Blog number 885. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಬೆಳಂದೂರಿನ ನರಭಕ್ಷಕ ಹುಲಿ ಸಂಹಾರ ಮಾಡಿದ ಕೆನತ್ ಆಂಡರಸನ್ ಅವರ ಇಂಗ್ಲೀಷ್ ಪುಸ್ತಕ ಅನುವಾದಿಸಿದ ಕನ್ನಡ ಭಾವಾನುವಾದಕ್ಕೆ ಧ್ವನಿ ನೀಡಿದ ವಸುವತ್ಸಲೆಯವರಿಗೆ ಅನಂತಾನಂತ ಧನ್ಯವಾದಗಳು
#ಬೆಳಂದೂರು_ಶಿವಮೊಗ್ಗಜಿಲ್ಲೆ_ಸಾಗರತಾಲ್ಲೂಕಿನ_ತ್ಯಾಗರ್ಥಿ_ಗ್ರಾಮಪಂಚಾಯತಿಗೆ_ಸೇರಿದ_ಗ್ರಾಮ.
#ಇಲ್ಲಿನ_ನರಭಕ್ಷಕ_ಹುಲಿ_ಶಿಕಾರಿ_ಮಾಡುವ_ಕೆನತ್_ಅಂಡರ್ಸನ್_ಮತ್ತು_ಸ್ಥಳಿಯ_ವೈದ್ಯ_ಸ್ಟಾನ್ಲಿ
#ಕನ್ನಡಕ್ಕೆ_ಅನುವಾದಿಸಿ_ಪ್ರಕಟಿಸಿದ_ಪೂರ್ಣಚಂದ್ರ_ತೇಜಸ್ವಿ
#ಇದನ್ನು_ಆಡಿಯೋ_ಮಾಡಿ_ಕಥೆ_ಹೇಳಿ_ರಂಜಿಸಿರುವ_ವಸು_ವತ್ಸಲೆ
#ನನ್ನ_ಜಿಲ್ಲಾಪಂಚಾಯತ್_ವ್ಯಾಪ್ತಿ_ಆಗಿತ್ತು_ಊರು_ನಾನು_ಇಲ್ಲಿನ_ಜಿಲ್ಲಾ_ಪಂಚಾಯತ್_ಸದಸ್ಯನಾಗಿದ್ದೆ.
ಕೆನೆತ್ ಅಂಡರ್ಸನ್ ನಮ್ಮ ಹೋಬಳಿಯಲ್ಲಿ ಎರೆಡರಿ ಬಂದು ಎರೆಡು ನರಭಕ್ಷಕನ ಹತ್ಯೆ ಮಾಡಿದ್ದಾರೆ, ಅವರ ಮಗ ಡೊನಾಲ್ಡ್ ಅಂಡರ್ಸನ್ ಕೂಡ ಶಿವಮೊಗ್ಗ ಜಿಲ್ಲೆಯಲ್ಲಿ ನರಭಕ್ಷಕ ಶಿಕಾರಿ ಮಾಡಿದ್ದಾರೆ.
ಕೆನತ್ ಆಂಡರ್ಸನ್ ಬೆಳಂದೂರಿನ ನರಭಕ್ಷಕನ ಬಗ್ಗೆ ಬರೆದ ಇಂಗ್ಲೀಷ್ ಕಥೆಯನ್ನು ಪೂರ್ಣಚಂದ್ರ ತೇಜಸ್ವಿ ಭಾವಾನುವಾದ ಮಾಡಿ ಇದೇ ಹೆಸರಲ್ಲಿ ಪ್ರಕಟಿಸಿದ್ದಾರೆ.
ಇದನ್ನು #ವಸುವತ್ಸಲೆಯವರು ಆಡಿಯೋ 2020ರಲ್ಲಿ ತಮ್ಮ ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ ಅವರಿಗೆ ಬೆಳಂದೂರು ಎಂಬ ಊರಿರುವ ಶಿವಮೊಗ್ಗ ಜಿಲ್ಲೆಯ ಸಾಹಿತ್ಯ - ಇತಿಹಾಸ ಆಸಕ್ತರ ಪರವಾಗಿ ಅಭಿನಂದಿಸುತ್ತೇನೆ.
ನೀವು ಕೇಳಿ.
Comments
Post a Comment