Skip to main content

Blog number 879, ಜೋಗ್‌ ಪಾಲ್ಸ್ - ಶಿವಮೊಗ್ಗ ಮಧ್ಯದಲ್ಲಿ ರಾ.ಹೆ. 206 ಆನಂದಪುರಂನ ಯಡೇಹಳ್ಳಿ ವೃತ್ತದಲ್ಲಿ ಚಂಪಕಾ ಪ್ಯಾರಾಡೈಸ್ ಪುನಾರಾರಂಭಗೊಂಡಿದೆ.

Hombuja Residency
094492 53788
https://maps.app.goo.gl/wMEgU94u45pN6uHi8

#ಚಂಪಕಾ_ಪ್ಯಾರಾಡೈಸ್_ನಾನ್_ವೆಜ್_ಪುನಾರಂಭ_ಆಗಿದೆ

#ಸುಮಾರು_ಹದಿನಾಲ್ಕು_ತಿಂಗಳ_ನಂತರ_ಪುನರಾರಂಭ

#ಕೊರಾನ_ಕಾಲದ_ಗಂಡಾಂತರಗಳಿಂದ_ನಿಲ್ಲಿಸಲಾಗಿತ್ತು.

#ಮಲೆನಾಡ_ವಿಶೇಷ_ಕೋಳಿಕಜ್ಜಾಯ_ನಾಟಿಚಿಕನ್_ಸಾರು

#ಮಡಕಾ_ದಮ್_ಬಿರಿಯಾನಿ

#ಅಕ್ಕಿ_ರಾಗಿ_ರೊಟ್ಟಿ_ದೋಸೆ_ಇಡ್ಲಿ_ಕೂಡ_ಗ್ರಾಹಕರ_ಆಯ್ಕೆಯ_ಚಿಕನ್_ಮಸಾಲ_ಜೊತೆ_ಸಿಗಲಿದೆ.

  ಸುಮಾರು ಹತ್ತು ವರ್ಷದ ನನ್ನ ಹೋಟೆಲ್ ಉದ್ಯಮದಲ್ಲಿ ಕಲಿತಷ್ಟು ಮುಗಿಯದ ಪಾಠಗಳಾಗಿದೆ.
      2020 ರ ಕೊರಾನಾ ಲಾಕ್ ಡೌನ್ ನಂತರ 2021ರ ಲಾಕ್ ಡೌನ್ ಮತ್ತು 2022 ರಲ್ಲಿ ಮತ್ತೆ ಕರೋನ ಅಪ್ಪಳಿಸುವ ಸುದ್ದಿಗಳು ಇದರಿಂದ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದೆ.
   ಪ್ರವಾಸಿ ಟ್ಯಾಕ್ಸಿಗಳು, ರೆಸ್ಟೋರೆಂಟ್, ಲಾಡ್ಜ್ ಗಳು ನಡೆಸುವ ಉದ್ಯಮದವರಿಗೆ ಇದರ ಬಿಸಿ ಚೆನ್ನಾಗಿ ತಾಗಿದೆ.
  ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಅನೇಕ ಹೋಟೆಲ್ ಗಳು ಬಾಗಿಲು ಮುಚ್ಚಿದೆ.
   ನನ್ನ ಸ್ವಂತ ಕಟ್ಟಡದ ಮಲ್ಲಿಕಾ ವೆಜ್ ರೆಸ್ಟೋರಾಂಟ್ ಈಗಾಗಲೇ ಪ್ರಾರಂಬಿಸಿದರೂ ನಿರೀಕ್ಷಿತ ವ್ಯಾಪಾರ ಇಲ್ಲದಿರುವುದರಿಂದ ಅದರಲ್ಲಿ ಉತ್ತರ ಭಾರತೀಯ ಆಹಾರ, ಚಾಟ್ ಕೌಂಟರ್ ಗಳನ್ನು ಇನ್ನೂ ಪ್ರಾರಂಬಿಸಿಲ್ಲ.
  ನಮ್ಮದೇ ಲಾಡ್ಜ್ ಅತಿಥಿಗಳು ನಾನ್ ವೆಜ್ ರೆಸ್ಟೋರಾಂಟ್ ಪ್ರಾರಂಬಿಸಲು ಒತ್ತಾಯಿಸುತ್ತಿದ್ದರೂ ಸುಮಾರು 14 ತಿಂಗಳಿಂದ (2021 ರ ಕೋರಾನಾ ಲಾಕ್ ಡೌನ್ ಗೆ ಬಂದ್ ಮಾಡಿದ್ದು) ಪ್ರಾರಂಬಿಸಿರಲಿಲ್ಲ.
   ಇವತ್ತು ನಮ್ಮ #ಚಂಪಕಾ_ಪ್ಯಾರಾಡೈಸ್_ನಾನ್_ವೆಜ್_ರೆಸ್ಟೋರಾಂಟ್ ಪೂಜಾದೊಂದಿಗೆ ಪ್ರಾರಂಬಿಸಲಾಗಿದೆ.

