https://youtu.be/t4NW_Q9RvNE
#ಸಾಗರದ_ಜನ್ನತ್_ಗಲ್ಲಿಯ_ಅಬ್ಬಾಸ್_ಸಾಬ್.
#ನಮ್ಮ_ಪ್ರಾಂತ್ಯದ_ಸೂಪರ್_ಕುಕ್
#ಟೇಸ್ಟಿಂಗ್_ಪೌಡರ್_ಕೃತಕ_ಬಣ್ಣ_ಬಳಸದ_ಪಕಾತಿ
#ಅತಿ_ಕಡಿಮೆ_ಸಂಭಾವನೆ_ಪಡೆದು_ಅತ್ಯಂತ_ರುಚಿಕರ_ಅಡುಗೆ_ಮಾಡುವವರು
#ನನ್ನ_ಇವರ_ದೋಸ್ತಿ_35_ವರ್ಷದ್ದು
#ನಮ್ಮ_ಕಲ್ಯಾಣಮಂಟಪದಲ್ಲಿ_ಈ_ವರ್ಷ_ಎರೆಡು_ಮದುವೆಗೆ_ಇವರದ್ದೇ_ಅಡುಗೆ.
ಸಾಗರದ ಜನ್ನತ್ ಗಲ್ಲಿ ಅಬ್ಬಾಸ್ ಅಡುಗೆ ಅಂದರೆ ಶಿವಮೊಗ್ಗ ಜಿಲ್ಲೆಯ ಮಾಂಸಹಾರಿ ಪ್ರಿಯರ ಕಿವಿ ಮತ್ತು ಬಾಯಿ ಜಾಗೃತವಾಗುತ್ತದೆ, ಇವರ ಅಡುಗೆ ಹಸ್ತ ಗುಣ ಅಂತಹದ್ದು.
ಇವರು ಮಾಡುವ ಬಿರಿಯಾನಿ, ಗೀರೈಸ್, ಕಬಾಬ್, ಚಿಲ್ಲಿ,,ಡ್ರೈ , ಪಿಶ್ ಪ್ರೈಗಳು ಸಂಪ್ರದಾಯಿಕ ಶೈಲಿಯ ರುಚಿಕರ ಅಡುಗೆ.
1996 ರಲ್ಲಿ ಸನ್ಮಾನ್ಯ ಬಂಗಾರಪ್ಪರಿಗೆ ನಾವು ನೀಡಿದ ಔತಣ ಕೂಟದ ಅಡುಗೆ ತಯಾರಿಸಿದ್ದು ಅಬ್ಬಾಸ್ ಸಾಹೇಬರೆ?....ಬಂಗಾರಪ್ಪರಿಗೆ ಊಟ ಸಂತೃಪ್ತಿ ತಂದಿತ್ತು.
ಇಂತಹ ಸಂದರ್ಭದಲ್ಲಿ ಅಡುಗೆ ಮಾಡಿದವರನ್ನು ಕರೆದು ಪ್ರಶಂಸೆಯ ಮಾತಾಡಿ ಭಕ್ಷಿಸು ನೀಡುವ ದೊಡ್ಡ ಗುಣ ಬ೦ಗಾರಪ್ಪರಲ್ಲಿ ಇತ್ತು.
ಈಗಿನ ಆಧುನಿಕ ಅಡುಗೆಗೂ ಅಬ್ಬಾಸ್ ಸಾಹೇಬರ ಸಂಪ್ರದಾಯಿಕ ಅಡುಗೆಗೂ ಅಜಗಜಾಂತರವಿದೆ, ಅಬ್ಬಾಸ್ ಸಾಹೇಬರ ಈಗಿನ ಕಾಲದ ಟೇಸ್ಟಿಂಗ್ ಪೌಡರು ಅಜಿನೋಮೋಟೊ ಇತ್ಯಾದಿ ಹಾನಿಕಾರಕ ಕೆಮಿಕಲ್ ಬಳಸದೆ ಸಂಪ್ರದಾಯಿಕ ಶೈಲಿಯ ಅಡುಗೆ ಕಲೆಯವರು.
ನಿನ್ನೆ ನಮ್ಮ ಕಲ್ಯಾಣ ಮಂಟಪದಲ್ಲಿ ಅಬ್ಬಾಸ್ ಸಾಹೇಬರು 1200 ಜನರಿಗೆ ವಲೀಮಾ (ರಿಸೆಪ್ಷನ್) ಅಡುಗೆ ಮಾಡಿದ್ದರು, ಗೀ ರೈಸ್ - ಮಟನ್ ಕುಮಾ೯ - ಚಿಕನ್ ಚಿಲ್ಲಿ - ದಾಲ್-ಖೀರ್ ಮಾಡಿದ್ದಕ್ಕೆ ಪಡೆದ ಸಂಭಾವನೆ ಕೇವಲ ಆರು ಸಾವಿರ ಮಾತ್ರ!! ಇಷ್ಟು ಕಡಿಮೆ? ಯಾಕೆ ಎಂದರೆ ಅಬ್ಬಾಸ್ ಸಾಹೇಬರು ಹೇಳುವುದು ದುಡ್ಡೇ ಸರ್ವಸ್ವ ಅಲ್ಲ ಅನ್ನುತ್ತಾರೆ.
ಅಬ್ಬಾಸ್ ಸಾಹೇಬರ ತಂದೆ ಕುಂದಾಪುರದ ಕಂಡ್ಲೂರಿನವರು ಅಲ್ಲಿಂದ ಸಾಗರಕ್ಕೆ ಬಂದವರು, ಇವರ ಅಡುಗೆ ರುಚಿ ನೋಡಿದ ಸೆಲಬ್ರಿಟಿಗಳು ನೂರಾರು ಜನರು.
ಅಬ್ಬಾಸ್ ಸಾಹೇಬರ ಸಂಪರ್ಕ ಸಂಖ್ಯೆ 99015 60802.
Comments
Post a Comment