Blog number 886.ನಿನ್ನೆಯ ನನ್ನ ಅತಿಥಿಗಳು ಶಿವಮೊಗ್ಗದ ಪ್ರತಿಷ್ಟಿತ ಕರ್ನಾಟಕ ಸಂಘದ ಹದಿನಾಲ್ಕನೆ ಅಧ್ಯಕ್ಷರಾದ ಖ್ಯಾತ ಸಾಹಿತಿ, ಅಂಕಣಕಾರ ಸುಂದರ್ ನಮ್ಮ ಊರಿನಲ್ಲಿರುವ ಕೆಳದಿ ಅರಸ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾರ ದುರಂತ ಪ್ರೇಮ ಕಥೆಯ ಸ್ಮಾರಕ ಚಂಪಕ ಸರಸ್ಸು ನೋಡಲು ಬಂದಿದ್ದರು.
#ಕುವೆಂಪುರವರು_1930ರಲ್ಲಿ_ಉದ್ಘಾಟಿಸಿದ_ಕರ್ನಾಟಕ_ಸಂಘಕ್ಕೆ_ದಾರಾ_ಬೇಂದ್ರೆ_ಮಾಸ್ತಿವೆಂಕಟೇಶ್ಅಯ್ಯಂಗಾರರ_ಪ್ರೇರಣೆ
#ಹಸೋಡಿವೆ0ಕಟಶಾಸ್ತ್ರಿಗಳು_ಆಗ_ನೀಡಿದ_ದೇಣಿಗೆ_30_ಸಾವಿರ_ಈಗಿನ_ಲೆಖ್ಖದಲ್ಲಿ_30_ಕೋಟಿಗೂ_ಮಿಕ್ಕಿದ_ಮೌಲ್ಯ.
#ಸುಂದರ್_ಅವರ_ಸಂದರ್ಶನದಲ್ಲಿ_ಕರ್ನಾಟಕಸಂಘದ_ಹೆಚ್ಚಿನ_ಮಾಹಿತಿ_ಇದೆ.
ಸುಂದರ್ ಅವರು ಪ್ರತಿಷ್ಠಿತ ಶಿವಮೊಗ್ಗ ಕನ್ನಡ ಸಂಘದ 14ನೇ ಅದ್ಯಕ್ಷರಾಗಿ ಚುನಾವಣೆ ಮೂಲಕ ಆಯ್ಕೆ ಆದವರು, ಶಿವಮೊಗ್ಗ ಜಿಲ್ಲೆಯ ಖ್ಯಾತ ಸಾಹಿತಿ ಮತ್ತು ಅಂಕಣಗಾರರಾದ ಸುಂದರ್ ವೃತ್ತಿಯಲ್ಲಿ ಕಾಲೇಜ್ ಪ್ರಿನ್ಸಿಪಾಲರಾಗಿ ನಿವೃತ್ತರಾದವರು.
ನಿನ್ನೆ ಹಿರಿಯ ಸಮಾಜವಾದಿ ಪಿ.ಪುಟ್ಟಯ್ಯ ಮತ್ತು ಇನ್ನೊಬ್ಬ ಖ್ಯಾತ ಸಾಹಿತಿ, ಕರ್ನಾಟಕ ಸರ್ಕಾರದ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದ ಮತ್ತು ಜಿಲ್ಲೆಗೆ ಕುವೆಂಪು ವಿಶ್ವವಿದ್ಯಾಲಯ ತರಲು ಕಾರಣರಾಗಿದ್ದ ಶ್ರೀಕಂಠ ಕೂಡಿಗೆ ಒಟ್ಟಾಗಿ ಬಂದಿದ್ದರು.
