# ಸಾಗರದ ಜನತೆಗೆ ಕೋಯಾ ಸಾಹೇಬರು ಸದಾ ಕಾಲ ಚಿರಪರಿಚಿತರು.
20-ಮೇ-2018.
ಕೋಯಾ ಸಾಹೇಬರು ದೂರದ ಕೇರಳದಿಂದ ಬಂದು ದಾವಣಗೆರೆಯಲ್ಲಿ ನೆಲೆಸಿ ಅಲ್ಲೇ ಯಶಸ್ವಿ ಉದ್ದಿಮೆದಾರರಾಗಿ ಒಮ್ಮೆ ಮುಸ್ಲಿಂ ಲೀಗ್ ಪಕ್ಷದಿಂದ ವಿಧಾನ ಸಭೆಗೆ ಸ್ಪದಿ೯ಸಿದ್ದರು.
ನಂತರ ಸಾಗರ ಅವರ ಕಾಯ೯ ಕ್ಷೇತ್ರವಾಯಿತು, ಇಲ್ಲಿ ಉದು೯ ಶಾಲೆ ಪ್ರಾರಂಭಿಸಲು ಇವರು ಪ್ರೇರಣೆಯಾದರು, ಸಾಗರದ ರಾಜಕಾರಣದಲ್ಲಿ ಪ್ರಮುಕರಾಗಿ ಪುರಸಭೆಗೆ ಕೆಲವು ಬಾರಿ ಆಯ್ಕೆಯೂ ಆದರು.
ಮಲೆಯಾಳಿ ಸಮಾಜದ ಸಂಘಟನೆಯಲ್ಲಿ ಮುಖ್ಯ ಪಾತ್ರ ವಹಿಸಿದರು, ವ್ಯವಹಾರದ ಜೊತೆ ಸಮಾಜ ಸೇವೆಯಲ್ಲಿ ಸಾಗರದಲ್ಲಿ ಪ್ರಖ್ಯಾತರಾದ ಕೊಯಾ ಸಾಹೇಬರು ಸಾಗರ ಪಟ್ಟಣದ ಸಮೀಪ ರಬ್ಬರ್ ಪ್ಲಾಂಟೇಶನ್ ಮಾಡಿದ ಪ್ರಥಮ ವ್ಯಕ್ತಿ ಅನ್ನಿಸಿಕೊಂಡರು.
ಸದಾ ಚಟುವಟಿಕೆಯಿಂದ ಪಾದರಸದಂತೆ ಮಾತು ಕೃತಿಗಳಲ್ಲಿ ತೋರಿಸಿಕೊಳ್ಳುತ್ತಿದ್ದ ಕೋಯ ಸಾಹೇಬರು ಬಡವರ ಕಷ್ಟಕ್ಕೆ ಮೊದಲು ಬರುತ್ತಿದ್ದರು.
ಈಗ ಕೊಯಾ ಸಾಹೇಬರಿಲ್ಲ ಅವರ ನೆನಪು ಸದಾ ಇದೆ, ಸಾಗರದ ಜನತೆ ಇವರನ್ನ ಸದಾ ನೆನಪಿಸಿಕೊಳ್ಳುತ್ತದೆ.
Comments
Post a Comment