#ರಾಜಕೀಯದ ರೆಬೆಲ್ ಸ್ಟಾರ್ ಗೋಪಾಲಕೃಷ್ಣ ಬೇಳೂರು
(5 ಮೇ 2018)
ಈಗಷ್ಟೆ ಗೋಪಾಲಕೃಷ್ಣ ಬೇಳೂರು ಅವರ ಅಭಿಮಾನಿ ಬಳಗದ ಜೊತೆ ಕಾಂಗ್ರೇಸ್ ನ ಮುಖ೦ಡರುಗಳಾದ ಶ್ರೀಮತಿ ಜೋತಿ ಮುರುಳಿದರ್, ದಲಿತ ಮುಖಂಡರಾದ ಲಿಂಗರಾಜ್ ಜೊತೆ ನನ್ನ ಕಚೇರಿಗೆ ಬಂದಿದ್ದರು.
ಎರೆಡು ಬಾರಿ ಶಾಸಕರಾಗಿದ್ದ ಗೋಪಾಲಕೃಷ್ಣ ಬೇಳೂರು ಕಳೆದ ವಿದಾನ ಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್.ಪಕ್ಷದಿಂದ ಸ್ಪದಿ೯ಸಿದ್ದರು ಆಗ ನಾನು ಆ ಪಕ್ಷದ ತಾಲ್ಲೂಕ್ ಅಧ್ಯಕ್ಷ, ಸುಮಾರು 20 ದಿನ ಜೊತೆಯಲ್ಲಿ ಕೆಲಸ ಮಾಡಿದ ದಿನಗಳಲ್ಲಿ ನನಗೆ ಅವರ ಒಡನಾಟದ ಅನುಭವವಾಯಿತು.
ಚುನಾವಣೆಯಲ್ಲಿ 23 ಸಾವಿರ ಮತ ಪಡೆದರು ಆಗಲೆ ಸಂಸತ್ ಚುನಾವಣೆ ಬಂತು ಯಡೂರಪ್ಪ ಲೋಕಸಭೆಗೆ ಸ್ಪದಿ೯ಸಿದರು ಇವರನ್ನ ಪುನಃ ಮಾತೃ ಪಕ್ಷಕ್ಕೆ ಕರೆದರು ಆಗ ನಾನು ಇವರಿಗೆ ಹಿತೈಷಿ ಆಗಿ ಜೆಡಿಎಸ್ ನಲ್ಲೆ ಇದ್ದು ಪಕ್ಷ ಸಂಘಟಿಸೋಣ ಅಂದೆ ಆದರೆ ಸಾಗರದ ಬಿಜೆಪಿಯ ಅನೇಕರು ಮುಂದೆ ನೀವೇ ಶಾಸಕ ಅಭ್ಯಥಿ೯ ಅಂತ ಪಕ್ಷಕ್ಕೆ ಸೇರಿಸಲು ಒತ್ತಾಯಿಸಿದಾಗ ಇವರು ಅನಿವಾಯ೯ವಾಗಿ ಬಿಜೆಪಿ ಸೇರಲು ತೀಮಾ೯ನಿಸಿದರು.
ಈ ಬಗ್ಗೆ ಪೂವ೯ ಭಾವಿಯಾಗಿ ಉಳ್ಳುರು ಸಿಗಂದೇಶ್ವರಿ ಕಾಲೇಜಿನ ಸಭಾ0ಗಣದಲ್ಲಿ ಸಭೆ ಇತ್ತು ಅಲ್ಲಿ ಮೊದಲ ಭಾಷಣ ನನ್ನದೆ, ನಾನು ನನ್ನ ಅಭಿಪ್ರಾಯ ಮಂಡಿಸಿದೆ ನಿಮ್ಮ ಅಭಿಮಾನಿಗಳು ನೀವು ಹಾಳು ಬಾವಿಗೆ ಹಾರಿದರೂ ಹಿಂಬಾಲಿಸುತ್ತಾರೆ ಆದರೆ ನಿಮ್ಮ ರಾಜಕೀಯ ಭವಿಷ್ಯದ ಸಾಧ್ಯ ಸಾಧ್ಯತೆ ಬಗ್ಗೆ ನೀವೇ ನಿದ೯ರಿಸಬೇಕು ಅಂದಿದ್ದೆ.
