Blog number 883. ತೀರ್ಥಹಳ್ಳಿಯ ಲಕ್ಷ್ಮೀಶ್ ವಾರಪತ್ರಿಕೆ ಸಂಪಾದಕರಾದ ಲಕ್ಷ್ಮೀಶ್ ರ ಬರವಣಿಗೆಗೆ ನಾನು ಅವರ ಅಭಿಮಾನಿ, ಮೊನ್ನೆ ನನ್ನ ಕಛೇರಿಗೆ ಅವರ ಆಗಮನ.
#ಸಂಪಾದಕರಾದ_ಲಕ್ಷ್ಮೀಶ್_ನಮ್ಮಲ್ಲಿಗೆ
#ನಾನು_ಇವರ_ಬರವಣಿಗೆಯ_ಅಭಿಮಾನಿ
#ಬೆಂಗಳೂರಿಂದ_ಇವರು_ಪತ್ರಿಕೆ_ಮಾಡುತ್ತಿದ್ದರೆ_ಇನ್ನೊಬ್ಬ_ರವಿಬೆಳೆಗೆರೆ_ಆಗುತ್ತಿದ್ದರು.
ತೀರ್ಥಹಳ್ಳಿಯ ಪತ್ರಿಕೆಗಳ ಒಡನಾಟ ನನ್ನ ಬಾಲ್ಯದಿಂದಲೇ ಪ್ರಾರಂಭ ಆಯಿತು, ನಮ್ಮ ತಂದೆಯ ಗೆಳೆಯರಾದ A.S.ಗಣಪತಿ ( ನಮ್ಮ ಊರಿಂದ 10 ಕಿ.ಮಿ.ದೂರದ ಹೊಸನಗರ ತಾಲೂಕಿನ ಆಲಗೇರಿ ಮಂಡ್ರಿಯವರು ಅವರ ಇನಿಷಿಯಲ್ ನ A ಆಲಗೇರಿ ಮಂಡ್ರಿ ಇರಬಹುದಾ? ಗೊತ್ತಿಲ್ಲ) ಅವರ #ಛಲಗಾರ_ಪತ್ರಿಕೆ ನಮ್ಮ ಮನೆಗೆ ಪೋಸ್ಟ್ ನಲ್ಲಿ ಬರುತ್ತಿತ್ತು,ನಂತರ (ನನ್ನ ನೆನಪು1978 ರಿಂದ ಇರಬಹುದು) ನಮ್ಮ ಅಣ್ಣ ಛಲಗಾರ ಪತ್ರಿಕೆ ಏಜೆಂಟ್ ಕಂ ವರದಿಗಾರ, 7 ಅಥವ 8ನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಕೆಲಸ ಬೆಳಿಗ್ಗೆ 9ಕ್ಕೆ ಬರುವ ಶಂಕರ್ ಬಸ್ಸಿನ ಡ್ರೈವರ್ ಹತ್ತಿರ ಪತ್ರಿಕೆ ಬಂಡಲ್ ತೆಗೆದುಕೊಂಡು ಬರುವುದು.
ನನಗೆ ಹಾಯ್ ಬೆಂಗಳೂರು ರವಿ ಬೆಳೆಗೆರೆ ಬರಹದ ನಂತರ ಅಷ್ಟೇ ಇಷ್ಟವಾದ ಬರಹಗಳು ತೀರ್ಥಹಳ್ಳಿಯ ಲಕ್ಷ್ಮೀಶ್ ವಾರಪತ್ರಿಕೆಯ ಸಂಪಾದಕರಾದ ಲಕ್ಷ್ಮೀಶ್ ರವರದ್ದು.
ಲಂಕೇಶರಂತೆ ಇವರದ್ದೇ ಸ್ವಂತ ಹೆಸರಿನ ವಾರಪತ್ರಿಕೆ ಇವರದ್ದು.
ತೀರ್ಥಹಳ್ಳಿಯಲ್ಲಿ ಹಾಲಿ ಇರುವ ಪತ್ರಿಕೆಗಳು ಮತ್ತು ಪತ್ರಕರ್ತರು ತಾಲ್ಲೂಕಿನ ಪ್ರಸಕ್ತ ರಾಜಕಾರಣದ ಬಗ್ಗೆ ಸದಾ ತಾಜಾ ಸುದ್ದಿಗಳು ನೀಡುತ್ತಿದೆ, ತಾಲ್ಲೂಕಿನ ಆಡಳಿತದಲ್ಲಿ ಸರಿ ತಪ್ಪುಗಳ ವಿಮರ್ಶೆ ಮಾಡುತ್ತಾ ಜನ ಸಾಮಾನ್ಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಇದರಲ್ಲಿ ಲಕ್ಷೀಷ್ ರ ಪಾತ್ರವೂ ದೊಡ್ಡದು.