ಅವರು ಬಂದ ಉದ್ದೇಶ ನಾನು ಕಳೆದ ವರ್ಷ ಬರೆದು ಪ್ರಕಟಿಸಿದ್ದ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ" #ಬೆಸ್ತರರಾಣಿ_ಚಂಪಕಾ ಇವರೆಲ್ಲರೂ ಓದಿದ್ದರಿಂದ ಆನಂದಪುರಂನಲ್ಲಿರುವ ಸುಮಾರು ನಾಲ್ಕುನೂರು ವರ್ಷದ ಸ್ಮಾರಕ #ಚಂಪಕ_ಸರಸ್ಸು ನೋಡುವುದು, ಹಾಗೆಯ ನಮ್ಮ ಊರಿನಲ್ಲಿ ಪ್ರಾರಂಭ ಆಗಿರುವ #ಶಿವಪ್ಪನಾಯಕ_ಕೃಷಿ_ವಿಶ್ವವಿದ್ಯಾಲಯ ಬೇಟಿ ಮತ್ತು ಕಾದಂಬರಿ ಕರ್ತು ಆದ ನನ್ನ ಜೊತೆ ಸಣ್ಣ ಬೇಟೆ ಮತ್ತು ಚರ್ಚೆ.
ಇವರನ್ನು ನಾನು ದೂರದಿಂದ ಬಲ್ಲೆ ಇವರೂ ಕೂಡ ನನ್ನ ಬಗ್ಗೆ ಮಾಹಿತಿ ಇದ್ದವರೇ ಆದರೂ ಪರಸ್ಪರ ನೇರ ಬೇಟಿ ಇದೇ ಮೊದಲು (ಪುಟ್ಟಯ್ಯರನ್ನು ಬಿಟ್ಟು) ನನಗೆ ತುಂಬಾ ಸಂತೋಷ ಆಯಿತು, ನಮ್ಮ ಮಲ್ಲಿಕಾ ವೆಜ್ ನ ಹಲಸಿನ ಎಲೆ ಕೊಟ್ಟೆ ಕಡಬು ಕಾಫಿ ಸ್ವೀಕರಿಸಿ ನಮ್ಮ ಸಂಸ್ಥೆಯ ಪದ್ಧತಿಯಂತೆ ಶಾಲು ಹೊದೆಸಿ ಹೂವು ನೀಡಿ ತೃಪ್ತಿಪಟ್ಟುಕೊಂಡೆ.
ನಮ್ಮ ರೆಸ್ಟೋರಾಂಟ್, ಲಾಡ್ಜ್, ಕಲ್ಯಾಣ ಮಂಟಪ ಮತ್ತು ಕೆಲವೇ ದಿನದಲ್ಲಿ ಪ್ರಾರಂಭ ಆಗಲಿರುವ ಪ್ರಕೃತಿ ಚಿಕಿತ್ಸಾ ಕೆಂದ್ರ, ಕಾಟೇಜ್ ಗಳನ್ನು ನೋಡಿ ಸಲಹೆ ಕೂಡ ನೀಡಿದ್ದಾರೆ.
ಸಾಹಿತ್ಯ ಪರಿಷತ್, ದಾರವಾಡದ ವಿದ್ಯಾವರ್ದಕ ಸಂಘ ಬಿಟ್ಟರೆ ಮೂರನೆಯದೇ ಶಿವಮೊಗ್ಗದ ಕರ್ನಾಟಕ ಸಂಘ ಇಷ್ಟು ಪುರಾತನ ಕನ್ನಡದ ಸಂಸ್ಥೆಗಳು ಬೇರೆ ಇಲ್ಲ.
ಸರ್ಕಾರದಿಂದ ಹಣ ಪಡೆಯುವುದಿಲ್ಲ, ಯಾರಿಂದಲೂ ದೇಣಿಗೆ ಪಡೆಯುವುದಿಲ್ಲ ಪ್ರತಿ ವರ್ಷ ಅರ್ಹರಿಗೆ ಪ್ರಶಸ್ತಿ ನೀಡುತ್ತಾರೆ ಇದಕ್ಕೆಲ್ಲ ಆದಾಯ ಕರ್ನಾಟಕ ಸಂಘದ ಎದುರಿನ ರಾಷ್ಟ್ರೀಯ ಹೆದ್ದಾರಿಗೆ ಅಭಿಮುಖವಾಗಿ ಇರುವ ಈ ಸಂಸ್ಥೆಯ ಅಂಗಡಿ ಮಳಿಗೆಗಳಿಂದ ಬರುವ ಬಾಡಿಗೆ ಮಾತ್ರ.
