Blog number 1489. ಬೆಂಗಳೂರಿನ ವಿದಾನ ಸೌಧದ ಸೆಕ್ರೆಟರಿಯೆಟ್ ನಲ್ಲಿ ಅಂಡರ್ ಸೆಕ್ರೆಟರಿ ಆಗಿರುವ ಖ್ಯಾತ ಚಲನಚಿತ್ರ ತಾರೆ ಪದ್ಮಾ ಕುಮುಟಾರ ಸಹೋದರ, ಖ್ಯಾತ ಸಮಾಜವಾದಿ ದುರೀಣ ಎಸ್.ಎಸ್. ಕುಮುಟಾರ ಪುತ್ರ ಸುಬ್ರಮಣ್ಯ ಕುಮುಟಾ ನನ್ನ ಅತಿಥಿ.
https://youtu.be/qz_lN6Lbb6o
#ನನ್ನ_ಇವತ್ತಿನ_ಅತಿಥಿ_ಸುಬ್ರಮಣ್ಯ_S_ಕುಮಟಾ.
#ಚೊಮನದುಡಿ_ಸಿನಿಮಾದ_ರಾಷ್ಟ್ರಪ್ರಶಸ್ತಿ_ವಿಜೇತ_ಕಲಾವಿದೆ_ಪದ್ಮಾಕುಮುಟಾರ_ಸಹೋದರ.
#ಹೆಗ್ಗೋಡಿನ_ಕೆ_ವಿ_ಸುಬ್ಬಣ್ಣ_ಪದ್ಮಾಕುಮುಟಾರನ್ನು_ಸೂಚಿಸಿದವರು.
#ಸಮಾಜವಾದಿ_ರಾಮಮನೋಹರ_ಲೋಹಿಯ_ಜಾರ್ಜ್_ಪರ್ನಾಂಡೀಸ್
#ಶಾಂತವೇರಿ_ಗೋಪಾಲಗೌಡರ_ಒಡನಾಡಿಗಳಾದ_ಎಸ್_ಎಸ್_ಕುಮುಟಾರ_ಪುತ್ರ.
#ಬೆಂಗಳೂರು_ವಿದಾನಸೌದದ_ಕರ್ನಾಟಕ_ಲೆಜಿಸ್ಲೇಟೀವ್_ಅಸೆಂಬಲಿ_ಅಂಡರ್_ಸೆಕ್ರೆಟರಿ.
#ಚೋಮನದುಡಿ_ಸಿನಿಮಾ_ನೋಡಲು_ನಮ್ಮ_ತಂದೆ_ನಮ್ಮ_ಊರಿನ_ಕ್ರಿಸ್ತಿನಾಬಾಯಿ_ಅವರ_ಎತ್ತಿನಗಾಡಿಯಲ್ಲಿ_ರಿಪ್ಪನ್_ಪೇಟೆ
#ಚಿತ್ರಮಂದಿರಕ್ಕೆ_ಕರೆದೊಯ್ದಿದ್ದರು
ಸುಬ್ರಮಣ್ಯ ಕುಮಟಾ ಸಾಗರದ ಮುನ್ಸಿಪಲ್ ಹೈಸ್ಕೂಲಿನಲ್ಲಿ ನನ್ನ ಕ್ಲಾಸ್ ಮೇಟ್ ಈಗ ಬೆಂಗಳೂರಿನ ವಿದಾನ ಸೌದ ಸಚಿವಾಲಯದಲ್ಲಿ ಅಂಡರ್ ಸೆಕ್ರೆಟರಿ ಆಗಿದ್ದಾರೆ.
ಇವರ ತಂದೆ ರಾಷ್ಟ್ರ ರಾಜಕಾರಣದ ಅತಿರಥ ಮಹಾರಥರಾದ ರಾಮ ಮನೋಹರ ಲೋಹಿಯಾ, ಜಾರ್ಜ್ ಫರ್ನಾಂಡೀಸ್, ಶಾಂತವೇರಿ ಗೋಪಾಲಗೌಡರ ಒಡನಾಡಿಗಳು.
ಕಾಗೋಡು ರೈತ ಹೋರಾಟದಲ್ಲಿ ಇವರ ಪಾತ್ರ ದೊಡ್ಡದು, ಜಯಪ್ರಕಾಶ್ ನಾರಾಯಣ್, ಮದುಲಿಮೆ ಮುಂತಾದ ಸಮಾಜವಾದಿ ರಾಷ್ಟ್ರ ನಾಯಕರ ಭಾಷಣ ಆ ಕಾಲದಲ್ಲಿ ಸೊಗಸಾಗಿ ಕನ್ನಡಕ್ಕೆ ಅನುವಾದಿಸುತ್ತಿದ್ದವರು ಇವರ ಪ್ರಯತ್ನಗಳಿಂದಲೇ ಸಾಗರದಿಂದ ಮೊದಲ ಚುನಾವಣೆಯಲ್ಲಿ ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಪಕ್ಷದಿಂದ ಶಾಸಕರಾಗಿ ಆಯ್ಕೆ ಆಗುತ್ತಾರೆ.
