#ನನ್ನ_ಬಹುರೂಪಿ_ಜೀವನದಲ್ಲಿ_ಮರೆತದ್ದು.
#ಪೇಲ್_ಆಗುವ_ದಡ್ಡರೆಂಬ_ವಿದ್ಯಾರ್ಥಿಗಳಿಗೆ_ಶಾಲೆ_ಪ್ರಾರಂಬಿಸಲು_ಯೋಜಿಸಿದ್ದೆ.
#ಸ್ಥಳಿಯ_ಖಾಸಾಗಿ_ಶಾಲೆಗಳು_ನನ್ನ_ಮೇಲೆ_ಮುರಿದು_ಕೊಂಡು_ಬಿದ್ದ_ಪರಿ !?
#ಮುಂದಿನ_ಯಾವುದೇ_ದಿನ_ಪುನಃ_ಪ್ರಾರಂಬಿಸುವ_ಯೋಜನೆ_ಇದೆ.
ನಾನು ಹೆಚ್ಚು ಇಷ್ಟ ಪಡುವ ವಿಚಾರವಂತ ಗೆಳೆಯರಲ್ಲಿ ಕೈ ಬೆರಳೆಣಿಕೆಯಲ್ಲಿ ಎಣಿಸುವಷ್ಟು ಮಾತ್ರ ಇರುವ ಶೃಂಗೇಶ್, ತೀ.ನಾ. ಶ್ರೀನಿವಾಸ್, ಆರ್.ಟಿ. ವಿಠ್ಠಲಮೂರ್ತಿ ಮತ್ತು ಅರವಿಂದ ಚೊಕ್ಕಾಡಿ ಅಗ್ರಸ್ಥಾನದಲ್ಲಿದ್ದಾರೆ ಮತ್ತು ಅವರ ಜೊತೆ ನನ್ನ ಸಂವಹನದ ವೇವ್ ಲೆಂಗ್ತ್ ಮ್ಯಾಚ್ ಆಗುತ್ತಿರುತ್ತದೆ ಆದರೆ ಈ ನಾಲ್ವರು ಅವರವರ ಸಿದ್ಧಾಂತಗಳನ್ನು ಸ್ವಲ್ಪವೂ ಹೊಂದಾಣಿಕೆ ಮಾಡದ ನೇರ -ನಿಷ್ಟುರದ - ಲೋಕವಿರೋದಿಗಳಂತೆ ಕಂಡರು ಅವರ ಹೃದಯದ ಬಾಗಿಲು ಪಟ್ಟುವಂತ ಗೆಳೆತನದ ಸಲಿಗೆ ನನಗೆ ಇದೆ ಅನ್ನಿಸುತ್ತದೆ.
ಇವತ್ತು ಅರವಿಂದ ಚೊಕ್ಕಾಡಿಯವರು 9ನೇ ತರಗತಿವರೆಗೆ ನಮ್ಮದೇ ಯೋಜನೆ ಸಿಲಬಸ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಿ 10 ನೇ ತರಗತಿಗೆ ಸೆಂಟ್ರಲ್ ಸಿಲಬಸ್ ಗೆ ಅವರನ್ನು ಜೋಡಿಸಿ ಸುಶಿಕ್ಷಣ ನೀಡುವ ಒಂದು ಸೂಚನೆ ನೀಡಿದ್ದಾರೆ, ಇದನ್ನು ಕರ್ನಾಟಕದಲ್ಲಿ ಯಾಕೆ ಜಾರಿಗೆ ತರಬಾರದೆಂದು ಯೋಚಿಸುವಾಗ ಶಿವಮೊಗ್ಗದ ಪ್ರಖ್ಯಾತ ಡಯಾಬಿಟಿಕ್ ತಜ್ಞರು - ಬೈಕ್ ಕಾರ್ ಸಾಹಸಿ ರೈಡರ್ - ಕನ್ನಡ ಸಾಹಿತ್ಯದ ಓದುಗ ಡಾಕ್ಟರ್ ಪ್ರೀತಂ ನೀವು ನಿಮ್ಮ ಜೀವನದಲ್ಲಿ ಏನೇನು ಮಾಡಿದ್ದೀರಿ ಬರೆಯಿರಿ ಅಂದಿದ್ದು ನೆನಪಾಯಿತು ನೆನಪಾಗಿದ್ದ ಅನೇಕ ವಿಚಾರ ಬರೆದಿದ್ದೆ ಆದರೆ ಈ ಘಟನೆ ಮರೆತಿದ್ದೆ ನೆನಪಾಯಿತು.
