Blog number 894.ಬಾರತದ ಕ್ರಿಕೆಟ್ ನಲ್ಲಿ ಬೌಲಿಂಗ್ ಮಾಂತ್ರಿಕ ಎನ್ನಿಸಿದ್ದ ಇ.ಎ.ಎಸ್. ಪ್ರಸನ್ನರ ಜನ್ಮಸ್ಥಳ ಶಿವಮೊಗ್ಗದ ದುರ್ಗಿಗುಡಿ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಜಿ ಆರ್.ವಿಶ್ವನಾಥರ ಜನ್ಮಸ್ಥಳ, ಇವರಿಬ್ಬರ ಮಾಹಿತಿಯ ಚಿತ್ರ ಪಟ ಶಿವಮೊಗ್ಗದ ಕ್ರಿಕೆಟ್ ಸ್ಟೇಡಿಯಂನಲ್ಲಿ ಇರುವಂತಾಗಲಿ, ಇವರಿಬ್ಬರ ಗೌರವಾರ್ಥ ಪ್ರಮುಖ ರಸ್ತೆಗೆ ನಾಮಕರಣ ಆಗಲಿ ಎಂದು ಜಿಲ್ಲೆಯ ಕ್ರಿಕೆಟ್ ಪ್ರಿಯರು ಒತ್ತಾಯಿಸಲಿ.
#ಕೇಂದ್ರಸರ್ಕಾರದ_ಪದ್ಮಶ್ರೀ_ಪ್ರಶಸ್ತಿ_ವಿಜೇತರು
#ಪ್ರಸನ್ನ_ಹುಟ್ಟಿದ್ದು_ಶಿವಮೊಗ್ಗದ_ದುರ್ಗಿಗುಡಿಯಲ್ಲಿ
#ಅವರು_ಜನಿಸಿದ_ಸ್ಥಳದಲ್ಲಿ_ಈಗ_ಹೋಟೆಲ್_ನಿಮಾ೯ಣ_ಆಗಿದೆ_ಅಂತೆ.
#ಪತ್ರಕರ್ತರಾದ_ಸಾಗರದ_ಡಿ_ಪಿ_ಸತೀಶ್_ನಿನ್ನೆ_ಅವರ_ಬೇಟಿ_ಮಾಡಿದ_ಬಗ್ಗೆ_ಪೋಸ್ಟಲ್ಲಿ_ಬರೆದಿದ್ದಾರೆ.
#ಜಿ_ಆರ್_ವಿಶ್ವನಾಥ್_ಭದ್ರಾವತಿಯವರು.
#ಶಿವಮೊಗ್ಗ_ಕ್ರಿಕೆಟ್_ಸ್ಟೇಡಿಯ೦ನಲ್ಲಿ_ಜಿಲ್ಲೆಯ_ಕ್ರಿಕೆಟ್_ದಿಗ್ಗಜರಾದ_ಪ್ರಸನ್ನ_ಜಿಆರ್_ವಿಶ್ವನಾಥರ
#ಚಿತ್ರ_ಮಾಹಿತಿ_ಆಳವಡಿಸಲಿ
ನಿನ್ನೆ ಗೆಳೆಯರ ಒತ್ತಾಯದಿಂದ ಬೆಂಗಳೂರು ಸ್ಟೇಡಿಯಂಗೆ ಹೋಗಿದ್ದ ಅಂಬಾನಿ ಗುಂಪಿನ ಪತ್ರಿಕೋದ್ಯಮದ ದಕ್ಷಿಣ ಬಾರತ ಮತ್ತು ಶ್ರೀಲಂಕಾ ಮಾರಿಷಸ್ ನ ಜವಾಬ್ದಾರಿಯ ಹೊಂದಿರುವ ಸಾಗರ ತಾಲ್ಲೂಕಿನ ಡಿ.ಪಿ. ಸತೀಶ್ ಅಲ್ಲಿ ಮಳೆ ಕಾರಣ ಪಂದ್ಯ ಸರಿಯಾಗಿ ನಡೆಯದಾಗ ಡೈನಿಂಗ್ ಹಾಲ್ ಗೆ ಹೋದಾಗ ಅಲ್ಲಿ ಭಾರತದ ಕ್ರಿಕೆಟ್ ಬೌಲಿಂಗ್ ಮಾತ್ರಿಕ EAS ಪ್ರಸನ್ನರ ಬೇಟಿ ಮಾಡಿದಾಗ ಇವರು ಶಿವಮೊಗ್ಗ ಜಿಲ್ಲೆ ಅಂದಾಗ ಪ್ರಸನ್ನ ಅವರು "ತಾನೂ ಜನಿಸಿದ್ದು ಶಿವಮೊಗ್ಗದ ದುರ್ಗಿಗುಡಿಯಲ್ಲಿ, ಶಿವಮೊಗ್ಗ ಊರು ಸುಂದರ,ಅಲ್ಲಿನ ಜನ ಒಳ್ಳೆಯವರು" ಅಂತ ಮಾತಾಡಿದ್ದಾರೆ.
