವು ತಾನು ಮಾಡಿದ ನೈಜ ಸಮೀಕ್ಷೆಯಂತೆ ಕೃಷಿ-ಜನವಸತಿ ಪ್ರದೇಶಗಳನ್ನು ಸಂಪೂರ್ಣವಾಗಿ ಹೊರಗಿಡಲು ಸಿದ್ಧವಿದೆಯೇ ಹೊರತು, ಕೇಂದ್ರ ಸರ್ಕಾರ ಹಳೆಯ ಲೆಕ್ಕಾಚಾರದಂತೆ ಹೆಚ್ಚುವರಿ ಭೂಮಿಯನ್ನು ESA ವ್ಯಾಪ್ತಿಯಲ್ಲಿ ಸೇರಿಸಿರುವುದನ್ನು ಒಪ್ಪಲು ಸಿದ್ಧವಿಲ್ಲ".
ಇದೇ ಕಾರಣಕ್ಕೆ ಕೇರಳವೂ 7ನೇ ಕರಡನ್ನು ತಿರಸ್ಕರಿಸಿ ತನ್ನ ಶಿಫಾರಸುಗಳನ್ನು ಮಾತ್ರ ಅಂತಿಮಗೊಳಿಸುವಂತೆ ಪಟ್ಟುಹಿಡಿದಿದೆ.
#kasturirangan #EcoSensitiveZone #kerala
#westernghats #govtofindia
Comments
Post a Comment