Blog number 1547. ಸಾತಾಳ್ ಶರತ್ ನಾಗಪ್ಪ ಆನಂದಪುರಂ ಹೋಬಳಿಯ ಮುಂದಿನ ನಾಯಕತ್ವವಹಿಸುವ ಎಲ್ಲಾ ಅಹ೯ತೆ ಇರುವ ಇವರಿಗೆ ಇವರ ಪಕ್ಷ ಶಕ್ತಿ ನೀಡಬೇಕು.
#ಶರತ್_ನಾಗಪ್ಪ_ಸಾತಾಳ್_ವಿವಾಹ_ಆಹ್ವಾನ_ನೀಡಲು_ಬಂದಿದ್ದರು.
#ಹೊಸೂರು_ಗ್ರಾಮ_ಪಂಚಾಯತ್_ಅಧ್ಯಕ್ಷರು
#ಇವರ_ತಂದೆ_ಸಾತಾಳ್_ನಾಗಪ್ಪ_ನನ್ನ_ಗೆಳೆಯರು
#ನಮ್ಮ_ಆನಂದಪುರಂ_ಹೋಬಳಿಯ_ಮುಂದಿನ_ಭರವಸೆಯ_ನಾಯಕತ್ವದ_ಗುಣ_ಇವರಲ್ಲಿದೆ.
1985 ರಿಂದ ಇವರ ತಂದೆ ಚೆನ್ನಶೆಟ್ಟಿಕೊಪ್ಪದ ಸಾತಾಳ್ ನಾಗಪ್ಪ ರಾಜಕಾರಣದಲ್ಲಿ ನನ್ನ ಜೊತೆಗಾರರು 1989ರಲ್ಲಿ ನಮ್ಮ ಯಡೇಹಳ್ಳಿ ಮಂಡಲ್ ಪಂಚಾಯತ್ ಆದಾಗ ಇವರ ಈಗಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂರ್ಣ ಪ್ರದೇಶ ಯಡೇಹಳ್ಳಿ ಮಂಡಲ್ ಪಂಚಾಯತ್ ಗೆ ಸೇರಿತ್ತು.
ಆಗ ಕೋವಿ ನಾರಾಯಣಪ್ಪರನ್ನು ಪ್ರದಾನರ ಹುದ್ದೆಗೆ ಕೂರಿಸಲು ಮತ್ತು ನಂತರ ಈ ಸ್ಥಾನ ಅವರಿಗೆ ಉಳಿಸಲು ನಡೆದ ನಿರಂತರ ಸವಾಲುಗಳ ಸಂದರ್ಭದಲ್ಲಿ ಇವರ ತಂದೆ ಸಾತಾಳ್ ನಾಗಪ್ಪ ಈಗಿನ ಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಖಂಡರುಗಳಾದ ನಾರಿ ನಾರಾಯಣಪ್ಪ, ಹೆಬ್ಸೆನಾರಾಯಣಪ್ಪ,ಹುರುಳಿ ನಾರಾಯಣಪ್ಪ, ಕ೦ಚುಗುಣಿ ನಾರಾಯಣಪ್ಪ, ಹುಲಮಡಕೆ ಕೊಲ್ಲಪ್ಪ,ಐಗಿನ ಬೈಲು ಕೊಠಾರಿ ಬೀಮಪ್ಪ ಅವರ ಜೊತೆ ನನ್ನ ಜೊತೆಗಿದ್ದರು.
ಆಗ ನನ್ನ ಶ್ರೀ ಕೃಷ್ಣ ರೈಸ್ ಮಿಲ್ ಎಂಬ ಅಕ್ಕಿಗಿರಣಿಗೆ ಈ ಭಾಗದ ರೈತರೆಲ್ಲ ನನ್ನ ಗ್ರಾಹಕರಾದ್ದರಿಂದ ಇವರೆಲ್ಲರ ಪರಿಚಯ ನನ್ನಲ್ಲಿ ಹಸಿರಾಗಿದೆ.
1995ರಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾದಾಗ ಶರತ್ ಸಣ್ಣ ಮಗು, ನಂತರ ಇವರು ಸಿವಿಲ್ ಇಂಜಿನಿಯರ್ ಡಿಪ್ಲೋಮ ಓದಿ,ಎರೆಡು ವರ್ಷದ ಹಿಂದೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ದಿಸಿ ಗೆದ್ದು ಹೊಸೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದಾರೆ.
ಇವರ ತಂದೆ ಸಾತಾಳ್ ನಾಗಪ್ಪ ಸಾಗರದ ಗಣಪತಿ ಕೆರೆ ತಿರುವಿನಲ್ಲಿ ಬೈಕ್ ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದರಿಂದ ಈ ಕುಟುಂಬ ಎಲ್ಲಾ ರೀತಿಯ ಕಷ್ಟಗಳನ್ನು ಎದುರಿಸಿತ್ತು.
ಶರತ್ ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಂತರ ಅವರದ್ದೇ ಆದ ಶೈಲಿಯಲ್ಲಿ ಈ ಪಂಚಾಯಿತಿಗೊಂದು ಹೊಸ ರೂಪ ನೀಡುತ್ತಿರುವುದು ನೋಡುತ್ತಿದ್ದೇನೆ. ಅದರಲ್ಲೂ ಸರ್ಕಾರದ ಇವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಇಲಾಖೆ ಅಧಿಕಾರಿಗಳನ್ನು ಗ್ರಾಮ ಪಂಚಾಯತ್ ಕಛೇರಿಯಲ್ಲಿ ಆಹ್ವಾನಿಸಿ ಸಭೆ ನಡೆಸಿ ಸ್ಥಳಿಯ ಜನರ ಸಮಸ್ಯೆ ಬಗೆಹರಿಸುವ ಇವರ ಹೊಸ ಯೋಜನೆ ನನಗೆ ತುಂಬಾ ಇಷ್ಟವಾಯಿತು.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಈ ವಿಧಾನ ಅಳವಡಿಸಿಕೊಳ್ಳ ಬೇಕು, ಇದರಿಂದ ಗ್ರಾಮಗಳಿಗೆ ಮತ್ತು ಸರ್ಕಾರಕ್ಕೆ ಸಂವಹನ ಸಾಧ್ಯವಾಗಲಿದೆ,
ಬುದ್ದಿವಂತ,ವಿದ್ಯಾವಂತ ಶರತ್ ನಾಗಪ್ಪ ಅವರಿಗೆ ಇಡೀ ಆನಂದಪುರಂ ಹೋಬಳಿಯ ನಾಯಕತ್ವ ವಹಿಸುವ ಅರ್ಹತೆ ಇದೆ ಅದಕ್ಕೆ ಅವಶ್ಯವಿರುವ ಶಕ್ತಿ ಅವರ ಪಕ್ಷ ಅವರಿಗೆ ನೀಡಿದರೆ ಮುಂದಿನ ದಿನಗಳಲ್ಲಿ ಯೋಗ್ಯ ನಾಯಕ ಇವರಾಗಲಿದ್ದಾರೆ.
ಇವರ ವಿವಾಹ ಆಹ್ವಾನ ಪತ್ರಿಕೆ ಸ್ವೀಕರಿಸಿ ಅವರ ವೈವಾಹಿಕ ಜೀವನಕ್ಕೆ ಶುಭಹಾರೈಸಿದೆ.
Comments
Post a Comment