Skip to main content

Posts

Showing posts with the label T.D.Kamalakdha Pandith Memories

Blog number 1556.ಟಿ.ಡಿ. ಕಮಲಾಕ್ಷ ಪಂಡಿತ್ ನೆನಪುಗಳು.

#ಸಾಗರದ_ಟಿಡಿಕೆ_ಪಂಡಿತ್_ಪೂರ್ಣ_ಹೆಸರು_ಕಮಲಾಕ್ಷ_ಪಂಡಿತ್ #ಕರ್ಮಚಾರಿ_ಪತ್ರಿಕೆ_ಸಂಪಾದಕರು #ಸಮಾಜವಾದಿ_ಶಾಂತವೇರಿ_ಗೋಪಾಲಗೌಡ_ಎಸ್_ಎಸ್_ಕುಮುಟಾ_ಪಿ_ಪುಟ್ಟಯ್ಯರ_ಒಡನಾಡಿ #ಕನ್ನಡ_ಸಮಾಜವಾದಿ_ಯುವಜನ_ಸಭೆಯ_ಮೊದಲ_ರಾಜ್ಯ_ಸಮ್ಮೇಳನ_ಯಶಸ್ವಿಗೆ_ಕಾರಣಕರ್ತರು. #ಹಿರಿಯ_ಸಮಾಜವಾದಿ_ಶಿವಮೊಗ್ಗದ_ಪ್ರಕೃತಿ_ಮುದ್ರಣಾಲಯದ_ಪಿ_ಪುಟ್ಟಯ್ಯ_ಪಂಡಿತರ_ಬಗ್ಗೆ_ಹೇಳಿದ್ದು.   ಸಾಗರದಲ್ಲಿ ಚರ್ಚ್ ಸಮೀಪದಲ್ಲಿ ಕೆ.ಜಿ. ಶಿವಪ್ಪರ ಮನೆ ಎದರು ಟಿ.ಡಿ.ಕೆ. ಪಂಡಿತರ ತಂದೆ ದೇವ ಪಂಡಿತರ ಮನೆ ಇತ್ತು ಅವರ ಮನೆ ಎದರು ನಮ್ಮ ಮನೆ ಇತ್ತು ಅಂತ ಹಿರಿಯ ಸಮಾಜವಾದಿ ದುರೀಣರಾದ ಪಿ.ಪುಟ್ಟಯ್ಯನವರು ಟಿ.ಡಿ.ಕೆ. ಪಂಡಿತರನ್ನು ನೆನಪು ಮಾಡಿ ಕೊಂಡರು.   ನಂತರ ಆ ಕಾಲದಲ್ಲಿ ಶರಾವತಿ ಮುಳುಗಡೆ ಪ್ರದೇಶದಿಂದ ಲೈಟ್ ವುಡ್ ಗಳನ್ನು ಬೆಂಗಳೂರಿನ ಪ್ಲೇ ವುಡ್ ಪ್ಯಾಕ್ಟರಿಗೆ ತಮ್ಮ ಶವರ್ ಲೆಟ್ ಮತ್ತು ಬೆಡ್ ಪೋರ್ಡ್ ಲಾರಿಯಲ್ಲಿ ಸಾಗಾಣಿಕೆ ಮಾಡುವ ದೊಡ್ಡ ಗುತ್ತಿಗೆದಾರರಾಗಿದ್ದ ದೇವ ಪಂಡಿತರು ಪ್ರಾಮಾಣಿಕ ವ್ಯಾಪರಸ್ಥರು, ಅವರು ತಮ್ಮ ನೂತನ ಮನೆ (ಈಗಿನ ಕಾಗೋಡು ತಿಮ್ಮಪ್ಪರ ಮನೆ ಎದುರು) ನಿರ್ಮಿಸಿ ಅಲ್ಲಿ ನೆಲೆಸಿದರು.    ದೇವ ಪಂಡಿತರ ಹಿರಿಯ ಮಗ ಟಿ.ಡಿ.ಕಮಲಾಕ್ಷ ಪಂಡಿತ್, ರಾದಾ ಕೃಷ್ಣ ಪಂಡಿತ್, ಪಾಂಡುರಂಗ ಪಂಡಿತ್, ಸುಧಾರಕರ ಪಂಡಿತ್, ತ್ರಿವಿಕ್ರಮ ಪಂಡಿತ್, ರಾಮ ಪಂಡಿತ್ , ಲಕ್ಷ್ಮಣ ಪಂಡಿತ್ ಮತ್ತು ಮೂವರು ಪುತ್ರಿಯರು ಅಂತ ಅವರ ವಯೋ ಸಹಜ ಮರೆವಿ...