ನಂತರೂ ನಾನೂ ಸೇರಿ ಎಲ್ಲರೂ ಬಿಜೆಪಿ ಸೇರಿ ಮೊದಿಗಾಗಿ ಯಡೂರಪ್ಪರ ಪರ ಚುನಾವಣೆ ಪ್ರಚಾರ ಮಾಡಿದೆವು.
ಇದೇ ಸಂದಭ೯ದಲ್ಲಿ ಯಡೇಹಳ್ಳಿ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ಜಾತ್ರೆಗೆ ಗೋಪಾಲಕೃಷ್ಣರು ಈಶ್ವರಪ್ಪರನ್ನ ಕರೆತಂದರು ಅವರು ಪ್ರತಿ ವಷ೯ ನಡೆಯುವ ಜಾತ್ರಾ ಪ್ರಯುಕ್ತ ಬಯಲು ಕುಸ್ತಿ ಉದ್ಘಾಟಿಸಿ ಗರಡಿ ಮನೆಗೆ 10 ಲಕ್ಷ ಅನುದಾನ ಘೋಷಿಸಿದ್ದರು ಈ ವರೆಗೆ ಅದು ಮಂಜೂರಾಗಿಲ್ಲ ಬಿಡಿ.
ಗೋಪಾಲ ಕೃಷ್ಣ ರೆಬೆಲ್ ಪ್ರವೃತ್ತಿಯವರಾದರು ನಂಬಿದವರಿಗೆ ಮೋಸ ಮಾಡುವವರಲ್ಲ ಇವರನ್ನ ನಂಬಿ ಹೋಗಬಹುದು, ಇವರೆ ರಾಜಕೀಯದಲ್ಲಿ ಬೇರೆಯವರನ್ನ ನಂಬಿ ಮೊಸ ಹೋಗಿದ್ದಾರೆ.
ಇವತ್ತು ನಾನು ಇವರಿಗೆ ಹೇಳಿದ್ದು ಆಗಿದ್ದೆಲ್ಲ ಒಳ್ಳೆಯದೆ, ಮುಂದೆ ಆಗುವುದು ಒಳ್ಳೆಯದೆ, ಕಾಂಗ್ರೆಸ್ ಸೇರಿ ಮಾವ ಅಳಿಯ ಒಂದಾಗಿದ್ದೀರಿ ಮು೦ದೆ ಶಿವಮೊಗ್ಗ ಲೋಕ ಸಭೆಗೆ ಕಾಂಗ್ರೆಸ್ ನಿಂದ ಸ್ಪದಿ೯ಸಿ, ಅವಾಗ ಜೆಡಿಎಸ್ ಅಭ್ಯಥಿ೯ ಹಾಕೊಲ್ಲ, ಸಣ್ಣ ಸಣ್ಣ ಬಿನ್ನ ಅಭಿಪ್ರಾಯಕ್ಕೆ ಸಿಡಿಯ ಬೇಡಿ ಅಂದೆ.
ಇದಕ್ಕೆ ಅವರೂ ಸರಿ ಅಂತ ತಲೆ ತೂಗಿದರು.
ಸಿಡುಕುವ, ನೇರವಾಗಿ ಪ್ರತಿಕ್ರಯಿಸುವುದರಿ೦ದ ಅನೇಕರ ವಿರೋದ ಸಹಜ ಆದರೆ ಸರಿಯಾದ ಮಾಗ೯ದಶ೯ನ ಪಡೆದರೆ ಇವರು ರಾಜ್ಯ ಮಟ್ಟದ ನಾಯಕರಾಗುವ ಅಹ೯ತೆ ಇವರಿಗಿದೆ.
ದೇವರು ಇವರಿಗೆ ಉತ್ತಮ ಭವಿಷ್ಯ ನೀಡಲಿ ಎಂದು ಹಾರೈಸುತ್ತೇನೆ.
Comments
Post a Comment