Blog number 1569. ಟಿಡಿಕೆ ಪಂಡಿತರ ನೆನಪು ಭಾಗ -3. ಸಾಗರದ ಒಂದು ಕಾಲದ ತ್ರಿಮೂರ್ತಿಗಳಾಗಿದ್ದ ಪಂಡಿತ್ - ಪುಟ್ಟಯ್ಯ - ಕುಮುಟಾ, ಪಂಡಿತರು ಸಾಗರದಲ್ಲಿ ಶ್ರೀಕಂಠದತ್ತ ಒಡೆಯರ್ ಗೆ ಸಾಷ್ಟಾಂಗ ನಮಸ್ಕಾರದ ಬಿಸಿ ಚರ್ಚೆ.
#ಮುಂದುವರಿದ_ಭಾಗ_3.
#ಟಿಡಿಕೆಪಂಡಿತ್_ಪುಟ್ಟಯ್ಯ_ಸತ್ಯಣ್ಣ_ತ್ರಿಮೂರ್ತಿಗಳು
#ಕಮ೯ಚಾರಿ_ದಿನ_ಪತ್ರಿಕೆ
#ಕೊನೆಯವರೆಗೂ_ಕಾಂಗ್ರೇಸ್_ಪಕ್ಷದ_ಕಟ್ಟಾಳು.
#ಬಿಜೆಪಿ_ಸೇರಿದ್ದ_ಶ್ರೀಕಂಠದತ್ತ_ಒಡೆಯರಿಗೆ_ಪಂಡಿತರು_ಮಾಡಿದ_ಸಾಷ್ಟಾಂಗ_ನಮಸ್ಕಾರ.
#ಕಾಂಗ್ರೇಸ್_ಸಭೆಯಲ್ಲಿ_ಕಾಗೋಡರ_ಕೋಪಾತಾಪ .
ಟಿ.ಡಿ. ಕೆ. ಪಂಡಿತರು ಕಾಂಗ್ರೇಸ್ ಪರವಾಗಿದ್ದರೂ ಅವರ ಪರಮಾಪ್ತ ಮಿತ್ರರಾದ ಪಿ.ಪುಟ್ಟಯ್ಯ ಮತ್ತ ಎಸ್.ಎಸ್. ಕುಮುಟಾ ಸಮಾಜವಾದಿಗಳಾಗಿದ್ದರೂ ಅವರ ಗೆಳೆತನಕ್ಕೆ ಯಾವುದೇ ಅಡೆ ತಡೆ ಆಗದೆ ತ್ರಿಮೂರ್ತಿಗಳಂತೆ ಉಳಿದರು.
ಕನ್ನಡ ಭಾಷೆ ಉಳಿಯ ಬೇಕು ಅನ್ನುವ ವಿಚಾರದಲ್ಲೂ ಈ ಮೂವರು ನಡೆಸಿದ ಜನ ಜಾಗೃತಿ - ಪ್ರತಿಭಟನೆ - ರಾಜ್ಯಮಟ್ಟದ ಸಮಾವೇಶವೇ ಇದಕ್ಕೆ ಸಾಕ್ಷಿ.
ಅತ್ಯುತ್ತಮ ಬರವಣಿಗೆ ಶೈಲಿ ದೈವದತ್ತವಾಗಿ ಪಂಡಿತರಿಗೆ ಬಂದಿತ್ತು ಅದನ್ನು ಅವರು ಸಾಗರದಲ್ಲಿ ಪ್ರಾರಂಬಿಸಿದ ಕಮ೯ಚಾರಿ ಕನ್ನಡ ದಿನ ಪತ್ರಿಕೆಯಲ್ಲಿ ಚೆನ್ನಾಗಯೇ ಬಳಸಿಕೊಂಡರು, ದಿನಕ್ಕೊಂದು ಸುದ್ದಿಯ ಆಕರ್ಷಕ ಸಂಕ್ಷಿಪ್ತ ತಲೆ ಬರಹದಲ್ಲೇ ಎಲ್ಲಾ ವಿಷಯಗಳನ್ನು ನವಿರು ಹಾಸ್ಯದಲ್ಲಿ ಪದಬಂದ ಶೈಲಿಯಲ್ಲಿ ಪ್ರಕಟವಾಗುವುದನ್ನು ವಾಚಕರು ಕಾಯುತ್ತಿದ್ದರು ಅದು ಹೆಚ್ಚು ಚರ್ಚೆ ಆಗುತ್ತಿತ್ತು.
ಕಮ೯ಚಾರಿ ದಿನಪತ್ರಿಕೆ ಕಛೇರಿ ಸಾಗರದ ಬಿ.ಹೆಚ್. ರಸ್ತೆಯ ಲಕ್ಷ್ಮೀ ಲಾಡ್ಜ್ ಎದುರಿನ ಪುತ್ತೂರಾಯರ ಬಿಲ್ದಿಂಗ್ ನ ಮೊದಲ ಅಂತಸ್ತಿನಲ್ಲಿತ್ತು ಅದೇ ಕಟ್ಟಡದ ನೆಲ ಅಂತಸ್ತಿನಲ್ಲಿ ಅವರ ಮುದ್ರಣಾಲಯ ಇತ್ತು.