ಡಾ.ಎನ್.ಎಸ್ ವಿಶ್ವಪತಿ ಶಾಸ್ತ್ರಿಗಳು ಮೈಸೂರಿನ ಬ್ರಾಹ್ಮಣ ಮಠ ಒಂದರಲ್ಲಿ SSLC ಪೇಲ್ ಆದವರಿಗೆ ಶಿಕ್ಷಣ ವ್ಯವಸ್ಥೆ ಮಾಡಿದ್ದಾರೆ ಅದೇ ರೀತಿ ನಮ್ಮ ಊರಿನಲ್ಲಿ ದಡ್ಡರು ಪೇಲ್ ಆದವ ಎಂಬ ಈಗಿನ ಸಮಾಜದಲ್ಲಿನ ನಿಕೃಷ್ಟರಾದವರಿಗೆ ಶಿಕ್ಷಣ ನೀಡಲು ಒಂದು ಯೋಜನೆ ಮಾಡಿದ್ದೆ.
ನಮ್ಮದೇ ಊರ ಮಧ್ಯದಲ್ಲಿನ 5 ಎಕರೆ ಗೇರು ತೋಟದಲ್ಲಿ ಫಸಲು ನಮಗೆ ಸಿಗದೇ ಇದ್ದರಿಂದ ಅಲ್ಲಿ ಶಾಲೆ ಈಜು ಕೊಳ ನಿರ್ಮಿಸುವ ಯೋಜನೆ ಮಾಡಿ, ಅನುಮತಿಗೆ ಸಂಬಂದ ಪಟ್ಟಂತ ಇಲಾಖೆಗೆ ಅರ್ಜಿ ಸಲ್ಲಿಸಿದ್ದೆ, ಹರೇ ಕೃಷ್ಣ ಎಜುಕೇಷನಲ್ ಟ್ರಸ್ಟ್ ನೊಂದಾಯಿಸಿ ಸೂಕ್ತ ಡಿ.ಡಿ.ಯೊ೦ದಿಗೆ ಅರ್ಜಿ ಸಲ್ಲಿಸಿದ್ದೆ.
ಇದು ಸ್ಥಳಿಯ ಖಾಸಾಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಅಪಥ್ಯ ಆಯಿತು, ಅವರ ಉದ್ದೇಶ ಸಾಧನೆಗಾಗಿ ಸಂಬಂದಪಟ್ಟವರಿಗೆ ಕಪ್ಪಕಾಣಿಕೆ ನೀಡಿದ್ದರಿಂದ ಊರಿಂದ 3 ಕಿ.ಮಿ. ದೂರದ ನನ್ನ ಯೋಜನೆಗೆ ಅನುಮತಿ ನಿರಾಕರಿಸಿದರು ಆದರೆ ಊರ ಮಧ್ಯದಲ್ಲಿ ಅನದಿಕೃತವಾಗಿ ಇಂಗ್ಲೀಷ್ ಮಾಧ್ಯಮ ನಡೆಸುವ ಅದ೯ ಕಿ.ಮಿ. ಸುತ್ತಳತೆಯಲ್ಲಿನ ಇವರಿಗೆ ಎಲ್ಲಾ ರೀತಿಯ ಮಾಮೂಲಿ ನೀಡುವವರ ಹಿತ ಕಾಪಾಡಿದವರು ಯಾರು ಅಂದರೆ ನಮ್ಮ ಹಳ್ಳಿಗಾಡಿಂದ ಬಂದ ಬಡ ಕುಟುಂಬದ ಹಿನ್ನೆಲೆಯ ಶಿಕ್ಷಕರೆ ಅವರು ಬರೆದ ತಕರಾರು ಟಿಪ್ಪಣಿ ಹಾಗೆ ಇಟ್ಟುಕೊಂಡಿದ್ದೇನೆ.
Comments
Post a Comment