Blog number 1535. ರವಿ ಕೃಷ್ಣಾರೆಡ್ಡಿ 2018 ರಲ್ಲಿ ಕಡೂರಿನ ದತ್ತಾರ ಬಗ್ಗೆ ಬರೆದ ಚುನಾವಣಾ ಪಲಿತಾಂಶದ ವಿಶ್ಲೇಷಣೆ 2023ರ ಚುನಾವಣೆ ಸೋಲಿಗೆ ಕೂಡ ಅನ್ವಯಿಸಿದೆ.
#ಈ ಕೆಳಗಿನ 2018ರ ರವಿ ಕೃಷ್ಣ ರೆಡ್ಡಿ ಅವರ ಕಡೂರಿನ ವಿಧಾನಸಭಾ ಅಭ್ಯರ್ಥಿ ವ್ಯೆ.ಎಸ್.ವಿ.ದತ್ತಾರ ಸೋಲು 2023ರಲ್ಲೂ ಬದಲಾಗಲಿಲ್ಲ.
ನಮ್ಮ ದೇಶದ ಚುನಾವಣೆಗಳು ಒಂದು ಅಪಹಾಸ್ಯ ಎಂಬುದು ನಾವು ನೀವು ಹೇಳುವುದಕ್ಕಿ೦ತ ಒಮ್ಮೆ ಶಾಸಕರ ರಾಗಿ ಅತ್ಯುತ್ತಮ ಕೆಲಸ ಮಾಡಿ ಈ ಬಾರಿ ಸೋತ ದತ್ತಣ್ಣರ ವಿಶ್ಲೇಷಣೆಯನ್ನ, ಎಲ್ಲರೂ ಮತ್ತೆ ಮತ್ತೆ ಈ ಚುನಾವಣೆಗಳು ಜಾತಿ ಆದಾರದಲ್ಲಿ, ಹಣದ ಆದಾರದಲ್ಲಿ ನಡೆಯುತ್ತಾ ಹೋದರೆ ಮು೦ದೆ ಬಾರತ ಯಾವ ರೀತಿಯ ಪ್ರಜಾಪ್ರಭುತ್ವವಾಗಿ ಉಳಿದೀತು ಎಂದು ಚಿಂತನೆ ಮಾಡಬೇಕಾಗಿದೆ.
ಜಾತಿ-ಹಣ-ಹೆಂಡ-ಮಾಂಸಕ್ಕೆ ಓಟು ಮಾರಿಕೊಂಡವರು!
ಕಡೂರು ವಿಧಾನಸಭಾ ಕ್ಷೇತ್ರದಿಂದ ವೈ.ಎಸ್.ವಿ.ದತ್ತರ ಸೋಲಿಗೆ ನೆನ್ನೆಯಿಂದ ನಾಡಿನ ಬಹಳ ಜನ ನೋವಿನಿಂದ ಮಿಡಿದಿದ್ದಾರೆ. ಇಡೀ ರಾಜ್ಯದಲ್ಲಿ ಯಾವುದಾದರೂ ಒಬ್ಬ ಶಾಸಕ ಮೊನ್ನೆಯ ಚುನಾವಣೆಯಲ್ಲಿ ಓಟಿಗಾಗಿ ಜಾತಿ-ಹಣ-ಹೆಂಡ-ಮಾಂಸದ ರಾಜಕಾರಣ ಮಾಡಿಲ್ಲದೇ ಇದ್ದರೆ ಅದು ದತ್ತರು ಮಾತ್ರ. ಅಂತಹವರನ್ನು ಕಡೂರು ಸೋಲಿಸಿದೆ. ಅಭಿವೃದ್ದಿ ಕೆಲಸ ಮಾಡಿದ, ಶಾಸನ ಸಭೆಯಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದ, ಪಾದಯಾತ್ರೆ-ಸಾಹಿತ್ಯಿಕ-ಸಾಂಸ್ಕೃತಿಕ ಇತ್ಯಾದಿ ಕೆಲಸಗಳ ಮೂಲಕ ಜನರ ಚಿಂತನ ಮತ್ತು ಚೈತನ್ಯ ಹೆಚ್ಚಿಸಲು ಯತ್ನಿಸಿದ ವ್ಯಕ್ತಿಯ ಬದಲಿಗೆ ಹಣ-ಹೆಂಡ-ಮಾಂಸ-ಜಾತಿಗೆ ಕಡೂರು ಮಾರಾಟವಾಗಿದೆ.
(ಜೊತೆಗೆ ಆ ನೀಚ ಮತ್ತು ಭ್ರಷ್ಟ ಪ್ರತಿಸ್ಪರ್ಧಿ ಅಭ್ಯರ್ಥಿಗಳು ಮಾಡುವ ನೀಚ ಮತ್ತು ವಾಮಮಾರ್ಗಗಳನ್ನು ತಡೆಗಟ್ಟುವಲ್ಲಿ ದತ್ತರೂ ಸೋತಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ.)
ತಮ್ಮ ಸೋಲಿನ ಬಗ್ಗೆ ದತ್ತ ರವರು ಸಮಚಿತ್ತದಿಂದ ಆಡಿರುವ ಈ ಮಾತುಗಳನ್ನು ಕೇಳಿಸಿಕೊಳ್ಳಿ. ಹಂಚಿಕೊಳ್ಳಿ. ಒಂದಷ್ಟು ಜಾಗೃತಿಗೆ ಮತ್ತು ಬಹುಜನರ ಲಜ್ಜೆ-ಸಂಕೋಚ-ಪರಿವರ್ತನೆಗೆ ಕಾರಣವಾಗಲಿ. ಹಾಗೆಯೇ, ಈ ಬಾರಿಯ ಚುನಾವಣೆಯಲ್ಲಿ ಗೆದ್ದಿರುವ ಪ್ರತಿಯೊಬ್ಬ ಮಹಾನುಭಾವನೂ ಹೇಗೆ ಗೆದ್ದಿದ್ದಾನೆ ಎನ್ನುವ ಅರಿವು ಎಲ್ಲರಿಗಾಗಲಿ.
ನಮಸ್ಕಾರ,
ರವಿ ಕೃಷ್ಣಾರೆಡ್ಡಿ
16-05-2018.
Comments
Post a Comment