ಎಂತಹ ಶಕ್ತಿಶಾಲಿ ಬಲಿಷ್ಟರನ್ನೂ ಎದುರು ಹಾಕಿಕೊಳ್ಳುವ, ಇಡೀ ಸಮಾಜವೇ ದೂರ ಮಾಡಿದ ವ್ಯಕ್ತಿ ಇವರಿಗೆ ಇಷ್ಟ ಆದರೆ ಅವರ ಪರವಹಿಸುವ ಇವರ ಪರಿಯ ಬರಹ ಪ್ರಕಟಿಸುವುದರಲ್ಲಿ ಇವರನ್ನು ಮೀರಿಸಿದವರಿಲ್ಲ
ಬಹುಷಃ ಇವರ ನಿಷ್ಟೂರವಾದ ಬರವಣಿಗೆ ಇವರ ಮೇಲೆ ಹಲ್ಲೆಗೆ , ಪೋಲಿಸ್ ಕೇಸ್ ಗೆ ಮತ್ತು ನಿಂದನೆಗೆ ಕಾರಣವಾದ ಸುದ್ದಿಗಳನ್ನು ಆಗಾಗ್ಗೆ ಇವರು ನೆನಪಿನ ಸುದ್ದಿಗಳಾಗಿ ಬರೆದಾಗಲೇ ಗೊತ್ತಾಗುತ್ತದೆ.
ಎರೆಡು ವರ್ಷದ ಹಿಂದೆ ಇವರ ಹೃದಯ ಶಸ್ತ್ರಚಿಕಿತ್ಸೆ ನಂಜಪ್ಪ ಆಸ್ಪತ್ರೆಯಲ್ಲಿ ಆಗಿತ್ತು ಆ ಸಂದರ್ಭದಲ್ಲಿ ಹೋಗಿ ಬೇಟಿ ಆಗಿದ್ದೆ ನಂತರ ಆಗಾಗ ಪೋನಿನಲ್ಲಿ ಮಾತು, ನನ್ನ ಪುಸ್ತಕ ಓದಿ ವಿಮರ್ಷೆ ಇತ್ಯಾದಿಗಳಲ್ಲೇ ಪುನಃ ಬೇಟಿ ಆಗಿರಲಿಲ್ಲ.
ಮೊನ್ನೆ ತಮ್ಮ ತೋಟಕ್ಕಾಗಿ ರಿಪ್ಪನ್ ಪೇಟೆಯ #ಅಂಕುರ್_ನಸ೯ರಿ ಯ ಜವುಳಿಯವರ ಹತ್ತಿರ ಕೆಲ ಗಿಡಗಳ ಖರೀದಿಸಲು ಬಂದವರು ನನ್ನ ಆಹ್ವಾನದ ಮೇಲೆ ನನ್ನ ಕಛೇರಿಗೆ ಬಂದಿದ್ದರು, ಅವರ ಪತ್ನಿ - ಪುತ್ರ ಮತ್ತು ಪುತ್ರಿಯ ಪರಿಚಯವೂ ಆಯಿತು ಪತ್ರಿಕೆಯ ಜಟಾಪಟಿ ಹೋರಾಟದಲ್ಲಿ ಸದಾ ಇದ್ದರೂ ಇವರು ತಮ್ಮ ಕುಟುಂಬಕ್ಕೆ ಹೆಚ್ಚು ಸಮಯ ನೀಡುವುದು ಇವರ ಸುಖಿ ಸಂಸಾರಕ್ಕೆ ಕಾರಣವಾಗಿದೆ.
ಜಿಲ್ಲೆಯ ವಿವಿದ ಕ್ಷೇತ್ರದಲ್ಲಿ ಪ್ರಖ್ಯಾತರಾದ ಪ್ರತಿಭಾವಂತರರು, ಸಾಹಸಿಗಳು ಬಂದಾಗ ಅವರಿಗೆ ಸಣ್ಣದಾಗಿ ಗೌರವಿಸಿ ಸಂತೋಷ ಪಡುವುದು ನನ್ನ ಹವ್ಯಾಸ ಅದರಂತೆ ಶಾಲು ಹೊದಿಸಿ ಅಭಿನಂದಿಸಿದೆ, ನಿಮ್ಮ ಬರವಣಿಗೆಯ ಓದುವ ನಿಮ್ಮ ಅಭಿಮಾನಿ ನಾನು ಅಂದೆ, ಒಂದು ಸುದ್ದಿಯನ್ನು ಶುರುಮಾಡಿ ಅದನ್ನು ಅಂತ್ಯದ ತನಕ ರೋಚಕವಾಗಿ ತರ್ಕದೊಂದಿಗೆ ಒಯ್ಯುತ್ತೀರಿ ಅಂದೆ.
Comments
Post a Comment