https://youtu.be/kO70qIQxc-I?feature=shared #ನಮ್ಮ_ಊರ_ಜಾತ್ರೆ_ಝಲಕುಗಳು #ರಥೋತ್ಸವದ_ಹಿಂದಿನ_ದಿನ_ಹಯಗ್ರೀವ_ಪ್ರಸಾದ #ವರಸಿದ್ದಿ_ವಿನಾಯಕನಿಗೆ_ನನ್ನಿಂದ_ಹಯಗ್ರೀವ_ತಯಾರಿಸಿ_ಅರ್ಪಿಸುವ_ಹರಕೆ #ನನ್ನ_ಪತ್ನಿಯ_ಹರಕೆ_ಈಡೇರಿಸಿದೆ ಕಡಲೆ ಬೇಳೆ, ಬೆಲ್ಲ, ತೆಂಗಿನತುರಿ, ಗೋಡಂಬಿ, ದ್ರಾಕ್ಷಿ ಮತ್ತು ಶುದ್ದ ತಪ್ಪದಿಂದ ಹಯಗ್ರೀವ ತಯಾರಿಸುತ್ತಾರೆ ಇದು ಗಣಪತಿಗೆ ಮತ್ತು ಈಶ್ವರನಿಗೆ ಅತಿ ಹೆಚ್ಚು ಇಷ್ಟ ಎಂಬ ನಂಬಿಕೆ ಇದೆ. ಹಯಗ್ರೀವ ಎಂದರೆ ಕುದುರೆ ಮುಖದ ವಿಷ್ಣುವಿನ ಅವತಾರ ಆದರೆ ಈ ಪ್ರಸಾದಕ್ಕೆ ಹಯಗ್ರೀವ ಎಂಬ ಹೆಸರು ಬರಲು ಕಾರಣ? ... ಈ ವರ್ಷ 18 ನೇ ವರ್ಷದ ರಥೋತ್ಸವ ನನ್ನ ಪತ್ನಿ ನನ್ನಿಂದ ಹಯಗ್ರೀವ ದೇವರಿಗೆ ಅರ್ಪಿಸುವ ಹರಕೆ ಹೊತ್ತಿದ್ದಳು ಆದ್ದರಿಂದ ರಥೋತ್ಸವದ ಹಿಂದಿನ ದಿನ ದೇವಾಲಯದ ಹೋಮ ಧ್ವಜಾರೋಹಣ ಮುಗಿಸಿ ಬಂದವನು ಪುನಃ ಸ್ನಾನ ಮಾಡಿ ಹಯಗ್ರೀವ ತಯಾರಿಸಿದೆ. ಮನೆಯಲ್ಲೇ ತಯಾರಿಸಿದ ತುಪ್ಪ, ಮಲೆನಾಡಿನ ಆಲೇಮನೆ ಬೆಲ್ಲ ಹಯಗ್ರೀವಕ್ಕೆ ಪತ್ನಿ ತೆಗೆದಿರಿಸಿದ್ದಳು. ಎರಡು ತಾಸಿನ ಕಾಲ ತೆಗೆದುಕೊಂಡು ಹಯಗ್ರೀವ ತಯಾರಿಸಿ ಸಂಜೆ ದೇವಾಲಯದಲ್ಲಿ ದೇವರಿಗೆ ನೈವೇಧ್ಯ ಮಾಡಿಸಿ ಬಂದ ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಯಿತು.