#ಸಾಗರದ_ಟಿಡಿಕೆ_ಪಂಡಿತ್_ಪೂರ್ಣ_ಹೆಸರು_ಕಮಲಾಕ್ಷ_ಪಂಡಿತ್
#ಕರ್ಮಚಾರಿ_ಪತ್ರಿಕೆ_ಸಂಪಾದಕರು
#ಸಮಾಜವಾದಿ_ಶಾಂತವೇರಿ_ಗೋಪಾಲಗೌಡ_ಎಸ್_ಎಸ್_ಕುಮುಟಾ_ಪಿ_ಪುಟ್ಟಯ್ಯರ_ಒಡನಾಡಿ
#ಕನ್ನಡ_ಸಮಾಜವಾದಿ_ಯುವಜನ_ಸಭೆಯ_ಮೊದಲ_ರಾಜ್ಯ_ಸಮ್ಮೇಳನ_ಯಶಸ್ವಿಗೆ_ಕಾರಣಕರ್ತರು.
#ಹಿರಿಯ_ಸಮಾಜವಾದಿ_ಶಿವಮೊಗ್ಗದ_ಪ್ರಕೃತಿ_ಮುದ್ರಣಾಲಯದ_ಪಿ_ಪುಟ್ಟಯ್ಯ_ಪಂಡಿತರ_ಬಗ್ಗೆ_ಹೇಳಿದ್ದು.
ಸಾಗರದಲ್ಲಿ ಚರ್ಚ್ ಸಮೀಪದಲ್ಲಿ ಕೆ.ಜಿ. ಶಿವಪ್ಪರ ಮನೆ ಎದರು ಟಿ.ಡಿ.ಕೆ. ಪಂಡಿತರ ತಂದೆ ದೇವ ಪಂಡಿತರ ಮನೆ ಇತ್ತು ಅವರ ಮನೆ ಎದರು ನಮ್ಮ ಮನೆ ಇತ್ತು ಅಂತ ಹಿರಿಯ ಸಮಾಜವಾದಿ ದುರೀಣರಾದ ಪಿ.ಪುಟ್ಟಯ್ಯನವರು ಟಿ.ಡಿ.ಕೆ. ಪಂಡಿತರನ್ನು ನೆನಪು ಮಾಡಿ ಕೊಂಡರು.
ನಂತರ ಆ ಕಾಲದಲ್ಲಿ ಶರಾವತಿ ಮುಳುಗಡೆ ಪ್ರದೇಶದಿಂದ ಲೈಟ್ ವುಡ್ ಗಳನ್ನು ಬೆಂಗಳೂರಿನ ಪ್ಲೇ ವುಡ್ ಪ್ಯಾಕ್ಟರಿಗೆ ತಮ್ಮ ಶವರ್ ಲೆಟ್ ಮತ್ತು ಬೆಡ್ ಪೋರ್ಡ್ ಲಾರಿಯಲ್ಲಿ ಸಾಗಾಣಿಕೆ ಮಾಡುವ ದೊಡ್ಡ ಗುತ್ತಿಗೆದಾರರಾಗಿದ್ದ ದೇವ ಪಂಡಿತರು ಪ್ರಾಮಾಣಿಕ ವ್ಯಾಪರಸ್ಥರು, ಅವರು ತಮ್ಮ ನೂತನ ಮನೆ (ಈಗಿನ ಕಾಗೋಡು ತಿಮ್ಮಪ್ಪರ ಮನೆ ಎದುರು) ನಿರ್ಮಿಸಿ ಅಲ್ಲಿ ನೆಲೆಸಿದರು.
ದೇವ ಪಂಡಿತರ ಹಿರಿಯ ಮಗ ಟಿ.ಡಿ.ಕಮಲಾಕ್ಷ ಪಂಡಿತ್, ರಾದಾ ಕೃಷ್ಣ ಪಂಡಿತ್, ಪಾಂಡುರಂಗ ಪಂಡಿತ್, ಸುಧಾರಕರ ಪಂಡಿತ್, ತ್ರಿವಿಕ್ರಮ ಪಂಡಿತ್, ರಾಮ ಪಂಡಿತ್ , ಲಕ್ಷ್ಮಣ ಪಂಡಿತ್ ಮತ್ತು ಮೂವರು ಪುತ್ರಿಯರು ಅಂತ ಅವರ ವಯೋ ಸಹಜ ಮರೆವಿನಲ್ಲೂ ನೆನಪಿಸಿ ಕೊಂಡರು.
ಆ ಕಾಲದಲ್ಲಿ ಬಿ.ಎನ್.ಕಾಮತ್ ರು ಚಾರ್ ಕೋಲ್ ತಯಾರಿಸಿ ಭದ್ರಾವತಿ ಕಾರ್ಖಾನೆಗೆ ಸರಭರಾಜು ಮಾಡುವ ದೊಡ್ಡ ಗುತ್ತಿಗೆದಾರರಾಗಿದ್ದರಂತೆ.
ಸಾಗರದ ತಿಮ್ಮಣ್ಣನ ಬಿರಿಯಾನಿ ಹೋಟೆಲ್ ತುಂಭಾ ಪ್ರಸಿದ್ದವಾಗಿತ್ತು ಆಗ ಪುಟ್ಟಯ್ಯ - ಎಸ್.ಎಸ್. ಕುಮುಟಾ ಮತ್ತು ಟಿ.ಡಿ. ಕಮಲಾಕ್ಷ ಪಂಡಿತರು ಆ ಹೋಟೆಲ್ ನ ಖಾಯಂ ಗಿರಾಕಿಗಳು.
ಟಿ.ಡಿ.ಕೆ.ಪ೦ಡಿತರು ತುಂಬಾ ಸುಂದರವಾಗಿ ಪ್ಲೇ ಕಾರ್ಡ್ ಗಳನ್ನು ಬರೆಯುತ್ತಿದ್ದರಂತೆ, ಅದರಲ್ಲೂ ಕಾವ್ಯಾತ್ಮಕವಾದ ಘೋಷಣೆಗಳನ್ನು ಬರೆದು ಬಿದಿರು ತಟ್ಟಿಗೆ ಅಂಟಿಸಿ ಮೆರವಣಿಗೆ ಸಭೆ ಸಮಾರಂಭಗಳಿಗೆ ವಿಶೇಷವಾದ ಕಳೆ ನೀಡುತ್ತಿದ್ದರಂತೆ.
ಸಮಾಜ ವಾದಿ ಸಂಘಟನೆಯ ಭಾಗವಾದ ಕನ್ನಡ ಯುವ ಜನ ಸಮಾಜವಾದಿ ಸಂಘಟನೆಗೆ ಆಗ ರಾಜ್ಯಾಧ್ಯಕ್ಷರು ಆ.ನ.ಕೃಷ್ಣರಾಯರು, ರಾಜ್ಯ ಪ್ರದಾನ ಕಾರ್ಯದರ್ಶಿ ಕೋಣಂದೂರು ಲಿಂಗಪ್ಪ, ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಪಿ.ಪುಟ್ಟಯ್ಯ.
ಈ ಸಂದರ್ಭದಲ್ಲಿ ಸಾಗರದಲ್ಲಿ ಪಿ.ಪುಟ್ಟಯ್ಯ, ಎಸ್.ಎಸ್. ಕುಮುಟಾ, ಟಿ.ಡಿ ಕೆ. ಪಂಡಿತ್, ವಿಲಿಯಂ, ವೀರಣ್ಣ ಹೆಗ್ಗಡೆ (ಇನ್ನಿಬ್ಬರ ಹೆಸರು ಮರೆತಿದ್ದಾರೆ) ಒಟ್ಟು 8 ಯುವಕರು ಸಾಗರ ಪೇಟೆಯಲ್ಲಿ ಮೆರವಣಿಗೆ ನಡೆಸುತ್ತಾರೆ ಅವತ್ತಿನ ಪ್ಲೇ ಕಾರ್ಡ್ ಸಾಹಿತ್ಯ ಮತ್ತು ತಯಾರಿ ಯಥಾ ಪ್ರಕಾರ ಕಮಾಲಕ್ಷ ಪಂಡಿತರದ್ದು "ಕನ್ನಡಿಗರೆ ಶಂಡತನ ಸಲ್ಲದು" ಎಂಬ ಪ್ಲೇ ಕಾರ್ಡ್ ಮೆರವಣಿಗೆ ಪೋಟೋ ಆ ಕಾಲದಲ್ಲಿ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯ ಮುಖ ಪುಟದ ಸುದ್ದಿ ಆಗಿದ್ದು ರಾಜ್ಯದಲ್ಲಿ ದೊಡ್ಡ ಸುದ್ದಿ ಆಗಿತ್ತಂತೆ.
(ನಾಳೆ ಮುಂದಿನ ಭಾಗ)
Comments
Post a Comment