Blog number 891. ನಮ್ಮ ಊರಿನ ಸಮೀಪದ ಮುಂಬಾಳಿನ ಪ್ರಸಾದ್ ಈಶ್ವರಪ್ಪರ ಸ್ವಯ೦ ಸಾವಯುವ ಕೃಷಿ, ಕುರಿ ಸಾಕಾಣಿಕೆ, ಇವರು ಬೆಳೆದ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರಾಟದಿಂದ ಪ್ರಾರಂಭವಾಗಿದೆ ಹಲವು ಕನಸುಗಳೂ ಇವರ ಗುರಿ ಅವೆಲ್ಲವೂ ಯಶಸ್ವಿಯಾಗಲಿ ಸ್ಥಳಿಯರಾದ ನಾವೆಲ್ಲ ಇವರನ್ನು ಬೆಂಬಲಿಸಿ ಬೆನ್ನುತಟ್ಟೋಣ.
#ಇವರ_ಕನಸುಗಳು_ನನಸಾಗಲಿ
#ಸ್ಟಂತ_ಸಾವಯುವ_ಕೃಷಿ_ಮತ್ತು_ಕೃಷಿ_ಉತ್ಪನ್ನಗಳ_ಮೌಲ್ಯವರ್ದನೆ_ಮಾಡುತ್ತಿದ್ದಾರೆ
#ನಮ್ಮ_ಉದ್ಯಮದಲ್ಲಿ_ಇವರ_ಕೆಲ_ಉತ್ಪನ್ನಗಳನ್ನು_ಬಳಸುತ್ತಿದ್ದೇವೆ.
#ಇವರು_ಸಾಕಿರುವ_8_ತಿಂಗಳ_ಮುದೋಳ್_ಹೊಂಡಾ_ರಾಜು_ನನ್ನ_ಆಫೀಸಿಗೆ_ಕರೆತಂದಿದ್ದರು_ನನಗೆ_ತುಂಬಾ_ಇಷ್ಟ_ಆಯಿತು.
ಇವರ ಹೆಸರು ಪ್ರಸಾದ್ ಇವರ ತಂದೆ ಮನೆ ಆನಂದಪುರಂನಿಂದ ಸಾಗರ ಮಾರ್ಗದಲ್ಲಿ ಹೊಸೂರು ಸಮೀಪದ ರೈಲ್ವೆ ಗೇಟ್ ಹತ್ತಿರ ಬಲ ಬಾಗದಲ್ಲಿ ಒಂದೆರೆಡು ಕಿಲೋಮೀಟರ್ ದೂರದ ಮುಂಬಾಳು, ಇವರ ತಂದೆ ಈಶ್ವರಪ್ಪ ಗೌಡರು ಭದ್ರಾವತಿ ಮಾಚೇನಹಳ್ಳಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಾ ಅಲ್ಲಿಯೆ ಮಕ್ಕಳ ವಿದ್ಯಾಬ್ಯಾಸ ಮಾಡಿಸುತ್ತಾರೆ.
ನಂತರ ಅವರು ಶಿವಮೊಗ್ಗದ ವಾಸವಿ ಕಾಫಿ ಪುಡಿ ಜಿಲ್ಲೆಯಾದ್ಯಂತ ತಮ್ಮ TVS ನಲ್ಲಿ ಪ್ರಯಾಣಿಸಿ ಮಾರಾಟ ಮಾಡಿ ವಾಸವಿ ಬ್ರಾಂಡ್ ಗಟ್ಟಿ ಮಾಡಿದವರು.
ಮಕ್ಕಳೂ ಬಾಲ್ಯದಲ್ಲೇ ವ್ಯವಹಾರ, ದಿನಪತ್ರಿಕೆ ಏಜೆಂಟ್ ಹೀಗೆಲ್ಲಾ ದುಡಿಯುತ್ತಾ ಎಂ.ಎ. ಬಿ.ಎಡ್ ಎಲ್ಲಾ ಮಾಡಿರುವುದು ಸಣ್ಣ ವಿಷಯವಲ್ಲ.
