#ಸಂಪ್ರದಾಯಿಕ_ಕಳಲೆ_ಪದಾರ್ಥ_ಈಗಿನ_ತಲೆಮಾರಿಗೆ_ಇಷ್ಟವಿಲ್ಲ_ಯಾಕೆ?
#ಅವರಿಗಾಗಿ_ಇಲ್ಲಿದೆ_ಕಳಲೆ_ಬಿರಿಯಾನಿ_ರೆಸಿಪಿ.
ನಿನ್ನೆ ಕಳಲೆ ಗಟ್ಟಿ ಗಸಿಯ ಪಲ್ಯ ಮತ್ತು ಅಕ್ಕಿ ರೊಟ್ಟಿಯ ಸಂಪ್ರದಾಯಿಕ ಅಡುಗೆಯ ಬಗ್ಗೆ ಪೋಸ್ಟ್ ಮಾಡಿದ್ದೆ ಮತ್ತು ಅನೇಕ ಗ್ರೂಪಿನಲ್ಲಿ ಶೇರ್ ಮಾಡಿದ್ದೆ ಅದರಲ್ಲಿ ಕೆಲವರು ಈಗಿನ ಜಮಾನದ ಮಕ್ಕಳು ಈ ಸಂಪ್ರದಾಯಿಕ ಕಳಲೆ ಪಲ್ಯ, ಸಾರು ಮತ್ತು ಮಜ್ಜಿಗೆ ಹುಳಿ ಯಾಕೋ ಇಷ್ಟ ಮಾಡುತ್ತಿಲ್ಲ ಅಂದಿದ್ದರು.
ಅವರಿಗಾಗಿ ಇಲ್ಲಿ ಕಳಲೆ ಬಿರಿಯಾನಿ ರೆಸಿಪಿ ಹಾಕಿದ್ದೇನೆ ನೋಡಿ.
ಸ್ವಲ್ಪ ದೊಡ್ಡ ಸ್ಲೈಸ್ ಆಗಿ ಕತ್ತರಿಸಿದ ಕಳಲೆ ಮೂರು ದಿನ ನೀರಲ್ಲಿ ನೆನಸಿ ಪ್ರತಿ ದಿನ ನೀರು ಬದಲಿಸಿ ಅದರಲ್ಲಿರುವ ನೈಸರ್ಗಿಕ ಟಾಕ್ಸಿನ್ ನಿವಾರಿಸಿ ನಂತರ ಅಡುಗೆಗೆ ಮೊದಲು ಚೆನ್ನಾಗಿ ತೊಳೆದು ಉಪ್ಪು ಮತ್ತು ಹಳದಿ ಪುಡಿ ಹಾಕಿ ಬೇಯಿಸಿಕೊಳ್ಳಿ ನಂತರ ತಣ್ಣಗಾದ ನಂತರ ನೀರು ಬಸಿದು ಇದಕ್ಕೆ ಮೊಸರು, ಕಾರದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ 10 ನಿಮಿಷ ಮ್ಯಾರಿನೇಟ್ ಮಾಡಿ.
ತುಪ್ಪ ಅಥವ ರಿಪೈನ್ಡ್ ಎಣ್ಣೆಯಲ್ಲಿ ನೀರುಳ್ಳಿ / ಟೋಮೋಟೊ ಹುರಿದು ಅದಕ್ಕೆ ಒಂದು ಕಪ್ ಅಕ್ಕಿ ಹಾಕಿ ಹುರಿಯಿರಿ ನಂತರ ಮ್ಯಾರಿನೇಟೆಡ್ ಕಳಲೆ ಸೇರಿಸಿ ಹುರಿಯಿರಿ, ನಿಮಗಿಷ್ಟವಾದ ರೀತಿಯ ಬಿರಿಯಾನಿ ಮಸಾಲೆ ತಯಾರಿಸಿ ಸೇರಿಸಿ ಇದಕ್ಕೆ ಎರೆಡು ಕಪ್ಪು ನೀರು ಸೇರಿಸಿ ಮಿಶ್ರ ಮಾಡಿ ಕುಕ್ಕರ್ ನಲ್ಲಿ 2 ವಿಷಲ್ ಮಾಡಿದ ನಂತರ ಸ್ಟವ್ ಆಫ್ ಮಾಡಿ, ಮೊಸರು ಬಜ್ಜಿಯೊಂದಿಗೆ ಕಳಲೆ ಬಿರಿಯಾನಿಯ ಹೊಸ ರುಚಿ ಈಗಿನ ನವ ಜಮಾನದವರಿಗೂ ಹಾಗೆ ಹಳೇ ಜಮಾನದವರಿಗೂ ಹಿಡಿಸದಿದ್ದರೆ ಹೇಳಿ.
Comments
Post a Comment