#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನOಬರ್_31
#ದಿನಾ೦ಕ_07_ಮೇ_2o20
#ಮೈ_ಮರೆತೀರಾ_ಜೋಕೆ
#ಇವತ್ತಿನ_ಕೊರಾನಾ_ಅOಕಿಅOಶ_ನೋಡಿ
*ಇಡೀ ವಿಶ್ವದಲ್ಲಿ ಇವತ್ತಿಗೆ ಸೋ೦ಕು ಹರಡಿದ ಸಂಖ್ಯೆ 36 ಲಕ್ಷ 79 ಸಾವಿರದ 544.
* ಇದರಿಂದ ಗುಣಮುಖರಾದವರ ಸಂಖ್ಯೆ 12 ಲಕ್ಷದ 5 ಸಾವಿರದ595.
*ಕೊರಾನಾ ವೈರಸ್ ನಿಂದ ಮೃತರಾದವರ ಸಂಖ್ಯೆ ಇವತ್ತಿಗೆ 2 ಲಕ್ಷದ 57 ಸಾವಿರದ 793.
#ಭಾರತದಲ್ಲಿ
*53 ಸಾವಿರ ಜನರಿಗೆ ಸೋ೦ಕು ಉ೦ಟಾಗಿದೆ.
*15 ಸಾವಿರದ 266 ಜನ ಗುಣಮುಖರಾಗಿದ್ದಾರೆ.
*1783 ಜನ ಈ ವೈರಸ್ ನಿಂದ ಮೃತರಾಗಿದ್ದಾರೆ.
#ಒಂದು_ದಿನದಲ್ಲಿ
24 ಗಂಟೆ ಅವದಿಯಲ್ಲಿ ಈ ಸೋ೦ಕು 4885 ಜನರಿಗೆ ಹರಡಿದೆ.
24 ಗಂಟೆ ಅವದಿಯಲ್ಲಿ ಭಾರತದಲ್ಲಿ 892 ಜನ ಕೊರಾನದಿಂದ ಮೃತರಾಗಿದ್ದಾರೆ.
#ಕನಾ೯ಟಕದಲ್ಲಿ
* ಇವತ್ತಿನವರೆಗೆ ಸೋ೦ಕು 701 ಜನರಿಗೆ ಹರಡಿದೆ.
* ಗುಣ ಹೊಂದಿದವರು 363
*ಮರಣ ಹೊಂದಿದವರು 30
ಈ ಮೇಲಿನ ಅಂಕಿ ಅಂಶ ನೋಡಿದಾಗ ಕನಾ೯ಟಕದವರಿಗೆ ಕೊರಾನ ವೈರಸ್ ನ ಬಗ್ಗೆ ಅಂತಹ ಭಯ ಉoಟಾಗುವುದಿಲ್ಲ ಆದರೆ ಇಡೀ ದೇಶದಲ್ಲಿ ಇದರ ಹರಡುವಿಕೆ ಪ್ರಮಾಣ ನೋಡಿದರೆ ಭಾರತದಲ್ಲಿ ಕೊರಾನ ವೈರಸ್ ನಾಗಾಲೋಟ ತಲುಪುವ ಭಯ ಉOಟಾಗದೇ ಇರದು.
ಇರಾನ್ ದೇಶದಲ್ಲಿ ನಿಯOತ್ರಣಗಳನ್ನ ಸಡಿಲಿಸಿದ್ದರಿಂದ ಸೋ೦ಕಿತರ ಸಂಖ್ಯೆ ಹೆಚ್ಚಾಗಿದೆ ಎಂಬ ವರದಿ ಇದೆ.
ಭಾರತದಲ್ಲಿ 3 ನೇ ಹಂತದ ಲಾಕ್ ಡೌನ್ ಜಾರಿ ಇದೆ, 2ನೇ ಹಂತದ ಅನೇಕ ನಿಯಂತ್ರಣ ಸಡಿಲಿಸಲಾಗಿದೆ.
ಬೇರೆ ದೇಶದಲ್ಲಿರುವವರನ್ನ ಭಾರತಕ್ಕೆ ಕರೆತರುವ ಕಾಯ೯ಕ್ಕೆ ಅವಕಾಶ ನೀಡಲಾಗಿದೆ.
ದೇಶದ ಬೇರೆ ಬೇರೆ ರಾಜ್ಯದಲ್ಲಿ ಉದ್ಯೋಗಕ್ಕೆ ಹೋದವರಿಗೆ ಮರಳಿ ಅವರ ಊರು ತಲುಪಲು ಬಸ್ ಮತ್ತು ರೈಲು ಸಂಚಾರ ಪ್ರಾರಂಬಿಸಲಾಗಿದೆ.
ಇದೆಲ್ಲದರ ಪರಿಣಾಮ ಏನಾಗಲಿದೆ ಗೊತ್ತಿಲ್ಲ.
ಎಲ್ಲಾ ದೃಷ್ಟಿಯಿ೦ದಲೂ ಈ ತಿಂಗಳು ಕೊರಾನ ವೈರಸ್ ನಿಯ೦ತ್ರಣ ಅಥವ ನಿಯOತ್ರಣ ತಪ್ಪುವ ನಿಣಾ೯ಯಕ ತಿಂಗಳಾಗಿದೆ.
Comments
Post a Comment