#ಈ ವಷ೯ದ ಬೇಸಿಗೆ.
(20-ಮೇ-2020).
1973 ಮತ್ತು 1974ರಲ್ಲಿ ಆನಂದ ಪುರದ ಚಂಪಕ ಸರಸು ಎಂದು ಕರೆಯುವ ಕೆಳದಿ ಅರಸ ರಾಜಾ ವೆಂಕಟಪ್ಪ ನಾಯಕರ ಆನಂದಪುರಂನ ರಾಣಿ ಚಂಪಕಳ ಸ್ಮರಣಾತ೯ವಾಗಿ ನಿಮಿ೯ಸಿದ ಸುಂದರ ಕೊಳ ಕೂಡ ಈ ವಷ೯ದoತೆ ಬತ್ತಿತ್ತು.
ಆ ವಷ೯ ಬಿದಿರಕ್ಕಿ ಆಗಿತ್ತು, ಎಲ್ಲಾ ಕೆರೆಗಳು ಬತ್ತಿ ಹೋಗಿತ್ತು, ತೆರೆದ ಬಾವಿಗಳಲ್ಲಿ ನೀರು ಇರಲಿಲ್ಲ, ಬೆಳಗಿನ ಜಾವ ಮೊದಲು ಹೊದವರಿಗೆ ನಾಕಾರು ಕೊಡ ನೀರು ಸಿಗುತ್ತಿತ್ತು ಅದಕ್ಕೂ ಹೊಡೆದಾಟ ಜಗಳ.
45 ವಷ೯ದ ನಂತರ ಅದೇ ಪರಿಸ್ಥಿತಿ ಪುನಾರಾವತ೯ನೆ ಆಗಿದೆ, ಆಗ ಈಗಿನಷ್ಟು ಕಾಡು ನಾಶ ಆಗಿರಲಿಲ್ಲ, ಪ್ಲಾಸ್ಟಿಕ್ ಈ ಪ್ರಮಾಣದ ಬಳಸಿ ಬಿಸಾಡುವ ಕಾಲ ಆಗಿರಲಿಲ್ಲ, ವಾಹನಗಳು ಈ ಪ್ರಮಾಣದಲ್ಲಿ ರಸ್ತೆಯಲ್ಲಿ ಇರಲಿಲ್ಲ, ಕಾಬ೯ನ್ ಎಮಿಷನ್ ಇರಲಿಲ್ಲ, ಹಸಿರು ಮನೆ ಪರಿಣಾಮ ಇರಲಿಲ್ಲ, ಓಜೋನ್ ಕವಚ ಶಿಥಿಲ ಆಗಿರಲಿಲ್ಲ.
ಪ್ರಕೃತಿಯಲ್ಲಿ ಮನುಷ್ಯನ ಅಂದಾಜಿಗೂ ಮೀರಿದ ಯಾವುದೋ ಒಂದು ಶಕ್ತಿ 30 ರಿಂದ 50 ವಷ೯ಕೊಮ್ಮೆ ಭೂಮಿಯ ತಾಪಮಾನ ಹೆಚ್ಚು ಮಾಡಿ, ಅಂತರ್ ಜಲ ಸಿಗದಂತೆ ಮಾಡಿ ನಂತರ ಸುಮಾರು 30 ರಿಂದ 50 ವಷ೯ ಮಳೆ, ಬೆಳೆ, ಜಲಪೂರಣ ಮಾಡುವ ಒಂದು ವಿಸ್ಮಯ ಚಕ್ರ ಅಧ್ಯಯನಯೋಗ್ಯವಾಗಿದೆ.
Comments
Post a Comment