ಕಾ೦ಗ್ರೇಸ್ ಪಕ್ಷದ ಕಟ್ಟಾಳಾಗಿದ್ದ ಅವರು, ಆಗಷ್ಟೆ ಬಿಜೆಪಿ ಸೇರಿದ್ಧ ಮೈಸೂರಿನ ಮಹಾರಾಜ ಶ್ರೀಕಂಠದತ್ತ ಒಡೆಯರ್ ಸಾಗರಕ್ಕೆ ಬಂದಿದ್ದಾಗ ಗಾಂಧೀ ಮೈದಾನದಲ್ಲಿ ಸಾರ್ವಜನಿಕ ಸಭೆ ವ್ಯವಸ್ಥೆ ಆಗಿತ್ತು. ಆ ಬಿ.ಜೆ.ಪಿ. ಪಕ್ಷದ ವೇದಿಕೆಗೆ ಹೋಗಿ ಪಂಡಿತರು ಶ್ರೀಕಂಠ ದತ್ತ ಒಡೆಯರ್ ಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದು ಅವತ್ತು ಸಾಗರ ಪೇಟೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿತ್ತು.
ಬಿಜೆಪಿಯವರಿಗೆ ಖುಷಿ ತಂದ ಈ ಘಟನೆ ಕಾಂಗ್ರೇಸ್ ನವರಿಗೆ ಕೋಪ ತರಿಸಿತ್ತು, ಕೆಲ ದಿನದ ನಂತರ ಸಾಗರದ ಕಾಂಗ್ರೇಸ್ ಪಕ್ಷದ ಕಛೇರಿ ಗಾಂಧಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಕಾಗೋಡು ತಿಮ್ಮಪ್ಪನವರು ಪಂಡಿತರ ಈ ನಡೆ ಬಗ್ಗೆ ಕೋಪಾ ತಾಪದಿಂದ ಆಕ್ಷೇಪಣೆ ವ್ಯಕ್ತಪಡಿಸಿದರು ಅವರ ಭಾಷಣ ಮುಗಿಸಿದ ನಂತರ ಪಂಡಿತರು ಉತ್ತರಿಸಲು ಎದ್ದು ನಿಂತರು.... ಅವರ ಮಾತಿನಲ್ಲಿ ನಾಡಿನ ರಾಜವಂಶಸ್ಥರಿಗೆ ಸಾಗರ ತಾಲೂಕಿನ ಸಮಸ್ತ ಪ್ರಜೆಗಳ ಪರವಾಗಿ ಸಲ್ಲಿಸಿದ ಗೌರವವೇ ತಮ್ಮ ಸಾಷ್ಟಾಂಗ ನಮಸ್ಕಾರ ಎನ್ನುವ ಸಾರಾಂಶದಲ್ಲಿ ರಾಜಕೀಯ ಪಕ್ಷಗಳು ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗಬೇಕು, ಗೆಳೆತನ - ಸಂಬಂದಗಳಿಗೆ - ಉಪಕಾರ ಮಾಡಲು ಪ್ರತಿಯೊಬ್ಬರೂ ಪಕ್ಷಾತೀತವಾಗಿರಬೇಕು .... ಎಂಬ ಅವರ ಭಾಷಣದ ಅಂತ್ಯದಲ್ಲಿ ತಾನು ಮಾಡಿದ್ದು ತಪ್ಪಾ? ತಪ್ಪು ಅಂತ ಸಭೆ ನಿರ್ದರಿಸಿದರೆ ತಾವು ಮುಂದೆಂದೂ ಗಾಂಧಿ ಮಂದಿರದ ಮೆಟ್ಟಲು ಏರುವುದಿಲ್ಲ ಅಂದಾಗ ಇಡೀ ಸಭೆಯೇ ಪಂಡಿತರ ಪರವಾಗಿ ದೀರ್ಘ ಕರತಾಡನ ಮಾಡಿ ಬೆಂಬಲ ಸೂಚಿಸಿತು, ಹಿರಿಯ ಕಾಂಗ್ರೇಸ್ ಮುಖಂಡರೂ ಪಂಡಿತರ ಬೆಂಬಲಿಸಿದರು ಇದರಿಂದ ಕಾಗೋಡರೂ ಅವರ ಅಪರೂಪದ ಮುಗುಳುನಗೆ ಸೂಸಿ ಪಂಡಿತರ ವಾದ ಒಪ್ಪಿ ಬಿಜೆಪಿಗೆ ಸೇರಿದ್ದ ಶ್ರೀಕಂಠ ದತ್ತ ಒಡೆಯರ್ ಗೆ ಕಾಂಗ್ರೇಸ್ ಪಂಡಿತರು ಮಾಡಿದ ಸಾಷ್ಟಾಂಗ ನಮಸ್ಕಾರದ ವಿಷಯ ಮುಕ್ತಾಯ ಮಾಡಿ ಮುಂದಿನ ವಿಷಯದ ಚರ್ಚೆಗೆ ಹೊರಳಿದರು.
Comments
Post a Comment