Skip to main content

Blog number 903. ನಾನು ಮತ್ತು ನನ್ನ ಬ್ಲಾಗ್ ಎಂಬ ಡೈರಿ, ಇದು ಸಾಮಾಜಿಕ ಜಾಲ ತಾಣದ ಬರಹಗಾರರಿಗೆ ಅವರ ಲೇಖನಗಳು ಸಂರಕ್ಷಿಸಲು ಅತ್ಯುತ್ತಮವಾದ ಬ್ಲಾಗ್ ಗಳು.

#ನಾನೇಕೆ_ಬ್ಲಾಗ್_ಪ್ರಾರಂಬಿಸಿದೆ?

#ಡೈರಿ_ರೂಪದಲ್ಲಿ_ನಮ್ಮ_ಬರವಣಿಗೆ_ಒಂದೇ_ಕಡೆ_ದಾಖಲಾಗುತ್ತದೆ.

#ಬೇಕಾದಾಗ_ತೆಗೆದು_ಬಳಸಲು_ಸುಲಭ

#ಸಾಮಾಜಿಕ_ಜಾಲತಾಣದಲ್ಲಿ_ಸಕ್ರಿಯರಾಗಿರುವವರು_ಇದನ್ನು_ಬಳಸಿಕೊಳ್ಳಬೇಕು.

#ಐದು_ವರ್ಷದಲ್ಲಿ_ನನ್ನ_ಬ್ಲಾಗಲ್ಲಿ_ದಾಖಲಾಗಿರುವ_ಚಿತ್ರಸಹಿತ_ಲೇಖನಗಳ_ಸಂಖ್ಯೆ_900.

  1 ನೇ ತಾರೀಖು ಜನವರಿ 2017 ರಂದು ನನ್ನ ಬ್ಲಾಗ್ Arunprasad Hombuja residency ಪ್ರಾರಂಭವಾಯಿತು, ಈ ಬ್ಲಾಗ್ ಪ್ರಾರಂಭಿಸಿ ಕೊಟ್ಟವರು ಐಟಿ ತಂತ್ರಜ್ಞರಾದ ಗೆಳೆಯ ಕೋಣಂದೂರಿನ ಮೂಲದ #ನವೀನ್.
  ಇದಕ್ಕೂ ಮೊದಲಿನಿಂದ 2010ರಿಂದ ನಾನು ಲ್ಯಾಪ್ ಟಾಪ್ ಬಳಸಿ ಪೇಸ್ ಬುಕ್ ಲ್ಲಿ ಬರೆದ ಲೇಖನಗಳು ಒಂದು ಕಡೆ ಸಂರಕ್ಷಿಸಲು ಆಗಲಿಲ್ಲ ಆದ್ದರಿಂದ ಜೀವನದ ಅಮೂಲ್ಯ ಸಮಯ ವ್ಯಯ ಮಾಡಿ ಬರೆದ ಲೇಖನ (ಉಪಯುಕ್ತವೋ? ಅಥವ ಅನುಪಯುಕ್ತವೋ? ಗೊತ್ತಿಲ್ಲ) ಒಂದು ಡೈರಿ ರೂಪದಲ್ಲಿ ಚಿತ್ರ ಸಹಿತ ಸಂರಕ್ಷಿಸಲು ಇದು ಉಪಯುಕ್ತವಾಗಿದೆ.
  2017 ರಿಂದ ಇವತ್ತಿನವರೆಗೆ ನಾನು ಬರೆದ ಲೇಖನಗಳು ಈ ಲೇಖನ ಸೇರಿ 903 ಅಂದರೆ ಸರಾಸರಿ ವಾರ್ಷಿಕ 200 ಲೇಖನಗಳು ಅಂದರೆ ವರ್ಷದ 365 ದಿನದಲ್ಲಿ 200 ದಿನ ಲೇಖನ ಬರೆದವೆಂದರು ಕನಿಷ್ಟ ಒ0ದು ಗ0ಟೆ ಅಂದರೂ ಜೀವಿತಾವದಿಯ ಅಂದಾಜು ಸಾವಿರ ಗಂಟೆ ಇದಕ್ಕೆ ಕಳೆದು ಹೋದವು ಆದರೆ ಬರೆದ ಲೇಖನವೂ ದಾಖಲಾಗದೇ ಕಳೆದುಕೊಂಡರೆ ವ್ಯರ್ಥವಲ್ಲವೆ? ಹಾಗಾಗಿ ಬ್ಲಾಗ್ ನನಗೆ ಉಪಯುಕ್ತವಾಗಿದೆ.
 ಇದರಲ್ಲೂ ಒಂದು ಪ್ರಯೋಗ ಮಾಡಿದ್ದೇನೆ ಏನೆಂದರೆ ಸದ್ಯದಲ್ಲೇ ಪ್ರಕಟವಾಗಲಿರುವ ನನ್ನ ಮೂರನೆ ಪುಸ್ತಕ #ಆನಂದಪುರಂ_ಇತಿಹಾಸ ಕಳೆದ ವರ್ಷದಿಂದ ಬ್ಲಾಗ್ ನಲ್ಲೇ ಬರೆದು ದಾಖಲಿಸುತ್ತಾ ಬಂದಿದ್ದೇನೆ, ಇತ್ತೀಚಿಕೆ ಮುದ್ರಕರಿಗೆ ಅದನ್ನು ಕಳಿಸಿದ್ದೆ ಅವರು ಅದನ್ನು ಪ್ರಿಂಟ್ ತೆಗೆದು (DTP ಮಾಡುವ ಕೆಲಸ ತಪ್ಪಿತು) ಪರಿಷ್ಕರಣೆಗೆ ಕಳಿಸಿದ್ದಾರೆ ಇದು ಬರಹಗಾರ ಮತ್ತು ಮುದ್ರಕರ ಇಬ್ಬರ ಕೆಲಸವೂ ಹಗುರ ಮಾಡಿದೆ.
  ಈ ರೀತಿ ಬ್ಲಾಗ್ ಗಳಲ್ಲಿ ಅತಿ ಹೆಚ್ಚಿನ ಮಾಹಿತಿ ಸಂಗ್ರಹ ಮಾಡಿದವರಲ್ಲಿ ಕನ್ನಡಿಗರಾದ ಮಂಗಳೂರಿನ ಒಂದು ಕಾಲದ ಅತ್ರಿ ಬುಕ್ ಹೌಸ್ ನ ಅಶೋಕವರ್ಧನರ ಬ್ಲಾಗ್ ಆಗಿದೆ.
  ಸಾಮಾಜಿಕ ಜಾಲ ತಾಣದ ಗೆಳೆಯರಿಗೆ ನನ್ನ ವಿನಂತಿ ನಿಮ್ಮ ಲೇಖನಗಳೂ ಬ್ಲಾಗ್ ನಲ್ಲಿ ಸಂರಕ್ಷಿಸಿ ಅಂತ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...