Skip to main content

Posts

Showing posts with the label Ikkeri Shripad now Additional district magistrate of Davangere district

Blog number 900. ಇಕ್ಕೇರಿ ಶ್ರೀಪಾದರು ಇವತ್ತು ದಾವಣಗೆರೆ ಜಿಲ್ಲಾ ಅಡಿಷನಲ್ ಡಿಸ್ಟ್ರಿಕ್ಟ್ & ಸೆಷನ್ ಜಡ್ಜ್, ಇವತ್ತು ನನ್ನ ಅತಿಥಿ, ಇವರ ಈ ಜೀವನ ಪಥ ಹೂವಿನ ಹಾಸಿಗೆ ಆಗದೇ ಕಲ್ಲು ಮುಳ್ಳಿನ ಕಠಿಣ ಪಥವಾಗಿತ್ತು ಇದು ಅನೇಕರಿಗೆ ಪ್ರೇರಣೆ ನೀಡುವ ನೀತಿ ಪಾಠವೂ ಹೌದು.

#ಸತತ_ಪ್ರಯತ್ನದ_ಫಲ_ಸಿಹಿ_ಎನ್ನಲು_ಇವರ_ಜೀವನವೇ_ಮಾದರಿ. #ವಕೀಲರ_ಗುಮಸ್ಥರಾಗಿ_ವಕೀಲರಾಗಿ_ಈಗ_ದಾವಣಗೆರೆ_ಜಿಲ್ಲಾ_ಅಡಿಷನಲ್_ಡಿಸ್ಟ್ರಿಕ್ಟ್_&_ಸೆಷನ್_ಜಡ್ಜ್. #ನನ್ನ_ಆತ್ಮೀಯ_ಗೆಳೆಯ_ನನ್ನ_ಇವತ್ತಿನ_ಅತಿಥಿ.   ಸಾಗರದ ಪ್ರಖ್ಯಾತ ವಕೀಲರಾದ ಈಶ್ವರಪ್ಪ ನಾಯಕರ ಹತ್ತಿರ ಗುಮಸ್ತರಾಗಿದ್ದಾಗ ನನ್ನ ಅವರ ಗೆಳೆತನ ಅವರು ವಕೀಲರಾದಾಗಲೂ ಮುಂದುವರಿಯಿತು ಸಾಗರದಿಂದ (ಕೆಳದಿ ಅರಸ ವೆಂಕಟಪ್ಪ ನಾಯಕ ತನ್ನ ಅಜ್ಜ ಸದಾಶಿವ ನಾಯಕರ ಹೆಸರಲ್ಲಿ ನಿರ್ಮಿಸಿದ ಪಟ್ಟಣ ಸದಾಶಿವ ಸಾಗರ) ಇಕ್ಕೇರಿಯ ರಾಜ ಮಾರ್ಗದಲ್ಲಿನ ಪುರಾತನ ದೇವಸ್ಥಾನ ಚೌಡೇಶ್ವರಿ ದೇವಸ್ಥಾನದ ಪೂಜಾ ಕಾರ್ಯಕ್ರಮ ನಡೆಸುತ್ತಿದ್ದ ಕುಟುಂಬ ಇವರದ್ದು.   ಅಲ್ಲಿ 1996 ರಲ್ಲಿ ನಡೆದ ಕರಸೇವೆಯಲ್ಲಿ ನಾನು ಭಾಗವಹಿಸಿದ್ದೆ.   ಇವರ ತಾಯಿ ಸರಸ್ವತಮ್ಮ 1993 - 98 ರ ಅವದಿಯಲ್ಲಿ ಸಾಗರ ತಾಲ್ಲೂಕಿನ ಕಲ್ಮನೆ ಗ್ರಾ.ಪಂ.ಅಧ್ಯಕ್ಷಿಣಿ, ಎಂ.ಜಿ.ಕೃಷ್ಣಮೂರ್ತಿ ಜಿಲ್ಲಾ ಪಂಚಾಯತ್ ಸದಸ್ಯರು, ಶ್ರೀಮತಿ ವಸುದಾ ಶಮಾ೯ (ಇಕ್ಕೇರಿ ನಾರಾಯಣ ಶರ್ಮಾರ ಸೊಸೆ) ತಾಲ್ಲುಕ್ ಪಂಚಾಯತ್ ಸದಸ್ಯೆ.    ಈ ಅವದಿಯಲ್ಲಿ ಒಂದು ದಿನ ನನಗೆ ಪೋನ್ ಬಂತು, ನಾನು ಮ್ಯಾಜಿಸ್ಟ್ರೇಟ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದೇನೆ ನಿಮ್ಮ ಬೇಟಿಗೆ ಬರುತ್ತಿದ್ದೇನೆ ಅಂತ.   ಸಂತೋಷದ ವಿಚಾರ ತಿಳಿದ ನಾನು ಶಾಲು, ಹಾರ ತರಿಸಿಟ್ಟು ಬಂದ ಜಡ್ಜ್ ರಿಗೆ ನಮ್ಮ ತಂದೆಯಿಂದ ಸನ್ಮಾನಿಸಿ ಸಂತೋಷ ಪಟ್ಟೆ ನಂತರ ಗ...