#ಬಾಲ್ಯದಲ್ಲಿ_ಊರ_ಸಮೀಪದಲ್ಲಿ_ರಾಶಿ_ರಾಶಿ_ಕವಳಿಹಣ್ಣು.
#ಈಗ_ಹತ್ತಾರು_ಕಿಮಿ_ದೂರದಲ್ಲಿ_ಹುಡುಕಬೇಕು.
#ಇವತ್ತು_ಗೆಳೆಯ_ಗೇರುಬೀಸ್_ಚೆನ್ನಪ್ಪ_ತಂದುಕೊಟ್ಟ_3_ಕಿಲೋ_ಕವಳಿಹಣ್ಣು
ಆಗೆಲ್ಲ ಬೇಸಿಗೆ ರಜೆಯಲ್ಲಿ ಕವಳಿ ಮಟ್ಟಿಯಲ್ಲಿ ಭರಪೂರ ಕಪ್ಪು ಬಣ್ಣದ ದ್ರಾಕ್ಷಿ ಹಣ್ಣಿನಂದದ ಕವಳಿ ಹಣ್ಣು, ತಿಂದು ತಿಂದು ಸಾಕಾದ ನಂತರ ಹೊಳೆ, ಹೊಂಡಗಳಲ್ಲಿ ಈಜು ಮನೆಗೆ ಬಂದರೆ ತರಹೇವಾರಿ ರುಚಿಯ ತಿಂದಷ್ಟು ಮಾವಿನ ಹಣ್ಣು, ಹಲಸಿನ ಹಣ್ಣು.
ಈಗ ನಮ್ಮ ಊರು ದೊಡ್ಡದಾಗಿದೆ ಕಾಡು ಹಿಂದೆ ಸರಿದಿದೆ ಆಗ ಊರಿನ ಪಕ್ಕದಲ್ಲಿ ಇರುತ್ತಿದ್ದ ಕವಳಿ ಪರಗಿ ಹಣ್ಣಿನ ಮಟ್ಟಿ ಈಗ ಇಲ್ಲ ಮತ್ತು ಈಗಿನ ಮೊಬೈಲ್ ಫೋನಿನ ಯುಗದಲ್ಲಿನ ಮಕ್ಕಳಿಗೆ ಅದು ಬೇಕಾಗಿಲ್ಲ ಆದರೆ ನನಗೆ ಇಂತಹದೆಲ್ಲ ಆಯಾ ಕಾಲಕ್ಕೆ ತಿನ್ನಲೇ ಬೇಕೆನ್ನುವ ಹುಕಿ ಬಂದಾಗ ತಡೆಯಲಾಗುವುದಿಲ್ಲ.
Comments
Post a Comment