#ಇದು ಶಿವಮೊಗ್ಗದ 1961ರ ರಿಯಲ್ ಎಸ್ಟೇಟ್ ಕಥೆ.
ಇವರು ಶ್ರೀನಿವಾಸ್ ರಾವ್ ವಯಸ್ಸು 74 ವಷ೯ ಇವರಿಗೆ ಕಣ್ಣಿನ ತೊಂದರೆ ಹುಟ್ಟಿನಿಂದ ಇದೆ, ಇವರ ತಾಯಿ ಇದ್ದಾರೆ 96 ವಷ೯ ಅವರ ಹೆಸರು ಶ್ರೀಮತಿ ಅನ್ನಪೂಣ೯ ಅವರ ಪತಿ ದಿವ೦ಗತ ಶ್ರೀ ಅಚ್ಚುತ ರಾವ್ ಬ್ರಿಟಿಷ್ ಭಾರತೀಯ ಸೈನ್ಯದಲ್ಲಿ ವೆಟರ್ನರಿ ಡಾಕ್ಟರ್ ಆಗಿದ್ದರು, ಸೈನ್ಯದ ಕುದುರೆಗಳ ಆರೈಕೆಗೆ ಇವರು ಅನಿವಾಯ೯.1944ರಲ್ಲಿ ಕಿವಿ ಸಮಸ್ಯೆಯಿ೦ದ ನಿವೃತ್ತರಾದರು, ಪಾಕಿಸ್ತಾನದ ಪೇಶಾವರದಲ್ಲಿ ಬಹಳ ಕಾಲ ಇದ್ದರು.
ಆಚ್ಚುತ್ ರಾವ್ ರವರ ತಂದೆ ಶ್ರೀ ಸೀತಾರಾಮಯ್ಯ ಆಗಿನ ಕಾಲದಲ್ಲಿ ಶಿವಮೊಗ್ಗದ ಖ್ಯಾತ ವಕೀಲರು ಅವರಿಗೆ ಈಗಿನ ನಂಜಪ್ಪ ಆಸ್ಪತ್ರೆ ಎದುರು ಮೂರುವರೆ ಎಕರೆ ವಿಸ್ತಿಣ೯ದ ಮಾವಿನ ತೋಪು ಅದರಲ್ಲಿ ದೊಡ್ಡ ಬಂಗಲೆ ಇತ್ತು.
1960ರಲ್ಲಿ ಈಜಾಗವನ್ನ ನಿವೇಶನವಾಗಿ ಪರಿವತಿ೯ಸಿ 30 X 90 ಅಡಿ ನಿವೇಶನ ಮಾಡಿದರು ಅದೇ ಇವತ್ತಿನ ಅಚ್ಚುತ ರಾವ್ ಲೇ ಔಟ್ ಆಗ ಮಾರಟ ಮಾಡಿದ ನಿವೇಶನದ ಬೆಲೆ 300 ರೂಪಾಯಿ !.
ಅಚ್ಚುತ ರಾವ್ ರಿಗೆ ಐದು ಗಂಡು, ನಾಲ್ಕು ಹೆಣ್ಣು ಮಕ್ಕಳು ಮಕ್ಕಳಿಗೆ ಒಂದೇ ಒಂದು ಸೈಟ್ ಕೊಡದೆ ಮಾರಾಟ ಮಾಡಿದ್ದರು, ಹಣ ಬಂಗಾರ ಸೈಟ್ ಗಿಂತ ಉತ್ತಮ ಎಂಬುದು ಆ ಕಾಲದ ನಂಬಿಕೆ ಆಗಿತ್ತು.
ನಂತರ ಕಾಲಾನಂತರ ಈ ಶ್ರೀನಿವಾಸ ರಾವ್ ಅಡಿಕೆ ಮಂಡಿ ಗುಮಸ್ತರಾಗಿ ಕೆಲಸ ಮಾಡಿದರು ಅವರ ಸಹೋದರರು ಉತ್ತಮ ವ್ಯಾಸಂಗದಿಂದ ದೊಡ್ಡ ಹುದ್ದೆ ಹೊಂದಿದರು, ಶ್ರೀನಿವಾಸ್ ರಾವ್ರರ ಹುಟ್ಟಿನಿಂದ ಬಂದ ಕಣ್ಣಿನ ಸಮಸ್ಯೆಯಿಂದ ಹೆಚ್ಚು ಕಾಲ ಇವರಿಗೆ ಅಡಿಕೆ ಮಂಡಿ ಮಾಲಿಕರು ಕೆಲಸ ಕೊಡಲಿಲ್ಲ ಆಗ ಆಚ್ಚುತರಾವ್ ಶ್ರೀಮತಿಯವರಿಗೆ ಬರುತ್ತಿದ್ದ ಪಿಂಚಣಿ ಅತ್ಯಲ್ಪ ಆದರೂ ಅವರೂ ಶ್ರೀಮ೦ತ ಮಕ್ಕಳ ಜೊತೆ ಬಾಳದೆ ಕಣ್ಣಿನ ಸಮಸ್ಯೆಯ ಬಡ ಶ್ರೀನಿವಾಸ ರಾವ್ ರೊಡನೆ ಬದುಕಿದ್ದಾರೆ.
ಈ ಶ್ರೀನಿವಾಸ್ ರಾವ್ರರ ಗೆಳೆತನ ಅಕಸ್ಮಿಕವಾಗಿ 2006ರಿಂದ ನನಗಾಯಿತು ಇವರ ಕಣ್ಣಿನ ಆಪರೇಶನ್ ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ನಡೆದಾಗ ಸ್ವತಃ ನಾನು ಇದ್ದೇ.
ಇವತ್ತು ಬೆಳಿಗ್ಗೆ ನನ್ನ ಬೇಟಿ ಮಾಡಲು ಬಂದಿದ್ದರು, ನನಗೆ ಇವರ ಆಗಮನ ಅತ್ಯಂತ ಸಂತೋಷ ತಂತು, ಇವರಿಗೆ ನಮ್ಮ ಕುಟುಂಬದಿಂದ ಆತ್ಮಿಯ ಸ್ವಾಗತ ಸನ್ಮಾನ ನೀಡಿ ಇವರಿಂದ ಆಶ್ರೀವಾದ ಪಡೆದೆವು.
ಇವತ್ತು ಶಿವಮೊಗ್ಗ ಸ್ಮಾಟ್೯ ಸಿಟಿ ಆಗುತ್ತಿದೆ ರಿಯಲ್ ಎಸ್ಟೇಟ್ ದಂದೆ ಬಹುಕೋಟಿಗೆ ಹೋಗಿದೆ ಆದರೆ ಮುಂದಿನ 50 ವಷ೯ದಲ್ಲಿ ಅದರ ಫಲಾನುಭವಿಗಳು ಏನಾಗಬಹುದು? ನಮ್ಮೆದರು ಅಚ್ಚುತ್ರಾವ್ ಉದಾಹರಣೆ ಇದೆ.
Comments
Post a Comment