 #ಸ್ಪೆಷಲ್_ಪಿಶ್_ಥಾಲಿ
ಬಾಳೆ ಎಲೆಯಲ್ಲಿ ಉಪ್ಪಿನಕಾಯಿ, ಒಣ ಸೀಗಡಿಯ ತೆಂಗಿನ ಕಾಯಿ ಚಟ್ನಿ, ತರಕಾರಿ ಪಲ್ಯ, ಕೋಕಮ್ ಕಡಿ,ನೀರುಳ್ಳಿ / ನಿಂಬೇ ಕಾಯಿ ಜೊತೆ ಪುಲ್ ರೈಸ್, ಮೀನಿನ ಸಾರು ಮತ್ತು ತವಾದಲ್ಲಿ ಹುರಿದ ತವಾ ಪಿಶ್ ಪ್ರೈ.

#ಸ್ಪೆಷಲ್_ಚಿಕನ್_ಥಾಲಿ 
  ಬಾಳೆ ಎಲೆಯಲ್ಲಿ ಪುಲ್ ರೈಸ್, ಚಿಕನ್ ಮಸಾಲ ಜೊತೆಯಲ್ಲಿ ಉಪ್ಪಿನಕಾಯಿ, ಸೀಗಡಿ ಚಟ್ನಿ, ಪಲ್ಯ, ಕೋಕಮ್ ಕಡಿ, ನಿಂಬೂ ಮತ್ತು ನೀರುಳ್ಳಿ .

