#ರೂಹಪ್ಸಾ_ROOHAFSA
#ಕಾನ್ಸೆಂಟ್ರೆಡ್_ಹಬ೯ಲ್_ಸ್ಕಾಷ್
#ಬೇಸಿಗೆಯ_ದಿನಕ್ಕೆ_ತಂಪು_ಔಷದಿ_ಪಾನಿಯಾ.
ಭಾರತ, ಪಾಕಿಸ್ಥಾನ, ಬಾಂಗ್ಲಾದೇಶಗಳಲ್ಲಿ ಉತ್ಪಾದನಾ ಘಟಕಗಳಿರುವ ಹಮ್ದದದ್೯ ಲ್ಯಾಬೋರೇಟರಿ ಸಂಸ್ಥೆಯ ಈ ಉತ್ಪನ್ ಇವತ್ತಿಗೂ ಬೇಸಿಗೆಯಲ್ಲಿ ಅತ್ಯುತ್ತಮ ಪಾನೀಯ.
1906 ರಲ್ಲಿ ಹಕೀಮ್ ಹಾಪೀಜ್ ಅಬ್ದುಲ್ ಎಂಬುವವರು ದೆಹಲಿಯಲ್ಲಿನ ಬೇಸಿಗೆಯಲ್ಲಿ ಬಳಲುವ ಜನರ ದಾಹ ತಣಿಸಲು ಯುನಾನಿ ಔಷದ ಮೂಲದ ಈ ಕಾನ್ಸೆಂಟ್ರೇಟೆಡ್ ಹರ್ಬಲ್ ಸ್ಕಾಷ್ ತಯಾರಿಸುತ್ತಾರೆ ಇದರಲ್ಲಿ ವಿವಿದ ಗಿಡ ಮೂಲಿಕೆ, ವಿವಿದ ಹೂವು, ವಿವಿದ ತರಕಾರಿಗಳ ಅಂಶಗಳಿದೆ.
1910 ರಲ್ಲಿ ಇದಕ್ಕೆ ಲೇಬಲ್ ಡಿಸೈನ್ ಮಿಜಾ೯ ನೂರ್ ಹಕೀಮ್ ಮಾಡುತ್ತಾರೆ.
ಸ್ವಾತಂತ್ರ ನಂತರ ದೇಶ ವಿಭಜನೆ ಆದಾಗ ಇವರ ದೊಡ್ಡ ಮಗ ಹಕೀಮ್ ಅಬ್ದುಲ್ ಹಮೀದ್ ಭಾರತದಲ್ಲಿ ಉಳಿಯುತ್ತಾರೆ, ಸಣ್ಣ ಭಾಗ ಹಕೀಮ್ ಮೊಹಮದ್ ಸೈಯದ್ ಪಾಕಿಸ್ಥಾನದಲ್ಲಿ ನೆಲೆಸುತ್ತಾರೆ, ಮಗಳ ಸಂಬಂದಿ ಬಾಂಗ್ಲಾದೇಶದಲ್ಲಿ ಹೀಗೆ ಮೂರು ದೇಶದಲ್ಲಿ ಹಮ್ದರ್ದ ಲಾಬೋರೇಟರಿ ಆಯಾ ದೇಶದಲ್ಲಿ ದೊಡ್ಡ ಕೈಗಾರಿಕೆ ಆಗಿ ಬೆಳೆದಿದೆ.
ಮುಸ್ಲಿಂ ರ ರಮ್ದಾನ್ ಹಬ್ಬದಲ್ಲಿ ಇದರ ಬಳಕೆ ಹೆಚ್ಚು, ಪ್ರತಿ ಬೇಸಿಗೆಯಲ್ಲಿ ಇದು ಉತ್ತರ ಭಾರತದಲ್ಲಿ ಬಹು ಬೇಡಿಕೆಯ ಮನೆ ಮನೆಯಲ್ಲಿ ತಯಾರಿಸಿ ಕುಡಿಯಬಹುದಾದ ತ೦ಪು ಪಾನಿಯ
ನಾನು ಈಗ ಬಿಸಿಲ ಜಳದ ಸಂಜೆ ಇದನ್ನು ಕುಡಿದಾಗಲೇ ಅನುಭವ ಆಗಿದ್ದು ಇದು ಉತ್ಕೃಷ್ಟ ತಂಪು ಪಾನಿಯ ಅಂತ.
ಆನ್ ಲೈನ್ ನಲ್ಲಿ, ಎಲ್ಲಾ ಅಂಗಡಿಗಳಲ್ಲೂ ಲಭ್ಯವಿದೆ ಆದರೆ ನೂರು ವರ್ಷದ ಇತಿಹಾಸ ಇರುವ ಹಮ್ ದದ್೯ ಲಾಬೋರೇಟರಿಯದನ್ನೆ ಕೇಳಿ ಖರೀದಿ ಮಾಡಿ.
Comments
Post a Comment