Blog number 1496. ಮಾಜಿ ಮಂತ್ರಿಗಳಾದ ಹರತಾಳು ಹಾಲಪ್ಪ ನನ್ನ ಕಛೇರಿಯಲ್ಲಿ 2018ರ ಚುನಾವಣಾ ಪ್ರಚಾರಕ್ಕೆ ಬಂದಿದ್ದರು (6-ಮೇ -2018)
# ಮಾಜಿ ಮಂತ್ರಿ ಹರತಾಳು ಹಾಲಪ್ಪ#
ಈಗಷ್ಟೆ ಹರತಾಳು ಹಾಲಪ್ಪನವರು ಮಾಗ೯ ಮಧ್ಯ ಮತ ಯಾಚನೆಗೆ ನನ್ನ ಕಚೇರಿಗೆ ಬಂದಿದ್ದರು ಅವರ ಜೊತೆ ವಿನಾಯಕ, ತ. ಮ.ನರಸಿಂಹ, ರಿಪ್ಪನ್ ಪೇಟೆ ಗ್ರಾ.ಪಂ ಉಪಾದ್ಯಕ್ಷರಾಗಿದ್ದ ರಾಘವೇ೦ದ್ರ, ಬಜರಂಗದಳದ ದೇವರಾಜ್, ಶಿವಮೊಗ್ಗದ ಕೆಂಚಪ್ಪನವರು, ಆಚಾಪುರ ವ್ಯವಸಾಯ ಸಂಘದ ಅಧ್ಯಕ್ಷರಾದ ಖ್ಯೆರಾ ರಾಜು ಬಂದಿದ್ದರು.
ಚುನಾವಣೆ ಹೇಗಿದೆ? ಎನ್ನುವ ಪ್ರಶ್ನೆಗೆ ನಿಮ್ಮ ಬೆಂಬಲ ಸಹಕಾರ ಬೇಕು ಅಂದರು, ಮೋದಿಯವರ ಶಿವಮೊಗ್ಗ ಬೇಟಿಯ ಸಂದಭ೯ದ ಅವರ ಬಾಷಣದ ಸಂದಭ೯ ಜಿಲ್ಲೆಯ ಪ್ರತಿ ವಿದಾನ ಸಭಾ ಕ್ಷೇತ್ರದ ಅಭ್ಯಥಿ೯ಗಳ ಪರಿಚಯ ಮತ್ತು ಅವರ ಬಗ್ಗೆ ಮತ ಯಾಚನೆ ಮಾಡಬೇಕಿತ್ತು ಮತ್ತು ಜಿಲ್ಲೆಯು ರೈತ ಮತ್ತು ದಲಿತ ಚಳವಳಿ ರಾಜ್ಯಕ್ಕೆ ನೀಡಿದ ಬಗ್ಗೆ ಅವರಿಂದ ಮಾತು ಬರಬೇಕಿತ್ತು ಅಂದೆ, ಅವರು ಹೇಳಿದ್ದು ಈ ಎಲ್ಲಾ ಮಾಹಿತಿ ಪ್ರದಾನ ಮಂತ್ರಿ ಜಿಲ್ಲೆಯಿಂದ ಪಕ್ಷದ ಕಾಯ೯ಕತ೯ರಿಂದ ಪಡೆದದ್ದಲ್ಲ ಅವರದೇ ಆದ ನೆಟ್ವಕ೯ನಿಂದ ಪಡೆದು ಮಾತಾಡುತ್ತಾರೆ ಅಂದರು.
ಸಾಗರ ವಿದಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಬೆಂಬಲ ಕೋರಿದ ಅವರಿಗೆ ಶುಭ ಹಾರೈಸಿದೆ.
Comments
Post a Comment