Skip to main content

Posts

Showing posts with the label Handigodu syndrome desease till neglected by Govt

Blog number 884. ಹಂದಿಗೋಡು ನಿಗೂಡ ಕಾಯಿಲೆ ಜಗತ್ತಿಗೆ ಮೊದಲು ದಾಖಲೆ ಮಾಡಿದ, ಸುಮಾರು 50 ವರ್ಷದಿಂದ ಹಂದಿಗೋಡು ನಿಗೂಡ ಕಾಯಿಲೆ ಸಂತ್ರಸ್ಥರ ನಿಸ್ವಾರ್ಥ ಸೇವೆ ಮಾಡುತ್ತಿರುವ ಹೆಚ್.ಎಂ.ಚಂದ್ರಶೇಖರ್ ರವರಿಗೆ ಪದ್ಮ ಪ್ರಶಸ್ತಿ ದೊರೆಯಲಿ.

#ಹಂದಿಗೋಡಿನ_ಹೆಚ್_ಎಂ_ಚಂದ್ರಶೇಖರ್_1974ರಲ್ಲಿ_ಈ_ಕಾಯಿಲೆ_ಪೀಡಿತರನ್ನು_ಮೊದಲು_ಗುರುತಿಸಿದವರು. #ಅವರ_ಸಂಪೂರ್ಣ_ಜೀವನ_ಹಂದಿಗೋಡು_ಕಾಯಿಲೆ_ಪೀಡಿತರಿಗೆ_ಮೀಸಲಿಟ್ಟವರು #ಇಂತವರಿಗೆ_ಕೇಂದ್ರ_ಸರ್ಕಾರದ_ಪದ್ಮ_ಪ್ರಶಸ್ತಿ_ಕೊಡಬಾರದೇಕೆ? #ಪ್ರಪಂಚದ_ಎರೆಡು_ನಿಗೂಡ_ಕಾಯಿಲೆ_ಶಿವಮೊಗ್ಗ_ಜಿಲ್ಲೆಯಲ್ಲಿ_ಪ್ರಥಮವಾಗಿ_ಗೋಚರಿಸಿತ್ತು #ಹಂದಿಗೋಡುಕಾಯಿಲೆ_ಮತ್ತು_ಮಂಗನಕಾಯಿಲೆ. #ಐವತ್ತು_ವರ್ಷವಾದರೂ_ಹಂದಿಗೋಡು_ಕಾಯಿಲೆಗೆ_ಔಷದಿ_ಕಂಡು_ಹಿಡಿಯಲಾಗಲಿಲ್ಲ #ಕುಮಾರಸ್ವಾಮಿ_ಮುಖ್ಯಮಂತ್ರಿ_ಆಗಿದ್ದಾಗ_ಹಂದಿಗೋಡಿನಲ್ಲಿ_ಗ್ರಾಮ_ವಾಸ್ತವ್ಯ_ಮಾಡಿದ್ದರು.   ಹಂದಿಗೋಡು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣಕ್ಕೆ ಸಮೀಪದ ಒಂದು ಸಣ್ಣ ಹಳ್ಳಿ, ಹಳ್ಳಿಯ ಮೇಲು ಬಾಗದಲ್ಲಿ ಪರಿಶಿಷ್ಟರ ಕಾಲೋನಿ ಕೆಳಗೆ ಹವ್ಯಕ ಬ್ರಾಹ್ಮಣರ ಬೀದಿ.   ಅಡಿಕೆ ಬೆಳೆಗಾರರಾದ ಹವ್ಯಕ ಬ್ರಾಹ್ಮಣರ ಕೃಷಿ ಕಾರ್ಮಿಕರು ಪರಿಶಿಷ್ಟ ಕಾಲೋನಿ ವಾಸಿಗಳು 1974ರಲ್ಲಿ ಈ ಕಾಲೋನಿಯ ಕೆಲವರಿಗೆ ಮೂಳೆಯ ಸಂದುಗಳಲ್ಲಿ ವಿಪರೀತ ನೋವು ಗೋಚರಿಸಿತ್ತು ಅಂತಹ ನಾಲ್ಕು ರೋಗಿಗಳನ್ನು ಹಂದಿಗೋಡಿನ ಹೆಚ್.ಎಂ.ಚಂದ್ರಶೇಖರ್ ಸಾಗರದ ಸರ್ಕಾರಿ ಆಸ್ಪತ್ರೆಗೆ ಅಡ್ಮಿಟ್ ಮಾಡಿಸುತ್ತಾರೆ ಆದರೆ ಕಾಯಿಲೆ ಏನಂತ ವೈದ್ಯರಿಗೆ ಗೊತ್ತಾಗುವುದಿಲ್ಲ ಇದು ಹಂದಿಗೋಡು ನಿಗೂಡ ಕಾಯಿಲೆ ಪ್ರಪಂಚಕ್ಕೆ ಮೊದಲ ಬಾರಿ ಗೋಚರಿಸಿದ ಘಟನೆ.   ನಿಮಾಃನ್ಸ್ ನ ಡಾ.ಕೆ.ಎಸ್.ಮಣಿ ಇದು ನರ ಸಂಬಂದಿತ ಕಾಯಿಲೆ ಅಲ್ಲ ಮ...