ಇವರ ತಾಯಿ ರಿಪ್ಪನ್ ಪೇಟೆ ಸಮೀಪದ ಕಮದೂರಿನವರು ಇವರ ತಾಯಿಯ ಸಹೋದರ ಶಿಕಾರಿಪುರದ ಪ್ರತಿಷ್ಟಿತ ಅಕ್ಷರ ಶಾಲೆ ಸ್ಥಾಪಿಸಿ ನಡೆಸುತ್ತಿದ್ದಾರೆ ಅಲ್ಲಿ ಕೆಲ ಕಾಲ ಪ್ರಸಾದ್ ಉಪನ್ಯಾಸ ಮಾಡಿದ್ದರು.
#ಪ್ರಸಾದ್_ಹರ್ಬ್ಸ_ಆಂಡ್_ಆರ್ಗನಿಕ್ ಮೂಲಕ ಮಾರಾಟ ಮಾಡುತ್ತಿದ್ದಾರೆ. ಪ್ರಸಾದ್ ಮುಂಬಾಳಿನಲ್ಲಿ ತಂದೆಗೆ ಬಂದ ಪಿತ್ರಾರ್ಜಿತ ಜಮೀನಿನಲ್ಲಿ ಶುಂಠಿ, ಅರಿಶಿಣ, ಮಾವು ಇತ್ಯಾದಿ ಸಾವಯುವ ಕೃಷಿ, ನರ್ಸರಿ, ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ, ತಾವು ಬೆಳೆದ ಸಾವಯವ ಕಾಳು ಮೆಣಸು,ಶುಂಠಿ ಮತ್ತು ಅರಿಶಿಣದ ಪುಡಿ, ಕಷಾಯ ಪುಡಿ, ಸಾಂಬಾರ್ ಪುಡಿಗಳು ತಯಾರಿಸಿ ಅವರದ್ದೇ ಬ್ರಾಂಡ್ ಆಗಿರುವ
ನಾನು ನಮ್ಮಮಲ್ಲಿಕಾ ವೆಜ್ ಮತ್ತು ಚಂಪಕಾ ಪ್ಯಾರಾಡೈಸ್ ಗೆ ಇವರ ಸಂಸ್ಥೆಯ ಸಾವಯುವ ಶುದ್ದ ಅರಿಶಿಣ ಪುಡಿ ಖರೀದಿಸುತ್ತಿದೇನೆ ತುಂಬಾ ಚೆನ್ನಾಗಿದೆ.
ಇವರ ಕುರಿ ಸಾಕಾಣಿಕೆಗಾಗಿ ಮುದೋಳಿನಿಂದ ಖರೀದಿಸಿ ತಂದಿರುವ ಮುದೋಳು ತಳಿಯ ನಾಯಿಗೆ 8 ತಿಂಗಳ ಪ್ರಾಯ ಹೆಸರು ರಾಜು ಇವರ ಕಾರಿನಲ್ಲಿ ಬಂದವನನ್ನು ನನ್ನ ಆಫೀಸಿಗೆ ಕರೆ ತಂದಿದ್ದರು.
ಅನೇಕ ಕನಸುಗಳ ವಿದ್ಯಾವಂತ ಯುವಕ ಪ್ರಸಾದ್ ಗೆ ಸ್ಥಳಿಯವಾಗಿ ಬೆಂಬಲಿಸಬೇಕು, ಮುಂದಿನ ದಿನದಲ್ಲಿ ಇವರ ಎಲ್ಲಾ ಕನಸುಗಳು ನನಸಾಗಲಿ ಎ೦ದು ಹಾರೈಸಿದೆ ಮತ್ತು 1989ರಲ್ಲಿ ನಾನು ಪ್ರಾರಂಬಿಸಿದ ತಂಪು ಪಾನೀಯ ಘಟಕದ ಮೊದಲ ವ್ಯಾಪಾರ ಸಾಗರ ಪಟ್ಟಣದಲ್ಲಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿ ಸಾಗರ ಪಟ್ಟಣದಲ್ಲಿ ವ್ಯಾನಿನಲ್ಲಿನ ಎಲ್ಲಾ ಮಾಲು ಸಂಪೂರ್ಣವಾಗಿ ಮಾರಾಟ ಮಾಡಿ ಖಾಲಿ ಮಾಡಿದ ಅನುಭವ ಇವರಿಗೆ ಇವರ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗಲಿ ಎಂದು ವಿವರಿಸಿದೆ.
99804 97450 ಈ ಸಂಖ್ಯೆಯಲ್ಲಿ ಇವರನ್ನು ಸಂಪರ್ಕಿಸಬಹುದು
Comments
Post a Comment