Blog number 1068. ಕಲ್ಪರಸ ಎಂಬ ಜೀರೋ ಆಲ್ಕೋಹಾಲ್ ನೀರಾ ಎಂಬ ಎಳನೀರಿಗಿಂತ ಮೂರು ಪಟ್ಟು ಆರೋಗ್ಯದಾಯಕ ಪೇಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಸಿಗುತ್ತಿದೆ ಇದು ತೆಂಗು ಬೆಳೆಯ ಮೌಲ್ಯವರ್ಧನೆ ಕೂಡ.
#ಎಳನೀರಿಗಿಂತ_ಮೂರು_ಪಟ್ಟು_ಆರೋಗ್ಯಕರ_ಪೇಯ_ಕಲ್ಪರಸ #ರೋಗ_ಪೀಡಿತರಿಗೆ_ನೋಡಲು_ಹೋಗುವಾಗ_ಎಳನೀರು_ಬದಲು_ಇದನ್ನು_ಒಯ್ಯಿರಿ. #ವೈಜ್ಞಾನಿಕವಾಗಿ_ಪರ್ಮೆಂಟೇಶನ್_ಆಗದಂತೆ_ತೆಂಗಿನಮರದಿಂದ_ತೆಗೆದ_ಉತ್ಪನ್ನ. #ಫಲಭರಿತ_ಕೇವಲ_ಎಂಟು_ತೆಂಗಿನ_ಮರದಿಂದ_ವಾರ್ಷಿಕ_ಎರಡು_ಲಕ್ಷ_ಲಾಭವಿದೆ. #ಲೀಟರಗೆ_ಇನ್ನೂರು_ರೂಪಾಯಿಗೆ_ಲಭ್ಯ. ಇವತ್ತು ಕುಂದಾಪುರದ ಪ್ರಸಿದ್ಧ ಮಾನಸಿಕ ತಜ್ಞರಾದ ಡಾ. ಪ್ರಕಾಶ್ ತೋಳಾರರ ಹತ್ತಿರ ನಮ್ಮ ದೇವರ ಮಗ ನಾರಾಯಣನ ತಪಾಸಣಿಗೆ ನನ್ನ ಸಹೋದರ ಕರೆದುಕೊಂಡು ಹೋಗುವಾಗ ನೀರಾ ತರಲು (ತರುವಷ್ಟರಲ್ಲಿ ಕಳ್ಳು ಅಥವ ಶೇ೦ದಿ ಆಗಿರುತ್ತದೆ) ಹೇಳಿದ್ದೆ. ಸಂಜೆ ಬಂದಾಗ 5 ಲೀಟರ್ ಶೇಂದಿ ಜೊತೆಗೆ ಒಂದೆರೆಡು ನೀರಾ ಬಾಟಲಿ ಕಲ್ಪ ರಸ ಎಂಬ ಬ್ರಾಂಡಿನಲ್ಲಿರುವುದು ತಂದಿದ್ದರು. ಭಾರತೀಯ ಕಿಸಾನ್ ಸಂಘ ಮತ್ತು ಸೆಂಟ್ರಲ್ ಪ್ಲಾಂಟೇಶನ್ ಕ್ರೋಪ್ ರಿಸರ್ಚ್ ಇನ್ಸ್ಟಿಟ್ಯೂಟ್ (CPCRI), ಉಡುಪಿ ಕಲ್ಪರಸ ಕೊಕನಟ್ ಮತ್ತು ಆಲ್ ಸ್ಪೈಸಸ್ ಪ್ರೊಡ್ಯೂಸರ್ ಕಂಪನಿ (ನಿ ) ಕಲ್ಪ ರಸ ಹೆಸರಿನ ಬ್ರಾಂಡಿನಲ್ಲಿ ನೀರಾ ಉತ್ಪಾದಿಸಿ ಮಾರಾಟ ಮಾಡಲಿದೆ ಎಂಬ ಸುದ್ದಿ ಎರೆಡು ವರ್ಷದ ಹಿಂದೆ ಸುದ್ದಿ ಮಾಧ್ಯಮಗಳಲ್ಲಿ ಓದಿದ್ದೆ ನಂತರ ಕೊರಾನ ಕಾಲಗತಿಯಲ್ಲಿ ಇದನ್ನು ಮರೆತಿದ್ದೆ. ಇವತ್ತು ಕಲ್ಪರಸ ಎ೦ಬ ನೀರಾ ಕುಡಿದೆ ಇದು ಉತ್ಕೃಷ್ಟ ರುಚಿಯಲ್ಲಿದೆ ಅಲ್ಲದೆ ಅಷ್ಟೆ ವೈಜ್ಞ...