Blog number 900. ಇಕ್ಕೇರಿ ಶ್ರೀಪಾದರು ಇವತ್ತು ದಾವಣಗೆರೆ ಜಿಲ್ಲಾ ಅಡಿಷನಲ್ ಡಿಸ್ಟ್ರಿಕ್ಟ್ & ಸೆಷನ್ ಜಡ್ಜ್, ಇವತ್ತು ನನ್ನ ಅತಿಥಿ, ಇವರ ಈ ಜೀವನ ಪಥ ಹೂವಿನ ಹಾಸಿಗೆ ಆಗದೇ ಕಲ್ಲು ಮುಳ್ಳಿನ ಕಠಿಣ ಪಥವಾಗಿತ್ತು ಇದು ಅನೇಕರಿಗೆ ಪ್ರೇರಣೆ ನೀಡುವ ನೀತಿ ಪಾಠವೂ ಹೌದು.
#ವಕೀಲರ_ಗುಮಸ್ಥರಾಗಿ_ವಕೀಲರಾಗಿ_ಈಗ_ದಾವಣಗೆರೆ_ಜಿಲ್ಲಾ_ಅಡಿಷನಲ್_ಡಿಸ್ಟ್ರಿಕ್ಟ್_&_ಸೆಷನ್_ಜಡ್ಜ್.
#ನನ್ನ_ಆತ್ಮೀಯ_ಗೆಳೆಯ_ನನ್ನ_ಇವತ್ತಿನ_ಅತಿಥಿ.
ಸಾಗರದ ಪ್ರಖ್ಯಾತ ವಕೀಲರಾದ ಈಶ್ವರಪ್ಪ ನಾಯಕರ ಹತ್ತಿರ ಗುಮಸ್ತರಾಗಿದ್ದಾಗ ನನ್ನ ಅವರ ಗೆಳೆತನ ಅವರು ವಕೀಲರಾದಾಗಲೂ ಮುಂದುವರಿಯಿತು ಸಾಗರದಿಂದ (ಕೆಳದಿ ಅರಸ ವೆಂಕಟಪ್ಪ ನಾಯಕ ತನ್ನ ಅಜ್ಜ ಸದಾಶಿವ ನಾಯಕರ ಹೆಸರಲ್ಲಿ ನಿರ್ಮಿಸಿದ ಪಟ್ಟಣ ಸದಾಶಿವ ಸಾಗರ) ಇಕ್ಕೇರಿಯ ರಾಜ ಮಾರ್ಗದಲ್ಲಿನ ಪುರಾತನ ದೇವಸ್ಥಾನ ಚೌಡೇಶ್ವರಿ ದೇವಸ್ಥಾನದ ಪೂಜಾ ಕಾರ್ಯಕ್ರಮ ನಡೆಸುತ್ತಿದ್ದ ಕುಟುಂಬ ಇವರದ್ದು.
ಅಲ್ಲಿ 1996 ರಲ್ಲಿ ನಡೆದ ಕರಸೇವೆಯಲ್ಲಿ ನಾನು ಭಾಗವಹಿಸಿದ್ದೆ.
ಇವರ ತಾಯಿ ಸರಸ್ವತಮ್ಮ 1993 - 98 ರ ಅವದಿಯಲ್ಲಿ ಸಾಗರ ತಾಲ್ಲೂಕಿನ ಕಲ್ಮನೆ ಗ್ರಾ.ಪಂ.ಅಧ್ಯಕ್ಷಿಣಿ, ಎಂ.ಜಿ.ಕೃಷ್ಣಮೂರ್ತಿ ಜಿಲ್ಲಾ ಪಂಚಾಯತ್ ಸದಸ್ಯರು, ಶ್ರೀಮತಿ ವಸುದಾ ಶಮಾ೯ (ಇಕ್ಕೇರಿ ನಾರಾಯಣ ಶರ್ಮಾರ ಸೊಸೆ) ತಾಲ್ಲುಕ್ ಪಂಚಾಯತ್ ಸದಸ್ಯೆ.
ಈ ಅವದಿಯಲ್ಲಿ ಒಂದು ದಿನ ನನಗೆ ಪೋನ್ ಬಂತು, ನಾನು ಮ್ಯಾಜಿಸ್ಟ್ರೇಟ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದೇನೆ ನಿಮ್ಮ ಬೇಟಿಗೆ ಬರುತ್ತಿದ್ದೇನೆ ಅಂತ.
ಸಂತೋಷದ ವಿಚಾರ ತಿಳಿದ ನಾನು ಶಾಲು, ಹಾರ ತರಿಸಿಟ್ಟು ಬಂದ ಜಡ್ಜ್ ರಿಗೆ ನಮ್ಮ ತಂದೆಯಿಂದ ಸನ್ಮಾನಿಸಿ ಸಂತೋಷ ಪಟ್ಟೆ ನಂತರ ಗೊತ್ತಾಗಿದ್ದು ಇವರಿಗೆ ಜಡ್ಜ್ ವೃತ್ತಿಗೆ ಹೋಗಬೇಕೋ ಬೇಡವೋ ಗೊಂದಲವಿದೆ ಅಂತ.