ಇವರ ಪುತ್ರಿ ಪದ್ಮಾ ಕುಮುಟಾ ಶಿವರಾಮ ಕಾರಂತರ ಕಾದಂಬರಿ #ಚೋಮನದುಡಿ ಬಿ.ವಿ.ಕಾರಂತರು ಸಿನಿಮಾ ಮಾಡಿದಾಗ ಅದರಲ್ಲಿ ಅವರ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಗೆ ಬಾಜನರಾಗುತ್ತಾರೆ.
ಇವತ್ತು ಬೆಂಗಳೂರಿಂದ ಸಾಗರಕ್ಕೆ ಸುಬ್ರಮಣ್ಯ ಕುಮುಟಾ ಮತ್ತು ಅವರ ಸಹೋದರಿ ಮಮತಾ ಕುಮುಟಾ ಪ್ರಯಾಣಿಸುವಾಗ ನನ್ನ ಕಛೇರಿಗೆ ಬಂದಿದ್ದರು ಇವರ ಇನ್ನೊಬ್ಬ ಸಹೋದರಿ ಸಾಗರದ ಪುರಸಭೆಯ ಮಾಜಿ ಸದಸ್ಯೆ ವಂದನಾ ಕುಮುಟಾರ ಪುತ್ರಿ ವಿವಾಹ ಕಾರ್ಯಕ್ರಮ ನಾಳೆ ಇದೆಯಂತೆ.
2001 ರಲ್ಲಿ ಇವರು ನಾನು ಮತ್ತು ಬಿ.ಆರ್ ಜಯಂತ್ ಜನತಾ ರಂಗ ಹುಟ್ಟು ಹಾಕಿದಾಗ ನಮ್ಮ ಪಕ್ಷದ ಅಭ್ಯರ್ಥಿ ಆಗಿದ್ದರು ಇವರ ಚುನಾವಣಾ ಪ್ರಚಾರರಕ್ಕೆ ಪದ್ಮಾ ಕುಮುಟಾ ಬಂದಿದ್ದರು ನಾವೆಲ್ಲ ಒಂದಾಗಿ ಇವರ ಪರವಾಗಿ ಪ್ರಚಾರ ಮಾಡಿದ ನೆನಪುಗಳು.
1975ರಲ್ಲಿ ಚೋಮನ ದುಡಿ ಸಿನಿಮಾ ರಿಲೀಸ್ ಆದಾಗ ನಮ್ಮ ಆನಂದಪುರಂ ಸಮೀಪದ ರಿಪ್ಪನ್ ಪೇಟೆಯ ಚಿತ್ರ ಮಂದಿರದ ಪ್ರದಶ೯ನಕ್ಕೆ ನಮ್ಮ ತಂದೆ ನಮ್ಮನ್ನೆಲ್ಲ ನಮ್ಮ ಊರಿನ ಕ್ರಿಸ್ತಿನಾ ಬಾಯಮ್ಮರ ಎತ್ತಿನಗಾಡಿಯಲ್ಲಿ ಕರೆದೊಯ್ದಿದ್ದರು.
ನಮ್ಮ ತಂದೆ, ತಾಯಿ ಮತ್ತು ಕ್ರಿಸ್ತೀನ್ ಬಾಯಮ್ಮ ಶಿವರಾಂ ಕಾರಂತರ ಚೋಮನ ದುಡಿ ಕಾದಂಬರಿ ಓದಿದವರು ಸಿನಿಮಾ ನೋಡಿ ಎತ್ತಿನಗಾಡಿಯಲ್ಲಿ ವಾಪಾಸು ಬರುವಾಗ ಆದರೆಲ್ಲ ಶಿವರಾಂ ಕಾರಂತರ ಚೋಮನ ದುಡಿ ಕಾದಂಬರಿ ಬಿ.ವಿ ಕಾರಂತರ ಸಿನಿಮಾ ಆದ ಬಗ್ಗೆ ಮತ್ತು ನಮ್ಮ ಸಾಗರದ ಪದ್ಮಾ ಕುಮುಟಾ ಅಭಿನಯದ ಬಗ್ಗೆಯೇ ಮಾತಾಡುತ್ತಿದ್ದರು.
ಆ ಸಿನಿಮಾ ನೋಡಲು ಎತ್ತಿನಗಾಡಿಯಲ್ಲಿ ರಿಪ್ಪನ್ ಪೇಟೆಗೆ ಇಡೀ ನಮ್ಮ ಕುಟುಂಬ ಹೋದದ್ದು ಒಂದು ಅವಿಸ್ಮರಣೀಯ ಅನುಭವ.
Comments
Post a Comment