Blog number 1497. ತಪ್ಪು ಪತ್ರಿಕಾ ವರದಿಗಳು " ಕುರಿ ಮೇಲೆ ಆನೆ ಸವಾರಿ ಮಾಡಿತು" ಎಂಬಂತ ಸಾಮಾನ್ಯ ಜ್ಞಾನವೇ ಇಲ್ಲದ ವರದಿಗಾರರು.
# ಇದು ಇವತ್ತಿನ ಎಲ್ಲಾ ಪತ್ರಿಕೆಯಲ್ಲಿ ಬಂದಿರುವ ವರದಿ !? ಹೀಗೂ ಉಂಟೆ?
ಇದು ಸಾಗರ ತಾಲ್ಲೂಕಿನ ಶಿರವಂತೆ ಎಂಬಲ್ಲಿ M 80 ಎಂಬ ಮೊಪೆಡ್ನನ್ನ ತಪಾಸಣೆ ಮಾಡಿದಾಗ ಅದರಲ್ಲಿದ್ದ ಮಧ್ಯವನ್ನ ವಶ ಪಡಿಸಿಕೊಂಡ 6 ಮೇ 2018ರ ಪತ್ರಿಕಾ ವರದಿ.
ಈ ವರದಿ ಸಂಬಂದ ಪಟ್ಟ ಅಬಕಾರಿ ಇಲಾಖೆ ನೀಡಿದ ವರದಿ ಇರಬಹುದು ಇಲ್ಲಿ ವಶಪಡಿಸಿಕೊಂಡ ಮಧ್ಯದ ಪ್ರಮಾಣ 17 ಸಾವಿರದ 280 ಲೀಟರ್! ಇದು ಸಾಧ್ಯವಾ ಮೊಪೆಡ್ನಲ್ಲಿ 2 ಕ್ಯಾನ್ ಇಟ್ಟು ಕೊಂಡರು 40 ಲೀಟರ್ ಸಾಗಾಣಿಕೆ ಕಷ್ಟ ಆದರೆ ಇಲ್ಲಿ ವರದಿ ಆಗಿರುವುದು ಒಂದು ಲಾರಿ ಟ್ಯಾಂಕರ್ ಸಾಗಾಣಿಕೆ ಮಾಡುವಷ್ಟು ಮಧ್ಯ.
ಇದರ ಬಗ್ಗೆ ಸ್ಪಷ್ಟನೆ ನೀಡುವವರಾರು?
Comments
Post a Comment