ರಾಷ್ಟ್ರಕವಿ ಕುವೆಂಪುರವರೇ ಉದ್ಘಾಟಿಸಿದ ವಿಶೇಷ ನೆನಪು ಇರುವ ಶಿವಮೊಗ್ಗದ ಕರ್ನಾಟಕ ಸಂಘ ಮುಂದಿನ ದಿನಗಳಲ್ಲಿ ಈ ಸ್ಮಾರಕ ಸಂರಕ್ಷಣೆಗೆ ಜೊತೆಯಾಗುವ, ಸ್ವಾತಂತ್ರ ಬಂದು ಇಷ್ಟು ವರ್ಷವಾದರೂ ಪುರಾತತ್ವ ಇಲಾಖೆಗೆ ಸೇರದೇ ಅರಣ್ಯ ಇಲಾಖೆಯ ಭೂಮಿಯಲ್ಲಿ ಇರುವುದನ್ನು ಶಿವಮೊಗ್ಗದ ಕರ್ನಾಟಕ ಸಂಘ ಪುರಾತತ್ವ ಇಲಾಖೆಗೆ ಸೇರಿಸುವುದರಲ್ಲಿ ಯಶಸ್ವಿ ಆಗಲಿದೆ ಎಂಬ ಸಂತೋಷದ ವಿಚಾರ ಕೂಡ.
ಸುಂದರ್ ಅವರಿಗೆ ನಾನು ವಿನಂತಿಸಿದ್ದು ನಾನು ಬರೆದ ಈ ಕಾದಂಬರಿ ಇಂಗ್ಲೀಷ್ ಗೆ ಅನುವಾದಿಸಬಹುದಾ? ಅಂತ ಅದಕ್ಕೆ ಅವರು ಹೇಳಿದ್ದು ಅವರ ಮನಸ್ಸಿನಲ್ಲಿ ಅಂತಹ ಯೋಚನೆ ಇದೆ ಅಂದಿದ್ದಾರೆ.
ನಂತರ ನಮ್ಮ ಜಿಲ್ಲೆಯ ಖ್ಯಾತ ಸಾಹಿತಿಗಳೂ, ಇತಿಹಾಸ ಆಸಕ್ತರು ಮತ್ತು ಜನಪರ ಹೋರಾಟಗಾರರೂ ಆದ ಇವರುಗಳು ಅಭಿಪ್ರಾಯಪಟ್ಟಿದ್ದು ಕೆಳದಿ ರಾಜ ವೆಂಕಟಪ್ಪ ನಾಯಕ ಸಾಗರ ಪಟ್ಟಣ (ಸದಾಶಿವ ಸಾಗರ) ನಿರ್ಮಿಸಿರುವುದು, ದೀರ್ಘ ಕಾಲ 46 ವರ್ಷ ಅವಧಿ ಆಡಳಿತ, ರಾಜ್ಯ ವಿಸ್ತಾರ ಮಾಡಿದರೂ ವೆಂಕಟಪ್ಪ ನಾಯಕರ ಚರಿತ್ರೆ ಉದ್ದೇಶ ಪೂರ್ವಕವಾಗಿ ಮಸಕು ಮಾಡಲು ರಾಜವೆಂಕಟಪ್ಪ ನಾಯಕ ಮತ್ತು ಬೆಸ್ತರ ಜಾತಿಯ ರಂಗೋಲಿ ಪ್ರವೀಣೆ ಚಂಪಕಾಳ ಅಂತರ್ಜಾತಿ ವಿವಾಹ.
Comments
Post a Comment