Skip to main content

Posts

Showing posts with the label BESTHARA RANI CHAMPAKA NOVEL REVIEW -2

ಬೆಸ್ತರರಾಣಿ ಚಂಪಕಾ ವಿಮಶೆ೯ - 2

#ಜಾದುಗಾರ್_ಪ್ರಶಾಂತ್_ಹೆಗ್ಗಡೆ    ನನ್ನ #ಬೆಸ್ತರರಾಣಿ_ಚಂಪಕಾ ಓದಿ ವಿಮಶೆ೯ ಮಾಡಿದ್ದಾರೆ .     ಪ್ರಖ್ಯಾತ ಜಾದುಗಾರರಾಗಿ ನಾಡಿನಾದ್ಯಂತ ಜಾದು ಪ್ರದಶ೯ನ ನೀಡುವ ಪ್ರಶಾಂತ್ ಹೆಗ್ಗಡೆ ಮಲೆನಾಡಿನವರು ಈಗ ಶಿವಮೊಗ್ಗ ಪಟ್ಟಣ ವಾಸಿ ಇವರು ಬಾಲ್ಯದಲ್ಲಿ ಆನಂದಪುರಂ ನಲ್ಲಿ ರಜಾ ದಿನ ಕಳೆಯುತ್ತಿದ್ದರಂತೆ.   ಆಗ ಆನಂದಪುರಂ ಪ್ರಖ್ಯಾತ #ಕೋಮಲಾ_ವಿಲಾಸ್ ಹೋಟೆಲ್ ನ ಮಾಲಿಕರಾದ ಕಿಣಿ ರಾಯರು ಮತ್ತು #ಜಯವೀರ_ನಾಯಕ್ ಇವರ ಬಂದುಗಳು.   ಇವರ ಜಾದು ಪ್ರದಶ೯ನ ಆಯೋಜಿಸುವುದಿದ್ದರೆ ಇವರ ಸೆಲ್ ನಂಬರ್ 9844183344 ಗೆ ಸಂಪಕಿ೯ಸಿ. ಬೆಸ್ತರ ರಾಣಿ ಚಂಪಕಾ ಧನ್ಯವಾದ ಗಳು ಮಿತ್ರರಾದ  ,Arun Prasad ರವರಿಗೆ. ತಾವು ಕಳಿಸಿದ ಪುಸ್ತಕ ಕೈ ಸೇರಿತು. ಇದರ ಬಗ್ಗೆ ‌ನನಗೆ ಅನ್ನಿಸಿದ್ದನ್ನು ಬರೆದಿರುವೆ. ಸುಮಾರು 1610 ರಲ್ಲಿ ನಡೆದಿರಬಹುದು ಎನ್ನಲಾದ ರಾಜಾ ವೆಂಕಟಪ್ಪ ನಾಯಕರ ಒಂದು ಪ್ರೇಮ ಕಥಾನಕ ದ ವಿಸ್ತಾರ ರೂಪವೇ ಬೆಸ್ರರಾಣಿ ಚಂಪಕಾ.            ಚಂಪಕಾ ಳ ರಂಗೋಲಿ ಕಲೆಗೆ ಮಾರುಹೋಗಿ ಆಕೆಯ ಪ್ರೇಮದಲ್ಲಿ ಮುಳುಗಿ ರಾಜರು ಆಕೆಯನ್ನು ವಿವಾಹವಾಗುವ ತನಕವೂ ಮುಂದುವರೆಯುತ್ತದೆ . ಮೊದಲೇ ಪುತ್ರಶೋಕದಿಂದ ನೊಂದಿದ್ದ ರಾಜರ ಮನ ಪರಿವರ್ತನೆ ಗಾಗಿ ಆಸ್ಥಾನದ ಸಿಬ್ಬಂದಿ ಕೂಡ ಇವರಿಬ್ಬರ ವಿವಾಹಕ್ಕೆ ಸಹಕರಿಸುತ್ತಾರೆ.ನಂತರದ ವಿಷಯಗಳೆ ಬಹಳ ಕುತೂಹಲ ಕಾರಿ.     ...