Skip to main content

Blog number 1491. ಕೊರಾನಾ ಲಾಕ್ ಡೌನ್ ಡೈರಿ 2020. ಲೆಟರ್ ನಂಬರ್ 30 (5 ಮೇ 2020)

#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನOಬರ್_30
#ದಿನಾ೦ಕ_5_ಮೇ_2o20

    #ನಲವತ್ತು_ದಿನ_ಇಡೀ_ದೇಶ_ಸಂಪೂಣ೯_ಪಾನನಿಶೇದ_ಆಚರಿಸಿದ್ದು_ಸಣ್ಣಸ೦ಗತಿ_ಅಲ್ಲ
  
  ಆನ್ ಲೈನ್ ಮಧ್ಯಮಾರಾಟದ ಬಗ್ಗೆ             ಯೋಚಿಸಲು ಇದು ಸಕಾಲ.


  ಮದ್ಯ Essential ಅಥವ Non Essential ಎನ್ನುವ ತೀಮಾ೯ನ, ಚಚೆ೯ ಏನೇ ಇರಲಿ ಆದರೆ ಇಡೀ ದೇಶದಲ್ಲಿ 40 ದಿನ ಸಂಪೂಣ೯ ಮದ್ಯ ಮರಾಟ ನಿರಾಕರಿಸಿದ್ದು ಅದರಂತ 40 ದಿನ ಮಧ್ಯ ಇಲ್ಲದೆ ಮದ್ಯಪಾನಿಗಳು ಸ್ವಯಂ ಪಾನ ನಿಯಂತ್ರಣ ಆಚರಿಸಿದ್ದು ಸಣ್ಣ ಸಂಗತಿ ಇಲ್ಲ.
  ಹಾಲು, ಔಷದಿ, ದಿನಸಿ, ಗ್ಯಾಸ್, ಮೀನು ಮಾ೦ಸ, ಕೋಳಿ ಮಾರಾಟಕ್ಕೆ ಅವಕಾಶ ನೀಡಿದ ಸಕಾ೯ರ ಮದ್ಯಪಾನ ಮಾರಾಟಕ್ಕೆ ಏಕೆ ಅವಕಾಶ ನೀಡಲಿಲ್ಲ ಎಂಬ ಚಚೆ೯ಗೆ ವಿರಾಮ ನೀಡುವ೦ತೆ 2 ಹಂತದ ಲಾಕ್ ಡೌನ್ ಕಳೆದ ಮೇಲೆ 3ನೇ ಹಂತದ ಲಾಕ್ ಡೌನ್ ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿತು.
   ಮಧ್ಯಮಾರಾಟದ ಮೊದಲ ದಿನ ಸಾಮಾಜಿಕ ಅಂತರ ಕಾಪಾಡುವುದರಲ್ಲಿ ಅನೇಕ ತಪ್ಪುಗಳು ನಡೆಯಿತು, 40 ದಿನ ಸಿಗದ ಮದ್ಯ ಖರೀದಿಸುವಲ್ಲಿ ನಾ ಮುಂದು ತಾ ಮುಂದು ಎಂದು ಅವಸರದಲ್ಲಿ ಕರೋನಾ ವೈರಸ್ ಸುಲಭವಾಗಿ ಹರಡುವ ವಾತಾವರಣ ಸೃಷ್ಟಿ ಆಗಿದ್ದು ವಿಪಯಾ೯ಸ.
   ಒಂದೇ ದಿನ ಇಡೀ ದೇಶದಲ್ಲಿ ಒಂದು ಸಾವಿರ ಕೋಟಿ ಮೌಲ್ಯದ ಮದ್ಯ ಮಾರಾಟ ಆಗಿದೆ ಎಂದರೆ ಅದು ಸಾಮಾನ್ಯ ವಿಚಾರವಲ್ಲ.
