Blog number 898. ತಲವಾಟ ಪುರುಶೋತ್ತಮ್ ಶಿವಮೊಗ್ಗ ಜಿಲ್ಲೆಯೆ ಎಲೆ ಮರೆಯ ಕಾಯಿಯಂತ ಪ್ರತಿಬಾನ್ಸಿತ ರಂಗಕರ್ಮಿ, ನಟ ಮತ್ತು ಸಹೃದಯಿ ಕಲಾವಿದರು, ಇವತ್ತು ನನ್ನ ಅತಿಥಿ.
#ಕನ್ನಡದ_ಎಲ್ಲಾ_ಪ್ರಖ್ಯಾತ_ಸಿನಿ_ನಟ_ನಿರ್ದೇಶಕರ_ಆಪ್ತರು.
#ಪ್ರಖ್ಯಾತಿ_ರಂಗಕರ್ಮಿ_ಖ್ಯಾತನಟಿ_ಮಾಲತಿ_ಮೇಡಂರ_ಪತಿ.
ಪ್ರಖ್ಯಾತ ರಂಗಕರ್ಮಿ, ನಟಿ ದೆಹಲಿ NSD ನಾಟಕ ಶಾಲೆ ಪಧವೀದರೆ ಸಾಗರದ ಜೈ ಹಿಂದ್ ಬೇಕರಿ ಕುಟುಂಬದ ಮಾಲತಿ ಮೇಡಂ ಸಾಗರದಿಂದ ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸುವ ಸಂದರ್ಭದಲ್ಲಿ ಅವರು ಕಾಫಿಗಾಗಿ ನಮ್ಮ ಸಂಸ್ಥೆಯ ಮಲ್ಲಿಕಾ ವೆಜ್ ಗೆ ಬರುತ್ತಿದ್ದರು.
ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ನನ್ನ ಎಲ್ಲಾ ಸಿಬ್ಬಂದಿಗೆ ಮೊದಲೇ ತಿಳಿಸಿದ್ದರಿಂದ ಮಾಲತಿ ಮೇಡಂ ನಮ್ಮ ಕಾಟೇಜ್, ಗಾರ್ಡನ್ ಅಥವ ಲಾಡ್ಜ್ ಆಫೀಸ್, ಕಲ್ಯಾಣ ಮಂಟಪ ಅಲ್ಲೆಲ್ಲ ಓಡಾಡುತ್ತಿದ್ದರು ಅವರಿಗೆ ಇಷ್ಟವಾದ ಜಾಗದಲ್ಲಿ ಕುರ್ಚಿ ಹಾಕಿ ಕೊಡುತ್ತಿದ್ದರು ಮತ್ತು ಅವರಿಷ್ಟದ ಸಕ್ಕರೆ ರಹಿತ ಕಾಫಿ ಅಲ್ಲಿಗೆ ತಲುಪಿಸುತ್ತಿದ್ದರು, ಮಾಲತಿ ಮೇಡಂ ನನ್ನ ಸಿಬ್ಬಂದಿ ಕಷ್ಟ ಸುಖ ವಿಚಾರಿಸಿ ಕೈ ತುಂಬಾ ಟಿಪ್ಸ್ ನೀಡುವ ದಾರಾಳಿ ಕೂಡ.
ಕೆಲವೊಮ್ಮೆ ಪತಿ ತಲವಾಟ ಪುರುಶೋತ್ತಮರೂ ಜೊತೆಯಾಗಿ ಬರುತ್ತಿದ್ದರು, ನನ್ನ ಲಾಡ್ಜ್ ಹಿಂಬಾಗದ ಕಾಟೇಜ್ ನೋಡಿ ಪುರುಶೋತ್ತಮರು ಹೇಳಿದ್ದು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಹಳ್ಳಿಯನ್ನು ನಿರ್ಮಿಸಿದ್ದೀರಿ ಅಂದಿದ್ದರು.
ಮಾಲತಿ ಮೇಡಂರ ನಿರ್ಗಮನ ಸಹೃದಯಿ ತಲವಾಟ ಪುರುಷೋತ್ತಮರಿಗೆ ಅವರಿಗೆ ಅವರ ಜೀವನದಲ್ಲಿ ದೊಡ್ಡ ನಿರ್ವಾತ ಸೃಷ್ಠಿ ಮಾಡಿತು.
ಡಾ. ಮಾವಿನ ಕುರ್ವೆ ಸಂಪಾದಕತ್ವದಲ್ಲಿ ಎಸ್.ಮಾಲತಿ ನೆನಪಿನಲ್ಲಿ #ಬಹುಮುಖಿ ಎಂಬ ಪುಸ್ತಕ ಪುರುಶೋತ್ತಮರೇ ನನಗೆ ತಲುಪಿಸಿದ್ದರು.
ಇವತ್ತು ಇವರ ಊರಿನ ಇವರ ಮಿತ್ರ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರಾದ #ಮೃತ್ಯುಂಜಯ_ತಲವಾಟರ ಜೊತೆ ಶಿವಮೊಗ್ಗದಿಂದ ಬರುವಾಗ ಬೇಟಿ ಆದರು.
ಅವರ ಇತ್ತೀಚಿನ ಸಿನೆಮಾ ರವಿಚಂದ್ರನ್ ಜೊತೆ ಆಭಿನಯಿಸಿದ್ದು ತಿಳಿಸಿದರು.
ನನ್ನ ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಅಭ್ಯಂಜನ ಇವರಿಗೆ ನೀಡಿದೆ ಅವರ ಜೀವನದ ಬಗ್ಗೆ ಅವರೇ ಮಾತಾಡಿದ ವಿಡಿಯೋ ಮಾಡಿ ಇಲ್ಲಿ ಲಗತ್ತಿಸಿದ್ದೇನೆ ಅದರಲ್ಲಿ ಅವರು ಅವರ ಜೀವನದ ಹೆಜ್ಜೆಗಳ ಸಂಕ್ಷಿಪ್ತ ವಿವರ ನೀಡಿದ್ದಾರೆ.
ಅವರ ಸಂಪರ್ಕ ಸಂಖ್ಯೆ 94803 96217
Comments
Post a Comment