ಏನೇ ಆಗಲಿ ಪ್ರಸನ್ನರ ಜನ್ಮಸ್ಥಳ ಶಿವಮೊಗ್ಗ ಎನ್ನುವುದು ಶಿವಮೊಗ್ಗ ಜಿಲ್ಲೆಯ ನಮಗೆಲ್ಲ ಹೆಮ್ಮೆಯ ವಿಷಯ ಕೂಡ, ಪ್ರಸನ್ನರು ಭಾರತ ಕ್ರಿಕೆಟ್ ತಂಡದಲ್ಲಿ ಮಾಡಿದ ಸಾದನೆಗಾಗಿ ಕೇಂದ್ರ ಸರ್ಕಾರ ಪದ್ಮ ಪುರಸ್ಕಾರವೂ ನೀಡಿದೆ.
ಇನ್ನೊಬ್ಬ ಅದ್ಭುತ ಕ್ರಿಕೆಟ್ ತಾರೆ ಜಿ.ಆರ್.ವಿಶ್ವನಾಥ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರು ಅವರ ವಿವಾಹ ಗವಾಸ್ಕರ್ ಸಹೋದರಿಯೊಂದಿಗೆ ಇದರ ಜೊತೆ ಪ್ರಸನ್ನರು ಸೇರಿದ್ದಾರೆ.
ಶಿವಮೊಗ್ಗದ ದುರ್ಗಿಗುಡಿಯಲ್ಲಿ ಪ್ರಸನ್ನರು ಜನಿಸಿದ ಸ್ಥಳ ಈಗ ಯಾವುದೋ ಹೋಟೆಲ್ ನಿಮಾ೯ಣವಾಗಿದೆ ಅಂತೆ.
ಬೆಂಗಳೂರಲ್ಲಿನ ರಸ್ತೆಯೊಂದಕ್ಕೆ ಅವರ ಹೆಸರು ನಾಮಕರಣ ಮಾಡಿದ್ದಾರೆ, ಇದೇ ರೀತಿ ಶಿವಮೊಗ್ಗದಲ್ಲೂ ಆಗಲಿ, ಶಿವಮೊಗ್ಗ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರಸನ್ನರ, ಭದ್ರಾವತಿ ಮೂಲದ ಜಿ.ಆರ್.ವಿಶ್ವನಾಥರ ಚಿತ್ರ ಮಾಹಿತಿ ಅಳವಡಿಸುವಂತಾಗಲಿ.
ಈರಪ್ಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ (EAS PRASANNA ) ಜನಿಸಿದ್ದು 22- ಮೇ -1940 ಆ ಕಾಲದ ಮಾಹಿತಿ ಯಾರಲ್ಲಾದರೂ ಇರಬಹುದು.
Comments
Post a Comment