#ಸ್ವತಃ_ಕನಿಷ್ಟ_ಪೇಸ್_ಬುಕ್_ವಾಟ್ಸ್_ಅಪ್_ಬಳಸಲು_ಬಾರದ_ಜನಪ್ರತಿನಿದಿಗಳ_ನಡುವೆ_ಇದನ್ನೆಲ್ಲ_ಬಳಸಿ_ಜನರಿಗೆ_ಹತ್ತಿರ_ಆಗಿರುವ
#ಮOತ್ರಿ_ಸುರೇಶ್_ಕುಮಾರ್
27th may 2020.
ಕಂಪ್ಯೂಟರ್ ಇರಲಿ ನಿತ್ಯ ದಿನ ಪತ್ರಿಕೆನೇ ಓದದ ಶಾಸಕರು ಸಂಸದರೇ ಹೆಚ್ಚು ಜನ,ಇವರಿಗೆಲ್ಲ ಪ್ರತಿ ವಷ೯ ಹೆಚ್ಚು ಬೆಲೆಯ ಲಾಪ್ ಟಾಪ್ ಸಕಾ೯ರ ನೀಡುತ್ತದೆ, 5 ವಷ೯ ದಿನಪತ್ರಿಕೆ ಬಿಲ್ ಸಕಾ೯ರ ನೀಡುತ್ತದೆ.
ಅದೇನೇ ಇರಲಿ ಅತಿ ಹೆಚ್ಚು ಬೆಲೆಯ ಮೊಬೈಲ್ ಕೈನಲ್ಲಿ ಶೋ ಮಾಡುತ್ತಿರುತ್ತಾರೆ ಆದರೆ ಅದನ್ನ ಬಳಸುವುದೂ ಕಲಿತಿಲ್ಲ ಇವರ ಪೇಸ್ ಬುಕ್, ವಾಟ್ಸ್ ಅಪ್ ಪ್ರತಿ ತಿಂಗಳಿಗೆ 20 ಸಾವಿರ ಪಡೆದು ಬೇರಾರೋ ನಿವ೯ಹಿಸುತ್ತಾರೆ.
ಇದರಿಂದ ಇವರಿಗೆ ಇವತ್ತಿನ ಸೋಷಿಯಲ್ ಮೀಡಿಯಾದಲ್ಲಿ ಏನು ನಡೆಯುತ್ತದೆಂಬ ಜ್ಞಾನ ಇರುವುದಿಲ್ಲ ಬೇರಾರೋ ಇವರ ಆಪ್ತರು ತಿಳಿಸದೆ ಇವರಿಗೆ ತಿಳಿಯುವುದಿಲ್ಲ.
ಇದೆಲ್ಲ ತಿಳಿಯದ ಇವರು ಈಗಿನ ಕಾಲದ ಅನಕ್ಷರಸ್ಥರೆಂದರೆ ತಪ್ಪಾಗದು.
ಇದರ ಮದ್ಯ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಸೋಷಿಯಲ್ ಮೀಡಿಯಾದ ಮುಖಾಂತರ ರಾಜ್ಯದ ಜನರಿಗೆ ಅತಿ ಸಮೀಪ ಆಗಿದ್ದಾರೆ.
ರಾಜ್ಯ ಸಕಾ೯ರದ ಪ್ರತಿ ನಿತ್ಯದ ಕೆಲಸ ಮಾದ್ಯಮಕ್ಕೆ ಪರಿಣಾಮಕಾರಿಯಾಗಿ ತಲುಪಿಸುತ್ತಾರೆ.
ಸಜ್ಜನತೆ, ಸುಸ೦ಸ್ಕೃತ ನಡತೆ ಮತ್ತು ಮಾತಿನಿಂದ ಇವರ ವ್ಯಕ್ತಿತ್ವಕ್ಕೆ ವಿಶೇಷ ಗೌರವ ಉoಟಾಗಿದೆ, ಇವತ್ತು ಇವರು ಹಾಕಿದ Post ನ ಪೋಟೋ ಇಲ್ಲಿ ಲಗತ್ತಿಸಿದೆ, 7ನೇ ತರಗತಿಯ ಪುಟಾಣಿ ಒಬ್ಬಳು ಶಿಕ್ಷಣ ಸಚಿವರನ್ನ ಮಾತಾಡಿಸಿದ ಸುದ್ದಿ ಅವರು ಪೇಸ್ ಬುಕ್ ಲ್ಲಿ ಬರೆದಿದ್ದಾರೆ.
ಜನ ಪ್ರತಿನಿದಿಗಳು ಸುಲಭವಾಗಿ ಕಲಿತು ಕೊಳ್ಳಬಹುದಾದ ಮೊಬೈಲ್ ಆಪ್ ಗಳನ್ನು ಕಲಿತರೆ ಅವರ ನಿತ್ಯ ಆಡಳಿತ ಸುಲಭ ಆದರೂ ಕಲಿಯದವರೇ ಅನೇಕರು, ಮುಂದಿನ ದಿನದಲ್ಲಿ ಗಮನಿಸಿ ನಿಮ್ಮ ಯಾವ ಜನ ಪ್ರತಿನಿದಿಗೆ ಇದೆಲ್ಲ ಗೊತ್ತಿದೆ ಅಂತ.
Comments
Post a Comment