#ಚಿಕನ್_ಕಬಾಬ್
#ಹೈದ್ರಾಬಾದಿ_ಬಿರಿಯಾನಿ
#ರೆಗ್ಯುಲರ್_ಬಿರಿಯಾನಿ
#ಎಗ್_ರೈಸ್.
ಈ ಎಲ್ಲಾ ಆಹಾರಗಳು ನಾಳೆಯಿಂದ ಗ್ರಾಹಕರಿಗೆ ಶುದ್ಧವಾದ ಪಿಲ್ಪರ್ ನೀರಿನೊಂದಿಗೆ ಸಿಗಲಿದೆ, ಗ್ರಾಹಕರು ಅವರ ಕುಟುಂಬದೊಂದಿಗೆ ಊಟ ಸವಿಯಲು ಪ್ರತ್ಯೇಕವಾದ ಪ್ಯಾಮಿಲಿ ರೂಂಗಳೂ ಇದೆ.
  ಚಂಪಕಾ ಪ್ಯಾರಾಡೈಸ್ ಗ್ರಾಹಕರಿಗೆ ಹೈಜನಿಕ್ ಆಗಿರುವ ಪ್ರತ್ಯೇಕ ಟಾಯಿಲೆಟ್ ಸೌಲಭ್ಯ ಇದೆ, ಪಾರ್ಕಿಂಗ್ ವ್ಯವಸ್ಥೆ ಇದೆ.
  ಈ ಶನಿವಾರದಿಂದ (ದಿನಾಂಕ 4- ಜೂನ್ -2022)
ನಮ್ಮ ಚಂಪಕಾ ಪ್ಯಾರಾಡೈಸ್ ನ ಸಿಗ್ನೇಚರ್ ಪ್ರಾಡಕ್ಟ್ ಎಂದೇ ಹೆಸರಾಗಿರುವ #ಮಡಕಾ_ದಂ_ಬಿರಿಯಾನಿ, ಮಲೆನಾಡಿನ ವಿಶೇಷವಾದ #ಕೋಳಿಕಜ್ಜಾಯ_ಮತ್ತು_ನಾಟಿಕೋಳಿ_ಸಾರು ಗ್ರಾಹಕರಿಗೆ ನಿರಂತರವಾಗಿ ಸಿಗಲಿದೆ.
  #ಚೆಟ್ಟಿನಾಡು_ಚಿಕನ್_ರೋಸ್ಟ್ ಕೂಡ ದೊರೆಯಲಿದೆ.
  ಜೊತೆಗೆ ಅಕ್ಕಿ/ರಾಗಿ ರೊಟ್ಟಿ / ದೋಸೆ /ಇಡ್ಲಿ ಜೊತೆ ಚಿಕನ್ / ನಾಟಿ ಚಿಕನ್ ಮಸಾಲ ಕೂಡ ಗ್ರಾಹಕರಿಗೆ ಸಿಗಲಿದೆ.
  ಶುಚಿ-ರುಚಿಯ ಆಹಾರ ಮತ್ತು ಯಾವುದೇ ಕಾರಣಕ್ಕೂ ಟೇಸ್ಟಿಂಗ್ ಪೌಡರ್ (ಅಜಿನೋ ಮೋಟೋ), ಕೃತಕ ಬಣ್ಣ ಬಳಸದೆ ಆಹಾರ ತಯಾರಿ ನಮ್ಮ ವಿಶೇಷತೆ.
   ರಾಷ್ಟ್ರೀಯ ಹೆದ್ದಾರಿ NH 206 ರ ಆನಂದಪುರಂನ ಯಡೇಹಳ್ಳಿ ವೃತ್ತದಲ್ಲಿ (ಶಿವಮೊಗ್ಗದಿಂದ 50 km -ಸಾಗರದಿಂದ 25km, ಜೋಗ್ ಪಾಲ್ಸ್ ಶಿವಮೊಗ್ಗ ಮಧ್ಯದಲ್ಲಿ) ಇದೆ, ಇಲ್ಲಿಯೇ ನಮ್ಮ #ಮಲ್ಲಿಕಾ_ವೆಜ್_ರೆಸ್ಟೋರಾಂಟ್,#ಹೊಂಬುಜ_ರೆಸಿಡೆನ್ಸಿ_ಮತ್ತು_ಗಾರ್ಡನೀಯ_ಲಾಡ್ಜ್ ಮತ್ತು #ವಿಕ್ಟೋರಿಯಾ_ಕಾಟೇಜ್ ಗಳು ಕೂಡ ಗ್ರಾಹಕರ ಸೇವೆಗಾಗಿ ತಯಾರಾಗಿದೆ ಕೆಲವೇ ದಿನದಲ್ಲಿ ಹೆಲ್ತ್ ಟೂರಿಸಂ ಅಂಗವಾಗಿ #ಶಿರೋಧಾರಾ_ಮಡ್_ಬಾತ್ ಗಳ ಸೇವೆಯ #ವೈದ್ಯೋ_ನಾರಾಯಣ_ಹರಿ_ಆಯುರ್ವೇದ_ಕ್ಲೀನಿಕ್ ಕೂಡ ಕಾರ್ಯಾರಂಭ ಮಾಡಲಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...