Skip to main content

Posts

Showing posts with the label Part 2 Naga Sadhus Escorting Barapantha yatra

4119.ಭಾಗ_2_ನಾಥಪಂಥದ_ಬಾರಾಪಂಥ್_ಯಾತ್ರೆಯಲ್ಲಿದರ್ಮ_ಸಂರಕ್ಷಕರಾಗಿ_ನಾಗ_ಸಾಧುಗಳು_ಬರುತ್ತಾರೆ

ಭಾಗ_2_ನಾಥಪಂಥದ_ಬಾರಾಪಂಥ್_ಯಾತ್ರೆಯಲ್ಲಿ ದರ್ಮ_ಸಂರಕ್ಷಕರಾಗಿ_ನಾಗ_ಸಾಧುಗಳು_ಬರುತ್ತಾರೆ    ನಾಗ ಸಾಧುಗಳನ್ನ ಹಿಂದೂ ಧರ್ಮದ ಎಲ್ಲಾ ಪಂಥಗಳೂ ಧರ್ಮದ ಸಂರಕ್ಷರು ಎಂದು ಹೇಳಲು ಕಾರಣ ಅವರು ಅದಕ್ಕಾಗಿ ಖಡ್ಗ ಹಿಡಿದು ಹೋರಾಡುತ್ತಾರೆ....  ನಾಥ ಪಂಥದ ಬಾರಾ ಪಂಥ್ ಯಾತ್ರೆ ಬಗ್ಗೆ ಇಷ್ಟೆಲ್ಲಾ ವಿವರ ಇರುವ ಪುಸ್ತಕ ಇದೇ ಮೊದಲು ಎನ್ನುತ್ತಾರೆ ಅಂತಹ ಅವಕಾಶಕ್ಕೆ ನಾನು ಧನ್ಯ ಅದಕ್ಕಾಗಿ ನಾನು ಅವರಿಗೆ ಸಮರ್ಪಿಸಿಕೊಂಡಿದ್ದರಿಂದ ಮಾತ್ರ ಅವರ ಆಂತರಿಕ ಲೋಕ ನನಗೆ ತೆರೆದು ಕೊಂಡಿತಾ?....     ಇದು ನಾನು 2027 ರ ಶಿವರಾತ್ರಿ ದಿನ ಬಿಡುಗಡೆ ಮಾಡುವ ನಾಥ ಪಂಥದ ಬಾರಾ ಪಂಥ್ ಯಾತ್ರೆ ಪುಸ್ತಕದ ಪುಟಗಳು ನಾಗ ಸಾದುಗಳ ಲೇಖನ ದೀರ್ಘವಾಗಿದುವುದರಿಂದ ಎರೆಡು ಭಾಗದಲ್ಲಿದೆ, ಮೊದಲ ಭಾಗ ಓದಿದ್ದೀರಿ ಈ ಎರಡನೆ ಭಾಗ ಓದಿ ನಿಮ್ಮ ಅಭಿಪ್ರಾಯ ತಿಳಿಸಿ.   ನಾಥಪಂಥದ ನಾಸಿಕ್‌ನಿಂದ ಕದ್ರಿ ತನಕದ ಬಾರಾ ಪಂಥ್ ಯಾತ್ರೆ ಯಲ್ಲಿ ನಾಗಾಸಾಧುಗಳ ಉಪಸ್ಥಿತಿ ಮತ್ತು ಅವರ ಪಾತ್ರದ ಕುರಿತಾದ ಮಾಹಿತಿ ಗುಪ್ತವಾಗಿರುತ್ತದೆ.   ನಾಥಪಂಥದಲ್ಲಿ ನಾಗಾಸಾಧುಗಳನ್ನು ಕೇವಲ ಆಧ್ಯಾತ್ಮಿಕ ಸಾಧಕರಾಗಿ ನೋಡದೆ 'ಧರ್ಮದ ರಕ್ಷಕರು' ಅಥವಾ 'ಸನಾತನ ಧರ್ಮದ ಸೈನಿಕರು' ಎಂದು ಪರಿಗಣಿಸಲಾಗುತ್ತದೆ.   ಇತಿಹಾಸದ ಕಾಲದಿಂದಲೂ ಇಂದಿನವರೆಗೂ ಅವರು ನಾಥಪಂಥ ಮತ್ತು ಸನಾತನ ಧರ್ಮದ ರಕ್ಷಣೆಯನ್ನು ಮೂರು ಪ್ರಮುಖ ಆಯಾಮಗಳಲ್ಲಿ ಮಾಡುತ್ತಾ ಬಂದಿದ್ದ...