ಕಲ್ಲಡ್ಕದ ಕೇಟಿ ಚಹಾಕ್ಕೆ 110 ವರ್ಷದ ಇತಿಹಾಸ, ರಾಷ್ಟ್ರೀಯ ಹೆದ್ದಾರಿ ಅಗಲಿಕರಣದಿಂದ ಹೊಸ ಕಟ್ಟಡದಲ್ಲಿ ಲಕ್ಷ್ಮೀ ವಿಲಾಸ್ ಪುನಾರಾರಂಭವಾಗಿದೆ, ನೀವೂ ಮನೆಯಲ್ಲಿ ಕೇಟಿ ಚಹಾ ತಯಾರಿಸುವ ಸುಲಭ ರೆಸಿಪಿ ಇಲ್ಲಿದೆ.
#ಕಲ್ಲಡ್ಕದ_ಕೆಟಿ_ಚಹಾ_ಎಂಬ_ಮ್ಯಾಜಿಕ್_ಚಹಾ #ನೂರಾ_ಹತ್ತು_ಪುರಾತನದ್ದು #ಈಗ_ರಾಷ್ಟ್ರೀಯ_ಹೆದ್ದಾರಿ_ಅಗಲಿಕರಣದಿಂದ_ಹೊಸ_ಕಟ್ಟಡದಲ್ಲಿ #ಕಲ್ಲಡ್ಕದ_ಕೇಟಿ_ನೀವು_ಮನೆಯಲ್ಲೂ_ಮಾಡುವ_ಸುಲಭ_ರೆಸಿಪಿ. ಮಂಗಳೂರಿಂದ ಪುತ್ತೂರು, ಸುಳ್ಯ, ಮೈಸೂರು ಮಾಗ೯ದಲ್ಲಿ ಪ್ರಯಾಣಿಸುವಾಗ ಕಲ್ಲಡ್ಕಎಂಬ ಊರು ಸಿಗುತ್ತದೆ, ಇಲ್ಲಿನ ಪೇಟೆಯ ಎಡ ಭಾಗದಲ್ಲಿ ಒಂದು ಪ್ರಸಿದ್ದವಾದ ಪುರಾತನವಾದ (110 ವರ್ಷ) ಒಂದು ಹೋಟೆಲ್ ಇದೆ. ಇದರ ಮಾಲಿಕರ ಮೂರನೇ ತಲೆಮಾರಿನವರು ತಮ್ಮ ಹಿರಿಯರ ಮಾಗ೯ದಶ೯ನದಲ್ಲಿಯೇ ಯಶಸ್ವಿಯಾಗಿ ಈಗಲೂ ನಡೆಸುತ್ತಿದ್ದಾರೆ. ಇದರ ಹೆಸರು #ಲಕ್ಷ್ಮಿ_ನಿವಾಸ_ಕೆಟಿ_ಹೋಟೆಲ್, ಇಲ್ಲಿನ ಚಹಾವೇ ವಿಶೇಷ ಗ್ಲಾಸ್ ನ ಕೆಳಭಾಗದ ಹಾಲು ಮತ್ತು ಮೇಲ್ಬಾಗದ ಚಹಾ ಡಿಕಾಕ್ಷನ್ ಒಂದೇ ಗ್ಲಾಸಿನಲ್ಲಿದ್ದರೂ ಬೇರೆ ಬೇರೆ ಆಗಿ ಇರುತ್ತದೆ, ಚಮಚದಲ್ಲಿ ಮಿಶ್ರ ಮಾಡಿ ಕುಡಿಯಬೇಕು. ಈ ಚಹಾ ತಯಾರಿಸುವುದು ನಿಪುಣ ಕೆಲಸಗಾರರಿಗೆ ಮಾತ್ರ ಸಾಧ್ಯ!, ಮೊದಲೆಲ್ಲ ಪೋಟೋ ತೆಗೆಯಲು ಬಿಡುತ್ತಿರಲಿಲ್ಲ 2019 ರಲ್ಲಿ ಪುತ್ತೂರಿನಿ೦ದ ಬರುವಾಗ ಇಲ್ಲಿನ ವಿಶೇಷ ಕೆಟಿ ಚಹ ಸೇವಿಸಲು ಇಲ್ಲಿಗೆ ಹೋಗಿದ್ದಾಗ ಪೋಟೋ ವಿಡಿಯೋ ತೆಗೆಯಲು ಅನುಮತಿ ನೀಡಿದರು. ಈಗ ಕಲ್ಲಡ್ಕದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಗಲಿಕರಣದಿಂದ 110 ವರ್ಷದ ಈ ಕೆ.ಟಿ. ಹೋಟೆಲ...