   ಜನಜOಗುಳಿ ಸೇರ ಬಾರದು ಇದರಿಂದ ಪರಸ್ಪರ ಅಂತರ ಕಾಪಾಡಲು ಸಾಧ್ಯವಿಲ್ಲ ಇಂತಹ ಸಂದಭ೯ದಲ್ಲಿ ಒಬ್ಬ ಕೊರಾನಾ ವೈರಸ್ ಪೀಡಿತ ಇದ್ದರೆ ನೂರಾರು ಜನರಿಗೆ ಅದು ಹರಡುತ್ತದೆಂದೆ ದೇವಸ್ಥಾನ, ಚಚ್೯ ಮತ್ತು ಮಸೀದಿಗಳಲ್ಲೂ ಪೂಜೆ ಪ್ರಾಥ೯ನೆ ನಿಲ್ಲಿಸಿದೆ ಆದರೆ ಮಧ್ಯಪಾನ ಮಾರಾಟ ಪ್ರಾರಂಬದ ಮೊದಲ ದಿನದ ಹಪಾಹಪಿ ಎಲ್ಲಾ ರೀತಿಯ ಮುಂಜಾಗುರುಕತೆಯನ್ನೆ ಬುಡಮೇಲು ಮಾಡಿತು.
  ಇದೇ ಸಂದಭ೯ದಲ್ಲಿ ಮದ್ಯಪಾನ ಮಾರಾಟ ಪ್ರಾರಂಭ ಮಾಡುವುದು ಬೇಡ ಹೇಗೂ 40 ದಿನ ಕುಡಿತ ಬಿಟ್ಟವರಿಗೆ ಇನ್ನು ಮುಂದೂ ಮಧ್ಯಪಾನ ಬಿಟ್ಟು ಬಿಡಲು ಸುಲಭ ಇದರಿ೦ದ ಅನೇಕ ಸಂಸಾರಗಳು ಸುಖಿ ಸಂಸಾರ ಆಗಲಿದೆ ಎಂಬ ಅನೇಕ ಸಂದೇಶ ಗಣ್ಯರು ನೀಡಿದರು.
  ಮಧ್ಯಮಾರಾಟ ಪ್ರಾರಂಬಿಸದಿದ್ದರೆ ಸಕಾ೯ರಕ್ಕೆ ಸಾವಿರಾರು ಕೋಟಿ ನಷ್ಟ ಎಂಬ ಆಥಿ೯ಕ ತಜ್ಞರ ಅಭಿಪ್ರಾಯ ನೀಡಿದರು.
  ಮುಖ್ಯಮಂತ್ರಿ ಯಡೂರಪ್ಪ ಹೆಂಡದಿಂದ ಸಕಾ೯ರ ನಡೆಸಬೇಕಾ? ಅಂತ ಅವರ ರಾಜಕೀಯ ವಿರೋದಿಗಳ ಹೇಳಿಕೆಗಳು ಮಧ್ಯಮಾರಾಟ ಪುನರ್ ಪ್ರಾರಂಭದ ಬಗ್ಗೆ  ಅನಿಶ್ಚಯತೆ ಉoಟಾಗಿತ್ತು.
  ಯಾವಾಗ ಕೇಂದ್ರ ಸಕಾ೯ರ ದೇಶದಾದ್ಯOತ ಕೆಂಪು ವಲಯ ಹೊರತು ಪಡಿಸಿ ಮಾರಾಟ ಮಾಡಲು ಅನುಮತಿ ನೀಡಿತೋ ಎಲ್ಲಾ ರಾಜ್ಯ ಸಕಾ೯ರಗಳು  (ಗುಜರಾತ್, ಬಿಹಾರ ಹೊರತು ಪಡಿಸಿ) ನಿರಾಳವಾಯಿತು ಮಧ್ಯಮಾರಾಟ ಪ್ರಾರಂಬಿಸಿತು.
  ಇದು ಮಧ್ಯ ಪಾನಿಗಳಿಗೆ ಸಂತೋಷ ಉOಟು ಮಾಡಿದೆ ಆದರೆ ಮಧ್ಯಪಾನಿಗಳು ಮೈಮರೆತು ಕೊರಾನ ವೈರಸ್ ನಿಯOತ್ರಣದ ಮುಂಜಾಗ್ರತೆ ಮರೆತರೆ ಅಪಾಯ ಎಂಬುದು ಮರೆಯಬಾರದು.
   ಆನ್ ಲೈನ್ ನಲ್ಲಿ ಔಷದಿ ಆಹಾರ ಮಾರಾಟಕ್ಕೆ ಅನುಮತಿ ನೀಡಿದಂತ ಮದ್ಯಪಾನ ಮಾರಾಟಕ್ಕೆ ಅನುಮತಿ ನೀಡುವ ಬಗ್ಗೆ ಕೂಡ ಯೋಚಿಸಬೇಕು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...