ಆಗೆಲ್ಲ ಜಡ್ಜ್ ಆದರೆ ಸಮಾಜದಲ್ಲಿ ಬೆರೆಯುವ೦ತೆ ಇಲ್ಲ, ಕೆಲಸದ ಒತ್ತಡ ಇತ್ಯಾದಿ, ಆ ಕಾಲದಲ್ಲಿ ಜಡ್ಜ್ ಆದವರು ರಾಜೀನಾಮೆ ನೀಡಿ ವಕೀಲ ವೃತ್ತಿಗೆ ವಾಪಾಸು ಬರುತ್ತಿದ್ದರು.
ನಮ್ಮ ತಂದೆ ಹಣಕ್ಕಿಂತ ವೃತ್ತಿ ಗೌರವ, ಅಪಾರ ಅವಕಾಶ ಇರುವ ಜಡ್ಜ್ ವೃತ್ತಿ ಬಗ್ಗೆ ವಿವರಿಸಿದ ನೆನಪು.
ಕಳೆದ 26 ವರ್ಷದ ವೃತ್ತಿ ಜೀವನದಲ್ಲಿ ಇವತ್ತು ದಾವಣಗೆರೆಯ ಜಿಲ್ಲಾ ನ್ಯಾಯಾಲಯದಲ್ಲಿ ಅಡಿಷನಲ್ ಡಿಸ್ಟ್ರಿಕ್ಟ್ & ಸೆಷನ್ ಜಡ್ಜ್ ಆಗಿದ್ದಾರೆ.
ನನ್ನ ತಂದೆ ತಾಯಿ ಹೆಸರಲ್ಲಿ #ಶ್ರೀಕೃಷ್ಣ_ಸರಸ_ಕನ್ವೆನ್ಷನ್_ಹಾಲ್ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು, 2019 ರಲ್ಲಿ ನನ್ನ ಮಗಳ ಮದುವೆಯಲ್ಲಿ ದಂಪತಿ ಸಮೇತ ಬಂದು ಆಶ್ರೀವದಿಸಿದ್ದರು ಅವತ್ತು ಹೈಕೋರ್ಟ್ ನ್ಯಾಯದೀಶರಾದ #ಕೃಷ್ಣ_ದೀಕ್ಷಿತರೂ ಬಂದಿದ್ದರು.
ನಿನ್ನೆ ಭಾನುವಾರ (26- ಜೂನ್ -2022) ದಾವಣಗೆರೆಯಿಂದ ಕುಟುಂಬ ಸಮೇತ ಸಾಗರದ ಇಕ್ಕೇರಿಯಲ್ಲಿನ ಅವರ ತಾಯಿ ಸರಸ್ವತಮ್ಮರ ಆರೋಗ್ಯ ವಿಚಾರಿಸಲು ಬರುವ ಮಾರ್ಗದಲ್ಲಿ ನನ್ನ ಲಾಡ್ಜ್ ಆಪೀಸಿಗೆ ಬಂದಾಗ ನನ್ನ ಮೊದಲ ಕಾದಂಬರಿ #ಬೆಸ್ತರರಾಣಿ_ಚಂಪಕ ಮತ್ತು ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಆಭ್ಯಂಜನ ನೆನಪಿಗಾಗಿ ನೀಡಿದೆ ಹಾಗೆಯೆ ನಮ್ಮ ಊರಿನ ಉದಯೋನ್ಮಿತ ಉದ್ಯಮಿಯಾದ #ಮು೦ಬಾಳಿನ_ಪ್ರಸಾದರ ಸಾವಯುವ ಕಷಾಯ ಮತ್ತು ಅರಿಶಿಣ ಪುಡಿ ರುಚಿ ನೋಡಲು ವಿನಂತಿಸಿದೆ.
ಸಾಗರ ತಾಲ್ಲೂಕಿನ ಇಕ್ಕೇರಿಯ ಶ್ರೀಪಾದರ ಜೀವನದ ಮಾರ್ಗ ಹೂವಿನ ಹಾಸಿಗೆ ಆಗಿರಲಿಲ್ಲ ಕಲ್ಲು ಮುಳ್ಳಿನ ದುರ್ಗಮ ಹಾದಿ ಕ್ರಮಿಸಿದ ಅವರ ಜೀವನ ಚರಿತ್ರೆ ಎಲ್ಲರಿಗೂ ಒಂದು ನೀತಿ ಪಾಠವಾಗಿದೆ.
Comments
Post a Comment